ಕೇಂದ್ರ ಸರಕಾರ ನೀಡುವ 69ನೇ ರಾಷ್ಟ್ರೀಯ ಚಲನಚಿತ್ರ (National Award) ಪ್ರಶಸ್ತಿ ಘೋಷಣೆಯಾಗಿದೆ. ಅತ್ಯುತ್ತಮ ಪ್ರಾದೇಶಿಕ ಚಿತ್ರಕ್ಕಾಗಿ ಮೀಸಲಿಟ್ಟ ರಾಷ್ಟ್ರೀಯ ಪ್ರಶಸ್ತಿಯು ಈ ಬಾರಿ ರಕ್ಷಿತ್ ಶೆಟ್ಟಿ (Rakshit Shetty) ನಟನೆಯ, ಕಿರಣ್ ರಾಜ್ ನಿರ್ದೇಶನದ ಚಾರ್ಲಿ 777 (Charlie 777) ಚಿತ್ರಕ್ಕೆ ದೊರೆತಿದೆ. ನಾನ್ ಫೀಚರ್ ಫಿಲ್ಮ್ ವಿಭಾಗದಲ್ಲಿ ಕನ್ನಡದ ಅನಿರುದ್ಧ ಜತ್ಕರ್ ನಿರ್ದೇಶನದ ಬಾಳೆ ಬಂಗಾರ (Bale bangara ) ಪ್ರಶಸ್ತಿ ಪಡೆದಿದೆ. ಅತ್ಯುತ್ತಮ ಸಿನಿಮಾ ಪ್ರಶಸ್ತಿಯು ಪಾಲಾಗಿದೆ. ಉಳಿದಂತೆ ಪ್ರಶಸ್ತಿಗಳು ಘೋಷಣೆ ಆಗುತ್ತಿವೆ. ಭಾರತದಲ್ಲಿ ತಯಾರಾಗುವ ಅಷ್ಟೂ ಸಿನಿಮಾಗಳೂ ಈ ಸ್ಪರ್ಧೆಗೆ ಸ್ಪರ್ಧಿಸಬಹುದಾಗಿದ್ದು, ಜೊತೆಗೆ ಪ್ರಾದೇಶಿಕ ಸಿನಿಮಾಗಳಿಗೂ ಪ್ರತ್ಯೇಕವಾಗಿ ಪ್ರಶಸ್ತಿಗಳು ಮೀಸಲಿವೆ.
Advertisement
ಕೋವಿಡ್ ಕಾರಣದಿಂದಾಗಿ 2021ರಲ್ಲಿ ರಿಲೀಸ್ ಆಗಿರುವ ಚಿತ್ರಗಳಿಗೆ (Cinema) ಪ್ರಶಸ್ತಿ ಘೋಷಣೆ ಆಗಿರಲಿಲ್ಲ. ಇದೀಗ ಆ ವರ್ಷ ರಿಲೀಸ್ ಆಗಿರುವ ಚಿತ್ರಗಳಿಗೆ ಮಾತ್ರ ಪ್ರಶಸ್ತಿ ಘೋಷಣೆ ಮಾಡಲಾಗಿದೆ. 2022ನೇ ಸಾಲಿನ ಚಿತ್ರಗಳನ್ನು ಇನ್ನೂ ಆಹ್ವಾನಿಸಿಲ್ಲ. ಕೇಂದ್ರ ಸರಕಾರ ಇದೇ ಮೊದಲ ಬಾರಿಗೆ ತಡವಾಗಿ ಪ್ರಶಸ್ತಿ ಘೋಷಣೆ ಮಾಡುತ್ತಿದೆ.
Advertisement
Advertisement
ಸಿನಿಮಾ ರಂಗಕ್ಕೆ ನೀಡುವ ದೇಶದ ಪ್ರತಿಷ್ಠಿತ ಪ್ರಶಸ್ತಿ ಇದಾಗಿದ್ದು, ರಾಷ್ಟ್ರಪತಿಗಳೇ ಈ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಾರೆ. ರಾಷ್ಟ್ರೀಯ ಪ್ರಶಸ್ತಿಗಳ ಚಿತ್ರಗಳಿಗೆ ಬೇಡಿಕೆ ಇದ್ದೇ ಇರುತ್ತದೆ. ಹಾಗಾಗಿ ಸಾಕಷ್ಟು ಚಿತ್ರಗಳು ಸ್ಪರ್ಧಾ ಕಣದಲ್ಲಿ ಇರಲಿವೆ. ಅಲ್ಲದೇ, ಪ್ರಾದೇಶಿಕ ಸಿನಿಮಾಗಳಿಗೆ ನೀಡುವ ಪ್ರಶಸ್ತಿಗಳಿಗೂ ತನ್ನದೇ ಆದ ಘನತೆ ಇದೆ.
Advertisement
Web Stories