ಬೆಂಗಳೂರು : ಶಿಕ್ಷಣ ಕ್ಷೇತ್ರ ಮತ್ತು ಕೌಶಲ್ಯಾಭಿವೃದ್ದಿ ಕ್ಷೇತ್ರದಲ್ಲಿ ಕರ್ನಾಟಕದ ಮಾಡೆಲ್ ಇಡೀ ದೇಶದ ಮಾಡೆಲ್ ಆಗಲಿದೆ ಅಂತ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪರಿಶೀಲನಾ ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಕರ್ನಾಟಕದ ಮಾಡೆಲ್ ಗೆ ಶಬ್ಬಾಶ್ ಗಿರಿ ಕೊಟ್ಟರು.
Advertisement
Together with @drashwathcn ji, @BCNagesh_bjp ji, officials of the Govt. of Karnataka and senior officials of @EduMinOfIndia and @MSDESkillIndia overviewed a presentation on the implementation of NEP 2020 in Karnataka and the overall learning & skills’ landscape in the state. pic.twitter.com/kqUSwGWtBl
— Dharmendra Pradhan (@dpradhanbjp) April 28, 2022
Advertisement
ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ದೇಶದಲ್ಲಿ ಮೊದಲ ರಾಜ್ಯವಾಗಿ ಕರ್ನಾಟಕ ಅನುಷ್ಠಾನ ಮಾಡಿದೆ. ಅನುಷ್ಠಾನ ಮಾಡಿ ಅತ್ಯುತ್ತಮವಾಗಿ ಜಾರಿ ಮಾಡಿದೆ. ಕರ್ನಾಟಕದ ವ್ಯವಸ್ಥೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಅಂತ ತಿಳಿಸಿದರು. ಕರ್ನಾಟಕದಲ್ಲಿ 1.5 ಕೋಟಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 3.5 ಲಕ್ಷ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಕೌಶಲ್ಯ ತರಬೇತಿ ನೀಡುವಂತೆ ಸಲಹೆ ನೀಡಿದ್ದೇನೆ ಅಂತ ತಿಳಿಸಿದರು.
Advertisement
ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಲ್ಲಿ ಕರ್ನಾಟಕ ಸರಿಯಾದ ಮಾರ್ಗದಲ್ಲಿ ನಡೆಯುತ್ತಿದೆ. ಕರ್ನಾಟಕ ಸಾಧನೆ ಸಂತೋಷ ಮತ್ತು ತೃಪ್ತಿ ತಂದಿದೆ ಅಂತ ತಿಳಿಸಿದರು. ಕರ್ನಾಟಕ ಕೇವಲ ರಾಷ್ಟ್ರೀಯ ಶಿಕ್ಷಣ ನೀತಿ ಮಾತ್ರವಲ್ಲ ಕೌಶಲ್ಯಾಭಿವೃದ್ದಿಯಲ್ಲೂ ಅತ್ಯುತ್ತಮ ಕೆಲಸ ಮಾಡಿದೆ. ಡಿಜಿಟಲ್ ಫ್ಲಾಟ್ ಫಾರ್ಮ್ ನಲ್ಲೂ ಮುಂದಿದೆ. ಸ್ಕಿಲ್ ಡೆವಲಪ್ಮೆಂಟ್, ಉದ್ಯೋಗ ಸೃಷ್ಟಿಯಲ್ಲೂ ಉತ್ತಮ ಕೆಲಸ ಮಾಡುತ್ತಿದೆ ಅಂತ ಶ್ಲಾಘಿಸಿದರು. ಕರ್ನಾಟಕ ಸರ್ಕಾರ ಪ್ರಧಾನಿ ಮೋದಿಯವರ ಕನಸು ಸಾಕಾರ ಮಾಡುತ್ತಿದೆ. ಬೊಮ್ಮಾಯಿ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿಯಲ್ಲಿ ಕರ್ನಾಟಕದ ಮಾಡೆಲ್ ದೇಶದ ಮಾಡೆಲ್ ಆಗಲಿದೆ ಎಂದರು.
Advertisement
Also suggested ways to integrate more aspects of the NEP in learning & skilling, including promoting education in mother tongue & building capacity of 3.5 lakh teachers in the state.
Karnataka is moving ahead towards empowering the 2.5 cr. populace between 3 to 25 years of age. pic.twitter.com/YVcp91h0eV
— Dharmendra Pradhan (@dpradhanbjp) April 28, 2022
ಕಲಿಕಾ ಚೇತರಿಕೆಗೂ ಶಹಬ್ಬಾಸ್ ಗಿರಿ
ಕೊರೊನಾ ಬಳಿಕ ಮಕ್ಕಳ ಶೈಕ್ಷಣಿಕ ವ್ಯತ್ಯಾಸ ಸರಿ ಮಾಡಲು ರಾಜ್ಯ ಸರ್ಕಾರ ಜಾರಿಗೆ ತರುತ್ತಿರೋ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಶ್ಲಾಘಿಸಿದರು. ಕರ್ನಾಟಕದ ಮಾಡೆಲ್ ಅತ್ಯುತ್ತಮವಾಗಿದೆ. ಈ ಮಾಡೆಲ್ ಅನ್ನ ಎಲ್ಲಾ ರಾಜ್ಯಗಳು ಅನುಸರಿಬೇಕು. ದೆಹಲಿಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇನೆ ಅಂತ ತಿಳಿಸಿದರು. ರಾಜ್ಯ ಸರ್ಕಾರದ ಕಾರ್ಯವನ್ನು ಹೊಗಳಿದರು.