ಇದು ಒಂದಲ್ಲ ಎರಡಲ್ಲ 6 ಲಕ್ಷ ವಿದ್ಯಾರ್ಥಿಗಳ ಸಮಸ್ಯೆ!

Public TV
1 Min Read
National Education Policy 2022

ಬೆಂಗಳೂರು: ಇದು ಒಂದಲ್ಲ ಎರಡಲ್ಲ 6 ಲಕ್ಷ ವಿದ್ಯಾರ್ಥಿಗಳ (Students) ಸಮಸ್ಯೆ, ರಾಜ್ಯದ ಮೂಲೆ ಮೂಲೆಯ ಪೋಷಕರಿಗೂ ಗೊಂದಲದ ಪರಿಸ್ಥಿತಿ. ಹೌದು 2022ರ ರಾಷ್ಟ್ರೀಯ ಶಿಕ್ಷಣ ನೀತಿಯಿಂದ (National Education Policy 2022)  6 ಲಕ್ಷ ಮಕ್ಕಳ ದಾಖಲಾತಿಗೆ ಗೊಂದಲ ಉಂಟಾಗಿದೆ.

2022ರ ನವೆಂಬರ್ ತಿಂಗಳಲ್ಲಿ ಶಿಕ್ಷಣ ಇಲಾಖೆ ಹೊರಡಿಸಿದ ಆದೇಶದ ಪ್ರಕಾರ 2025/26ನೇ ಸಾಲಿಗೆ ಒಂದನೇ ತರಗತಿಗೆ ದಾಖಲಾಗುವ ಮಕ್ಕಳಿಗೆ 6 ವರ್ಷ ತುಂಬಿರಬೇಕು. ಜೂ.1ನೇ ತಾರೀಖಿಗೆ ಯಾವ ಮಗುವಿಗೆ 6 ವರ್ಷ ತುಂಬಿರುತ್ತೋ ಅಂತಹ ಮಕ್ಕಳಿಗೆ ಮಾತ್ರ ಒಂದನೇ ತರಗತಿ ದಾಖಲಾತಿ ಕೊಡಬೇಕು ಅನ್ನೋ ನಿಯಮ ಜಾರಿಗೆ ತಂದಿದೆ. ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿ ಮತ್ತೆ ಭೂಕಂಪ – ಆಸ್ಪತ್ರೆ ಕಟ್ಟಡಗಳೇ ನಾಮಾವಶೇಷ, ರಸ್ತೆಯಲ್ಲೇ ರೋಗಿಗಳಿಗೆ ಚಿಕಿತ್ಸೆ

ಈಗ ಹೊಸದಾಗಿ ದಾಖಲಾಗೋ ಮಕ್ಕಳಿಗೆ ಇದರಿಂದ ಸಮಸ್ಯೆ ಆಗುವುದಿಲ್ಲ. ಅದ್ರೇ ಈಗಾಗಲೇ ಪ್ರೀಕೆಜಿ, ಎಲ್‍ಕೆಜಿಗೆ ಸೇರಿ 3 ಪೂರ್ವ ಪ್ರಾಥಮಿಕ ಶಿಕ್ಷಣ ಮುಗಿಸಿರೋ ಮಕ್ಕಳಿಗೆ ಸಮಸ್ಯೆ ಆಗ್ತಿದೆ. ಆಗಿನ ನಿಯಮದಂತೆ ಮಕ್ಕಳನ್ನ ಪ್ರೀ ಕೆಜಿಗೆ ದಾಖಲು ಮಾಡಿದ್ವಿ, ಈಗ ನಮ್ಮ ಮಕ್ಕಳು 6 ವರ್ಷಕ್ಕಿಂತ ಕಡಿಮೆ ಇದ್ದಾರೆ, ಈಗ ಮತ್ತೇ ಅದೇ ತರಗತಿಗೆ ಸೇರಿಸಿದ್ರೇ ಮಕ್ಕಳು ಮಾನಸಿಕವಾಗಿ ಕುಗ್ಗುತ್ತಾರೆ. ರಾಜ್ಯದಲ್ಲಿ ಈ ರೀತಿ 6 ಲಕ್ಷ ಮಕ್ಕಳಿದ್ದಾರೆ ಅಂತಿದ್ದಾರೆ ಪೋಷಕರು.

ಒಂದು ವರ್ಷ ಮತ್ತೆ ಅದೇ ತರಗತಿಯಲ್ಲಿ ಓದಿಸಬೇಕಾ? ಇಲ್ಲವೇ ಮಕ್ಕಳನ್ನ ಮನೆಯಲ್ಲಿಟ್ಟು ಕೊಳ್ಳಬೇಕಾ? ಯಾವ ನಿರ್ಧಾರಕ್ಕೂ ಬರದಂತಹ ವಾತಾವರಣದಲ್ಲಿ ಪೋಷಕರಿದ್ದಾರೆ. ಇತರೆ ರಾಜ್ಯಗಳಲ್ಲಿ ನೀಡಿರುವಂತೆ ಇಲ್ಲೂ ಸಡಿಲಿಕೆ ನೀಡಿ ಅಂತಾ ಸರ್ಕಾರದ ಮುಂದೆ ಮನವಿ ಮಾಡಿ ಮಾಡಿ ಕಾಯ್ತಿದ್ದಾರೆ.

ಒಂದನೇ ತರಗತಿಗೆ ಮಕ್ಕಳಿಗೆ ನಿಗದಿ ಮಾಡಿರುವ ವಯೋಮಿತಿ ವಿಚಾರದಲ್ಲಿಯೂ ಇದೇ ಗೊಂದಲ ಶುರು ಆಗಿದೆ. ಒಂದನೇ ತರಗತಿಗೆ ಮಗುವಿಗೆ ಅಡ್ಮಿಷನ್ ಕೊಡ್ತಿಲ್ಲ ಅನ್ನೋದು ರಾಜ್ಯದ ಲಕ್ಷಾಂತರ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕೇಂದ್ರ ನೌಕರರಿಗೆ ಯುಗಾದಿ ಗಿಫ್ಟ್ – ಶೇ.2 ರಷ್ಟು ಡಿಎ ಏರಿಕೆ

Share This Article