ಚಿಕ್ಕಮಗಳೂರು: ನೀರಿನ ಮಧ್ಯೆ ಬಂಡೆ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ನದಿಗೆ ಬಿದ್ದು ಕೊಚ್ಚಿಹೋಗಿದ್ದ ಯುವಕನ ಮೃತದೇಹ 11 ದಿನಗಳಾದರೂ ಪತ್ತೆಯಾಗಿಲ್ಲ.
ಕಿರಣ್ ನದಿಯಲ್ಲಿ ಕೊಚ್ಚಿ ಹೋಗಿ 9 ದಿನಗಳ ಬಳಿಕ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‍ಡಿಆರ್ ಎಫ್) ತಂಡ ಬಂದು ಯುವಕನಿಗಾಗಿ ಹುಡುಕಾಟ ನಡೆಸುತ್ತಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸಾ ಸಮೀಪದ ಅಂಬುತೀರ್ಥ ಜಲಪಾತಕ್ಕೆ ಜುಲೈ 26ರಂದು ಮಂಗಳೂರು ಸಮೀಪದ ತುಂಬೆ ನಿವಾಸಿ ಎಂಜಿನಿಯರ್ ಕಿರಣ್ ಕೊಟ್ಯಾನ್ ತನ್ನ 12 ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿದ್ದನು. ಆಗ ಅಂಬುತೀರ್ಥದ ಜಲಪಾತದ ಬಳಿ ಬಂಡೆ ಮೇಲೆ ಸೆಲ್ಫಿ ತೆಗೆದು ಕೊಳ್ಳುವಾಗ ಕಾಲು ಜಾರಿಗೆ ನದಿಗೆ ಬಿದ್ದು ಕೊಚ್ಚಿ ಹೋಗಿದ್ದನು.
Advertisement
Advertisement
ಪೊಲೀಸರು, ಸ್ಥಳೀಯರು ಹಾಗೂ ಸಂಬಂಧಿಕರು ಕಿರಣ್ ಮೃತದೇಹಕ್ಕಾಗಿ ಶೋಧ ನಡೆಸಿದ್ದರು ಸಿಕ್ಕಿರಲಿಲ್ಲ. ಕಳೆದ 11 ದಿನಗಳಿಂದಲೂ ಸ್ಥಳೀಯರು ಹಾಗೂ ಪೊಲೀಸರು ನದಿಯ ದಡದಲ್ಲಿ ಮೃತದೇಹ ಸಿಲುಕಿರಬಹುದೆಂದು ಶೋಧ ನಡೆಸುತ್ತಿದ್ದರು. ಆದರೆ ಮೃತದೇಹ ಮಾತ್ರ ಪತ್ತೆಯಾಗಿರಲಿಲ್ಲ. ನಂತರ ಕಿರಣ್ ಮೃತದೇಹ ಪತ್ತೆಯಾಗದ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ಸಂಬಂಧಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
Advertisement
ಶನಿವಾರ ಎನ್‍ಡಿಆರ್ ಎಫ್ ತಂಡ ಸ್ಥಳಕ್ಕೆ ಭೇಟಿ ನೀಡಿ ನದಿಗೆ ಇಳಿದು ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದೆ. ಆದರೆ ನೀರಿನ ರಭಸ ಕೂಡ ಅಷ್ಟೇ ವೇಗವಾಗಿದೆ. ಆದರೂ ಎನ್‍ಡಿಆರ್ ಎಫ್ ತಂಡ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಹಿಂದೆ ಶೃಂಗೇರಿ ತಾಲೂಕಿನ ಮೇಗೂರಿನ ಅಶೋಕ್ ಬಸ್ತಿಮಠ ಹಳ್ಳದಲ್ಲಿ ಕೊಚ್ಚಿಹೋಗಿದ್ದಾಗಲೂ ಎನ್‍ಡಿಆರ್ ಎಫ್ ತಂಡ ನಾಲ್ಕು ದಿನ ಮೃತದೇಹಕ್ಕಾಗಿ ಶೋಧ ನಡೆಸಿ ನೀರಿನ ವೇಗ ಕಂಡು ವಾಪಸ್ಸಾಗಿತ್ತು.
Advertisement