68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕನ್ನಡಕ್ಕೆ ಮೂರು ಪ್ರಶಸ್ತಿಗಳು ಲಭಿಸಿವೆ. ವಿಶಿಷ್ಟ ಕಥಾಹಂದರದ ‘ಡೊಳ್ಳು’ ಸಿನಿಮಾಗೆ ಅತ್ಯುತ್ತಮ ಕನ್ನಡ ಪ್ರಾದೇಶಿಕ ಸಿನಿಮಾ ಹಾಗೂ ಸಿಂಕ್ ಸೌಂಡ್ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ದೊರೆತಿದೆ. ‘ತಲೆದಂಡ’ ಚಿತ್ರಕ್ಕೆ ಪರಿಸರ ಕಾಳಜಿಯ ಕಥಾವಸ್ತುವುಳ್ಳ ರಾಷ್ಟ್ರ ಪ್ರಶಸ್ತಿಯ ಗರಿ ಒಲಿದಿದೆ. ‘ಅತ್ಯುತ್ತಮ ಕಲೆ ಹಾಗೂ ಸಾಂಸ್ಕೃತಿಕ ಸಿನಿಮಾ’ ವಿಭಾಗದಲ್ಲಿ ಗಿರೀಶ್ಕಾಸರವಳ್ಳಿ ನಿರ್ದೇಶನದ ‘ನಾದದ ನವನೀತ’ ಚಿತ್ರ ಪ್ರಶಸ್ತಿಗೆ ಭಾಜನವಾಗಿದ್ದು, ಇದು ಕನ್ನಡಿಗರಿಗೆ ಹೆಮ್ಮಯ ಸಂಗತಿ.
ಇಂದು ಫಿಲ್ಮ್ ಚೇಂಬರ್ ವತಿಯಿಂದ ರಾಷ್ಟ್ರ ಪ್ರಶಸ್ತಿ ವಿಜೇತರಿಗಾಗಿ ಸನ್ಮಾನ ಮಾಡಲಾಯಿತು. ಡೊಳ್ಳು ಸಿನಿಮಾ ನಿರ್ಮಾಪಕರಾದ ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್ ದಂಪತಿ, ಚಿತ್ರದ ನಿರ್ದೇಶಕ ಸಾಗರ್ ಪುರಾಣಿಕ್ ಹಾಗೂ ‘ತಲೆದಂಡ’ ಚಿತ್ರದ ನಿರ್ಮಾಪಕಿ ಡಾ. ಹೇಮಾಮಾಲಿನಿ ಕೃಪಾಕರ್ ಸೇರಿದಂತೆ ಈ ಬಾರಿ ಪ್ರಶಸ್ತಿ ವಿಜೇತರಿಗೆ ಫಿಲ್ಮಂ ಚೇಂಬರ್ ಅಧ್ಯಕ್ಷರಾದ ಭಾ.ಮಾ.ಹರೀಶ್ ಸಾರಥ್ಯದಲ್ಲಿ ಸನ್ಮಾನ ಮಾಡಲಾಯಿತು. ಇದನ್ನೂ ಓದಿ:ಸಿನಿಮಾರಂಗಕ್ಕೆ ಗುಡ್ ಬೈ: ರಾಜಕೀಯ ಅಖಾಡಕ್ಕೆ ರಶ್ಮಿಕಾ ಮಂದಣ್ಣ
ಪ್ರತಿ ಸಲವೂ ಇಂಥದ್ದೊಂದು ಸಂಪ್ರದಾಯವನ್ನು ವಾಣಿಜ್ಯ ಮಂಡಳಿಯು ಇಟ್ಟುಕೊಂಡು ಬಂದಿದೆ. ಅದನ್ನು ಭಾ.ಮಾ ಹರೀಶ್ ಮತ್ತು ತಂಡ ಮುಂದುವರೆಸಿಕೊಂಡು ಹೋಗುತ್ತಿದೆ. ಈ ಸಂದರ್ಭದಲ್ಲಿ ಫಿಲ್ಮಂ ಚೇಂಬರ್ ಪದಾಧಿಕಾರಿಗಳು, ಮಾಜಿ ಅಧ್ಯಕ್ಷ ಚಿನ್ನೇಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.