ಮಲಯಾಳಂ (Malyalam) ಚಿತ್ರರಂಗದ ಹಿರಿಯ ನಿರ್ಮಾಪಕ (Producer) ಕೆ.ಜಿ ಜಾರ್ಜ್ (K g George) ಭಾನುವಾರ (ಸೆ.24) ವಿಧಿವಶರಾಗಿದ್ದಾರೆ. ಕೊಚ್ಚಿಯ ವೃದ್ಧಾಶ್ರಮದಲ್ಲಿ ಅವರು ಇಹಲೋಕ ತ್ಯಜಿಸಿದ್ದಾರೆ. ಇದನ್ನೂ ಓದಿ:‘ಜವಾನ್’ ಸಕ್ಸಸ್ ಬಳಿಕ ಪ್ರಭಾಸ್ ಸಿನಿಮಾದಲ್ಲಿ ನಯನತಾರಾ
ಕಳೆದ 5 ವರ್ಷಗಳಿಂದ ಕೆ.ಜಿ ಜಾರ್ಜ್ ಅವರು ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಅದಕ್ಕಾಗಿ ಸೂಕ್ತ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಆದರೆ ಈಗ ಚಿಕಿತ್ಸೆ ಫಲಕಾರಿಯಾಗದೇ 78ನೇ ವಯಸ್ಸಿಗೆ ನಟ ನಿಧನರಾಗಿದ್ದಾರೆ. ಹಿರಿಯ ನಟನ ನಿಧನಕ್ಕೆ ಚಿತ್ರರಂಗದ ನಟ-ನಟಿಯರು, ರಾಜಕಾರಣಿಗಳು, ಆಪ್ತರು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.
1976ರಲ್ಲಿ ‘ಸ್ಪಪ್ನದನಂ’ (Swapnaadanam) ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಈ ಸಿನಿಮಾವು ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ನ್ಯಾಶನಲ್ ಅವಾರ್ಡ್ (National Award) ಕೂಡ ಬಾಚಿಕೊಂಡಿತ್ತು. ಉಳ್ಕಡಲ್, ಮೇಳ, ಯವನಿಕಾ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]