68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಈ ಬಾರಿ ಪವನ್ ಒಡೆಯರ್ ನಿರ್ಮಾಣದಲ್ಲಿ ಮೂಡಿ ಬಂದ, ಸಾಗರ್ ಪುರಾಣಿಕ್ ನಿರ್ದೇಶನದ ಡೊಳ್ಳು ಚಿತ್ರಕ್ಕೆ ಎರಡು ಪ್ರಶಸ್ತಿಗಳು ಸಂದಿವೆ. ಈ ಸಂಭ್ರಮವನ್ನು ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಹಂಚಿಕೊಂಡ ನಿರ್ಮಾಪಕ ಪವನ್ ಒಡೆಯರ್, ರಾಷ್ಟ್ರ ಪ್ರಶಸ್ತಿಯು ಕರ್ನಾಟಕ ಕಲೆಗೆ ಸಂದ ಗೌರವ ಎಂದರು. ಈ ಸಿನಿಮಾವನ್ನು ತಾವು ದುಡ್ಡಿಗಾಗಿ ನಿರ್ಮಾಣ ಮಾಡಲಿಲ್ಲ ಎಂದಿದ್ದಾರೆ.
ಡೊಳ್ಳು ಸಿನಿಮಾದ ಸ್ಕ್ರಿಪ್ಟ್ ಕೇಳಿದ ತಕ್ಷಣವೇ ನಾನೇ ಈ ಚಿತ್ರವನ್ನು ನಿರ್ಮಾಣ ಮಾಡಬೇಕು ಎಂದುಕೊಂಡೆ. ಇದು ಹಣ ಮಾಡುವುದಕ್ಕಾಗಿ ನಿರ್ಮಾಣ ಮಾಡಿದ ಸಿನಿಮಾವಲ್ಲ. ನನ್ನ ನಾಡಿಗೆ, ನನ್ನ ನಾಡ ಕಲೆಗೆ ನಮ್ಮಿಂದ ಋಣ ಸಂದಾಯ ಅಂದುಕೊಂಡು ಮಾಡಿದ ಚಿತ್ರ. ನನ್ನ ಸಂಸ್ಥೆಯಲ್ಲಿ ನಿರ್ಮಾಣವಾದ ಮೊದಲ ಸಿನಿಮಾ. ಈಗಾಗಲೇ ಸಾಕಷ್ಟು ಪ್ರಶಸ್ತಿಗಳನ್ನು ಡೊಳ್ಳು ಪಡೆದುಕೊಂಡಿದೆ. ಇದೀಗ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದೆ. ಇದು ಸಾರ್ಥಕ ಭಾವ ಎನ್ನುತ್ತಾರೆ ಪವನ್ ಒಡೆಯರ್. ಇದನ್ನೂ ಓದಿ:`ಮಾರ್ಟಿನ್’ ಆ್ಯಕ್ಷನ್ ಸೀನ್‌ಗಾಗಿ ಧ್ರುವಾ ಸರ್ಜಾ- ಎ.ಪಿ ಅರ್ಜುನ್ ಭರ್ಜರಿ ತಯಾರಿ
ಈ ಬಾರಿ ಕನ್ನಡ ಸಿನಿಮಾಗಳಿಗೆ ಹಲವು ಪ್ರಶಸ್ತಿಗಳು ಸಂದಿದ್ದು, ಅತ್ಯುತ್ತಮ ಪರಿಸರ ಕಾಳಜಿ ಚಿತ್ರವಾಗಿ ಕೃಪಾಕರ್ ನಿರ್ದೇಶನದ, ಸಂಚಾರಿ ವಿಜಯ್ ನಟನೆಯ ‘ತಲೆದಂಡ’ ಚಿತ್ರ ರಾಷ್ಟ್ರೀಯ ಪ್ರಶಸ್ತಿ ದೊರೆತರೆ, ಲೋಕೇಷನ್ ಸೌಂಡ್ ಡಿಸೈನಿಂಗ್ ವಿಭಾಗದಲ್ಲಿ ಡೊಳ್ಳು ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ. ಅತ್ಯುತ್ತಮ ಪ್ರಾದೇಶಿಕ ಚಿತ್ರ ಡೊಳ್ಳು ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡರೆ, ಅತ್ಯುತ್ತಮ ಪ್ರಾದೇಶಿಕ ತುಳು ಸಿನಿಮಾ ಪ್ರಶಸ್ತಿಯು ಸಂತೋಷ್ ನಿರ್ದೇಶನದ ‘ಜೀಟಿಗೆ’ ದೊರೆತಿದೆ. ಕಲೆ ಮತ್ತು ಸಾಂಸ್ಕೃತಿಕ ಚಿತ್ರವಾಗಿ ಗಿರೀಶ್ ಕಾಸರವಳ್ಳಿ ನಿರ್ದೇಶನ ಮಾಡಿರುವ ‘ನಾದದ ನವನೀತ’ ಚಿತ್ರಕ್ಕೆ ಪ್ರಶಸ್ತಿ ಸಂದಿದೆ.