ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ಹಬ್ಬಗಳಲ್ಲಿ ರಾಷ್ಟ್ರಗೀತೆ ಹಾಡೋದು ಸಂಪ್ರದಾಯ. ಇತ್ತೀಚಿಗೆ ಇತ್ತೀಚೆಗೆ ಸುಪ್ರೀಂಕೋರ್ಟ್ ಆದೇಶದನ್ವಯ ಸಿನಿಮಾ ಥಿಯೇಟರ್‍ಗಳಲ್ಲೂ ಸಿನಿಮಾ ಆರಂಭದ ಮೊದಲು ರಾಷ್ಟ್ರಗೀತೆ ಮೊಳಗುತ್ತಿದೆ. ಆದರೆ ಚಿಕ್ಕಮಗಳೂರಿನಲ್ಲಿ ಮದುವೆಯಲ್ಲಿ ರಾಷ್ಟ್ರಗೀತೆ ಮೊಳಗಿದೆ.
Advertisement
ಭಾನುವಾರ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಶ್ರೀನಿವಾಸ್‍ರಾಜೇ ಅರಸ್ ಮತ್ತು ಎಂ.ಸಂಹಿತ ಅರಸ್ ಎಂಬವರ ಮದುವೆ ನಡೆಯುತ್ತಿತ್ತು. ಅನಿವಾಸಿ ಭಾರತೀಯ ಹಾಗೂ ಅಪ್ಪಟ ದೇಶಪ್ರೇಮಿಯಾಗಿರುವ ಶ್ರೀನಿವಾಸ್ ಅವರು ತಮ್ಮ ಮದುವೆಯಲ್ಲಿ ರಾಷ್ಟ್ರಗೀತೆಯನ್ನು ಹಾಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Advertisement
Advertisement
ಎಂಜಿನಿಯರ್ ಪಧವೀಧರರಾಗಿರುವ ಶ್ರೀನಿವಾಸ್ ಕಳೆದ ಏಳು ವರ್ಷಗಳಿಂದ ದಕ್ಷಿಣ ಆಫ್ರಿಕಾದಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಶ್ರೀನಿವಾಸ್ ವಧುವಿನ ಕೈ ಹಿಡಿಯುವಾಗ ಕಲ್ಯಾಣ ಮಂಟಪದಲ್ಲಿ ರಾಷ್ಟ್ರಗೀತೆ ಹಾಡಿಸಿದ್ದಾರೆ. ಕಲ್ಯಾಣ ಮಂಟಪದಲ್ಲಿ ರಾಷ್ಟ್ರಗೀತೆ ಮೊಳಗುತ್ತಿದ್ದಂತೆ ಜನರೆಲ್ಲರೂ ಎದ್ದುನಿಂತು ಗೌರವ ಸಲ್ಲಿಸಿದ್ದಾರೆ.
Advertisement