ಬೆಂಗಳೂರು: ಇನ್ನು ಮುಂದೆ ದೇಶದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಸಂಘಟನೆ ಹೆಸರನ್ನು ಬಳಸಿಕೊಂಡು ಯಾವುದೇ ಕೆಲಸ ಮಾಡುವಂತಿಲ್ಲ.
ಸಂಘಟನೆಯ ಉದ್ದೇಶವೇ ಕಾನೂನು ಬಾಹಿರ ಎಂದು ಕೇಂದ್ರ ಗೃಹ ಸಚಿವಾಲಯ ಅಧಿಕೃತವಾಗಿ ತಿಳಿಸಿದ ಹಿನ್ನೆಲೆಯಲ್ಲಿ ಪಿಎಫ್‌ಐ ಅಡಿ ಏನೇ ಕೆಲಸ ಮಾಡಿದರೂ ಕಾನೂನುಬಾಹಿರ ಚಟುವಟಿಕೆಗಳ (ನಿರ್ಬಂಧ) ಕಾಯ್ದೆ (UAPA)ಅಡಿ ಪ್ರಕರಣ ದಾಖಲಾಗುತ್ತದೆ.
Advertisement
Advertisement
ಯಾವ ಹೊಸ ಕಾರ್ಯಕರ್ತರೂ ಈ ಸಂಘಟನೆಯನ್ನು ಸೇರುವಂತಿಲ್ಲ. ಹಾಗೇನಾದರೂ ಸಂಘಟನೆಗೆ ಸೇರುವ ಪ್ರಯತ್ನ ಮಾಡಿದರೆ ಅವರ ವಿರುದ್ಧ ಯುಎಪಿಎ ಅಡಿ ಕೇಸ್ ಹಾಕಿ ಬಂಧನ ಮಾಡಲಾಗುತ್ತದೆ. ಇದನ್ನೂ ಓದಿ: ಸಂಪೂರ್ಣ ನಿಷೇಧವಾಗುತ್ತಾ PFI – ಕೇಂದ್ರ ಸರ್ಕಾರದ ಮುಂದಿನ ಪ್ಲ್ಯಾನ್ ಏನು?
Advertisement
ಈಗಾಗಲೇ ಸಂಘಟನೆ ಸೇರಿರುವ ಉಳಿದ ಮುಖಂಡರು ಪಿಎಫ್‌ಐ ಹೆಸರಲ್ಲಿ ಯಾವುದೇ ಕಾರ್ಯಕ್ರಮ, ಪ್ರತಿಭಟನೆ, ಹಣ ಸಂಗ್ರಹಣೆ ಮಾಡುವಂತಿಲ್ಲ. ಪಿಎಫ್‌ಐ ಹೆಸರೇಳಿದರೆ ಅವರ ವಿರುದ್ಧ ಕೇಸ್ ಹಾಕಲಾಗುತ್ತದೆ. ಪಿಎಫ್ಐ ಹೆಸರಲ್ಲಿ ಮನೆಯಲ್ಲಿ ನಾಲ್ಕು ಜನ ಸಭೆ ಮಾಡಿದರೂ ಕೇಸ್ ದಾಖಲಾಗುತ್ತದೆ.
Advertisement
ಪಿಎಫ್ಐಗೆ ಸೇರಿದ ಬ್ಯಾಂಕುಗಳ ಈಗಾಗಲೇ ಜಪ್ತಿಯಾಗಿದ್ದು, ಕಚೇರಿಗಳಿಗೆ ಬೀಗಮುದ್ರೆ ಬೀಳಲಿದೆ. ಸಂಘಟನೆ ಹೆಸರಿನಲ್ಲಿ ಅಥವಾ ಇನ್ಯಾವುದೇ ಸ್ವರೂಪದ ಕಾರ್ಯಕ್ರಮಗಳ ಮೇಲೆ ಪೊಲೀಸ್ ಮತ್ತು ಗುಪ್ತಚರ ಇಲಾಖೆ ನಿಗಾ ಇಡಲಿದೆ. ಯುಎಪಿಎ ಅಡಿಯಲ್ಲಿ ನಿಷೇಧ ಆದ್ದರಿಂದ ಸಂಘಟನೆಯಲ್ಲಿ ಗುರುತಿಸಿಕೊಂಡವರಿಗೆ ಸಂಕಷ್ಟವಾಗಲಿದೆ. ಸಣ್ಣ ಮಟ್ಟದ ಶಂಕೆ ಬಂದರೂ ಅವರು ಬಂಧನಕ್ಕೆ ಒಳಗಾಗಬಹುದು. ಸಂಘಟನೆಗೆ ಸಹಾನುಭೂತಿ ತೋರಿಸುವುದು ಬೆಂಬಲಿಸುವುದು ಕೂಡ ಅಪರಾಧ ಎಂದೇ ಪರಿಗಣಿಸಲಾಗುತ್ತದೆ.