ಕೋಲ್ಕತಾ: ನಮಗೆ ದೇಶ ಮೊದಲು. ನಂತರ ವೋಟ್ ಬ್ಯಾಂಕ್ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಶನಿವಾರ ಕೋಲ್ಕತ್ತಾದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿಯ ಬೃಹತ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತೃಣಮೂಲ ಕಾಂಗ್ರೆಸ್ ಅನ್ನು ಪಶ್ಚಿಮ ಬಂಗಾಳದಲ್ಲಿ ಬೇರು ಸಮೇತ ಕಿತ್ತುಹಾಕುವುದಾಗಿ ಗುಡುಗಿದ್ದಾರೆ.
Advertisement
ಕೇವಲ ವೋಟ್ ಬ್ಯಾಂಕ್ ಗಾಗಿ ನೀವು ರಾಷ್ಟ್ರೀಯ ಪೌರತ್ವ ನೊಂದಣಿ(ಎನ್ಆರ್ಸಿ)ಗೆ ವಿರೋಧ ವ್ಯಕ್ತಪಡಿಸುತ್ತಿದ್ದೀರಿ, ಆದರೆ ನಮಗೆ ದೇಶ ಮೊದಲು. ನಂತರ ವೋಟ್ ಬ್ಯಾಂಕ್. ಹೀಗಾಗಿ ಎನ್ಆರ್ಸಿ ಮೂಲಕ ಎಲ್ಲಾ ಅಕ್ರಮ ವಲಸಿಗರನ್ನು ದೇಶದಿಂದ ಹೊರ ಹಾಕಲಾಗುವುದು. ನೀವು ಎಎನ್ಆರ್ಸಿಗೆ ಎಷ್ಟೇ ವಿರೋಧ ವ್ಯಕ್ತಪಡಿಸಿದರೂ, ನಾವು ಅದನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಆಕ್ರೋಶ ಹೊರಹಾಕಿದರು.
Advertisement
Advertisement
ಶೀಘ್ರದಲ್ಲೇ ಪಶ್ಚಿಮ ಬಂಗಾಳದಲ್ಲಿ ಬದಲಾವಣೆಯಾಗಲಿದೆ. ಅಧಿಕಾರದಲ್ಲಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಅಧಿಕಾರದಿಂದ ಬೇರು ಸಮೇತ ಕಿತ್ತುಹಾಕಲು ನಾವು ಇಲ್ಲಿ ಬಂದಿದ್ದೇವೆ ಎಂದು ವಾಗ್ದಾಳಿ ನಡೆಸಿದರು.
Advertisement
ಪಶ್ಚಿಮ ಬಂಗಾಳದಲ್ಲಿ ಈ ಮೊದಲು ಪ್ರತಿನಿತ್ಯ ರಬೀಂದ್ರ ಸಂಗೀತ ಕೇಳಿಸುತ್ತಿತ್ತು, ಆದರೆ ಇಂದು ಎಲ್ಲಿ ಕೇಳಿದರು ಕೇವಲ ಬಾಂಬ್ ಸ್ಫೋಟದ ಶಬ್ದವೇ ಕೇಳಿಸುತ್ತಿದೆ. ನೀವು ಬಾಂಗ್ಲಾ ನುಸುಳುಕೋರರನ್ನು ರಕ್ಷಿಸುತ್ತಿರುವುದೇಕೆ ಎಂದು ಪ್ರಶ್ನಿಸಿದ ಅವರು, ಈ ಕುರಿತು ಕಾಂಗ್ರೆಸ್ ರಾಹುಲ್ ಗಾಂಧಿ ಕೂಡ ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಿಲ್ಲ. ಕೇವಲ ಕಾಂಗ್ರೆಸ್ಸಿನ ವೋಟ್ ಬ್ಯಾಂಕ್ ರಾಜಕಾರಣವೇ ಇವೆಲ್ಲದಕ್ಕೂ ಕಾರಣ ಎಂದು ತೀವ್ರವಾಗಿ ಆರೋಪಿಸಿದರು.
In Bengal, corruption has flourished under TMC's regime. Due to vote bank politics of TMC, Bengal’s world famous "Rabindra Sangeet" is getting lost under the sound of bomb explosions. pic.twitter.com/lBSm2F6hJb
— Amit Shah (@AmitShah) August 11, 2018
ನೀವುಗಳು ಬಿಜೆಪಿಯನ್ನು ಬಾಂಗ್ಲಾ ವಿರೋಧಿಯಂದು ಅಪಪ್ರಚಾರ ಮಾಡುತ್ತಿದ್ದೀರಿ. ಆದರೆ ಪಶ್ಚಿಮ ಬಂಗಾಳದ ಬಿಜೆಪಿಯ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿಯವರು ಸಹ ಖುದ್ದು ಬೆಂಗಾಲಿಯಾಗಿರುವಾಗ ಬಿಜೆಪಿ ಹೇಗೆ ಬಾಂಗ್ಲಾ ವಿರೋಧಿಯಾಗುತ್ತದೆ ಎಂದು ಪ್ರಶ್ನಿಸಿದರು. ಅಲ್ಲದೇ ನಾವು ಬಾಂಗ್ಲಾ ವಿರೋಧಿಗಳಲ್ಲ, ಕೇವಲ ಮಮತಾ ವಿರೋಧಿಗಳು ಎಂದು ತಿಳಿಸಿದರು.
ನಮ್ಮ ರ‍್ಯಾಲಿಯನ್ನು ಜನರು ನೋಡದಂತೆ ಮಾಡಲು ನೀವು ಎಲ್ಲಾ ಬೆಂಗಾಲಿ ಚಾನೆಲ್‍ಗಳ ಸಿಗ್ನಲ್‍ಗಳನ್ನು ಕಡಿಮೆ ಇರುವಂತೆ ಮಾಡಿದ್ದೀರಿ. ನಮ್ಮ ದನಿಯನ್ನು ಅಡಗಿಸಲು ನೀವು ಯತ್ನಿಸುತ್ತಿದ್ದೀರಿ. ಆದರೆ ನಾವು ರಾಜ್ಯದ ಪ್ರತಿ ಜಿಲ್ಲೆಗೂ ತೆರಳಿ ಟಿಎಂಸಿಯನ್ನು ಕಿತ್ತು ಹಾಕುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ಪಶ್ಚಿಮ ಬಂಗಾಳದಲ್ಲಿ ಅಭಿವೃದ್ಧಿಯಾಗಬೇಕಾದರೇ, ಕೇವಲ ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯವೆಂದು ಹೇಳಿದರು.
On the issue of NRC, I have seen a lot of discussion related to human rights these days. I want to ask the TMC and the Congress, don't you care about the human rights of citizens of West Bengal? Do you not worry about employment, education, health and safety of Indian citizens? pic.twitter.com/6EpL3fGwh2
— Amit Shah (@AmitShah) August 11, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews