ತಿರುವನಂತಪುರಂ: ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆ ಮತ್ತು ಪ್ರಧಾನಿ ನರೇಂದ್ರ ಮೋದಿ ಇಬ್ಬರೂ ಒಂದೇ ಸಿದ್ಧಾಂತವನ್ನು ನಂಬುವವರು ಎಂದು ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಕೇರಳದ ವಯನಾಡ್ ಜಿಲ್ಲೆಯಲ್ಲಿ ಇಂದು ನಡೆದ ಸಿಎಎ ವಿರೋಧಿ ರ‍್ಯಾಲಿಯಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಈ ವಿಚಾರ ನಿಮಗೆ ತಿಳಿದಿದೆಯೋ? ಇಲ್ಲವೋ? ನನಗೆ ಗೊತ್ತಿಲ್ಲ. ಆದರೆ, ಗೋಡ್ಸೆ ಮಹಾತ್ಮ ಗಾಂಧಿಯ ಮೇಲೆ ಗುಂಡುಹಾರಿಸಿದ್ದಾಗ ಆತ ತನ್ನ ಕಣ್ಣನ್ನು ಮುಚ್ಚಿದ್ದ. ಏಕೆಂದರೆ ಆತನಿಗೆ ತಾನು ಏನು ಮಾಡುತ್ತಿದ್ದೇನೆ ಎಂಬುದು ತಿಳಿದಿತ್ತು. ಗೋಡ್ಸೆ ಮತ್ತು ಮೋದಿ ಇಬ್ಬರದ್ದೂ ಒಂದೇ ಸಿದ್ಧಾಂತ. ಆದರೆ, ನಾನು ಗೋಡ್ಸೆಯನ್ನು ನಂಬುತ್ತೇನೆ ಎಂದು ಬಹಿರಂಗವಾಗಿ ಹೇಳುವ ಧೈರ್ಯ ಮೋದಿಗಿಲ್ಲವಷ್ಟೆ ಎಂದು ಪ್ರಧಾನಿ ವಿರುದ್ಧ ಮಾತಿನ ಚಾಟಿ ಬೀಸಿದರು.
Godse, Modi believe in same ideology: Rahul Gandhi
Read @ANI Story l https://t.co/tGiIdTbjnh pic.twitter.com/Qv5x1499nM
— ANI Digital (@ani_digital) January 30, 2020
ಭಾರತೀಯರೇ ನಾವು ಭಾರತಿಯರು ಎಂದು ಸಾಬೀತುಪಡಿಸಬೇಕಾದ ಸ್ಥಿತಿ ಬಂದಿದೆ. ಯಾರು ಭಾರತೀಯರು ಎಂದು ಗುರುತಿಸಲು ನರೇಂದ್ರ ಮೋದಿ ಯಾರು? ನನ್ನ ಪೌರತ್ವವನ್ನು ಪ್ರಶ್ನಿಸಿವ ಹಕ್ಕು ಮೋದಿಗೆ ಯಾರು ಕೊಟ್ಟಿದ್ದು? ನಾನು ಭಾರತೀಯನೆಂದು ನನಗೆ ಗೊತ್ತು. ನಾನು ಯಾರಿಗೂ ಅದನ್ನ ಸಾಬೀತುಪಡಿಸುವ ಅಗತ್ಯವಿಲ್ಲ. ಹಾಗೆಯೇ ಇಲ್ಲಿರುವ 140 ಕೋಟಿ ಜನರಿಗೂ ಕೂಡ ಭಾರತೀಯರು ಎಂದು ನಿರೂಪಿಸುವ ಅಗತ್ಯವಿಲ್ಲ ಎಂದು ರಾಹುಲ್ ಕಿಡಿಕಾರಿದರು.
Shri @RahulGandhi leads the #SaveTheConstitution march against the unconstitutional CAA & NRC in Kalpetta, Wayanad with AICC General Secretary Shri @kcvenugopalmp and several leaders. pic.twitter.com/RfPJoZzU8s
— Srinivas BV (@srinivasiyc) January 30, 2020
ಕೇಂದ್ರ ಸರ್ಕಾರದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ವಯನಾಡ್‍ನಲ್ಲಿ ಕಾಂಗ್ರೆಸ್ ನಾಯಕರು ಇಂದು ಬೃಹತ್ ಸಾಮೂಹಿಕ ಪ್ರತಿಭಟನಾ ರ‍್ಯಾಲಿಯನ್ನು ಹಮ್ಮಿಕೊಂಡಿದ್ದರು. ವಯನಾಡ್‍ನ ಎಸ್‍ಕೆಎಂಜೆ ಪ್ರೌಢ ಶಾಲೆಯಿಂದ ಆರಂಭವಾದ ಮೆರವಣಿಗೆ ಎರಡು ಕಿಲೋ ಮೀಟರ್ ವರೆಗೆ ನಡೆಯಿತು.
Save Constitution march led by @RahulGandhi at Kalpetta on the day of Martyrdom of Gandhiji. Several thousands supporters marched along with to save the constitution & the values enshrined in it. pic.twitter.com/bZ46Chn9jw
— K C Venugopal (@kcvenugopalmp) January 30, 2020