ಮಂಗಳೂರು: ನಗರದ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ನಾ ಸುಬ್ರಹ್ಮಣ್ಯ ರಾಜು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾತ್ಮ ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಸಮರ್ಥಿಸಿಕೊಂಡು ಮಾತನಾಡಿದ ಮಹಾಸಭಾ ನಾಯಕ, ಅಂದಿನ ದಿನಗಳಲ್ಲಿ ಗಾಂಧೀಜಿಯವರ ನಡವಳಿಕೆಗಳಲ್ಲಿ ವಿಪರೀತವಾಗಿತ್ತಂತೆ. ಪಾಕಿಸ್ತಾನದ ಮುಸಲ್ಮಾನರಿಗೆ ಪೂರಕವಾಗಿ ನಿಲುವುಗಳನ್ನು ತೆಗೆದುಕೊಳ್ತಿದ್ರು. ಹೀಗಾಗಿ ಭಾರತ ದೇಶ ಮತ್ತಷ್ಟು ವಿಭಜನೆ ಆಗುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಗಾಂಧೀಜಿಯನ್ನ ಗೋಡ್ಸೆ ಕೊಂದಿದ್ದಾರೆ ಅಂತ ಹೇಳಿದ್ದಾರೆ.
ಮಹಾತ್ಮ ಗಾಂಧಿ ಹತ್ಯೆ ಬಳಿಕ ಹಲವಾರು ಘಟನೆಗಳು ನಡೆದಿವೆ. ಗಾಂಧೀಜಿಯವರು ಇರುತ್ತಿದ್ದರೆ ಮುಂಬರುವ ದಿನಗಳಲ್ಲಿ ನಮ್ಮ ದೇಶ, ಸಮಾಜ ಇನ್ನು ಹಲವಾರು ವಿಭಜನೆಗಳಾಗುವ ಸಾಧ್ಯತೆಗಳು ಹೆಚ್ಚಿದ್ದ ಕಾರಣ ನಾನು ಈ ಕೃತ್ಯಕ್ಕೆ ಕೈ ಹಾಕಿದೆ ಅಂತ ಗಾಂಧೀಜಿಯನ್ನು ಕೊಂದ ಬಳಿಕ ಗೋಡ್ಸೆ ಹೇಳುತ್ತಾರೆ ಅಂತ ರಾಜು ವಿವರಿಸಿದ್ರು.
ಒಟ್ಟಿನಲ್ಲಿ ದೇಶಕ್ಕೆ ಕಂಟಕ ಆಗುವಂತಹ ವ್ಯಕ್ತಿಗಳನ್ನು ಮಟ್ಟ ಹಾಕೋದು ನಮ್ಮ ಕಾನೂನು ಎಂದು ಹೇಳುವುದರ ಮೂಲಕ ಗಾಂಧೀಜಿ ಹತ್ಯೆಯನ್ನು ಸಮರ್ಥಿಸಿಕೊಂಡರು.