ವಾಷಿಂಗ್ಟನ್: 6.5 ಕೋಟಿ ವರ್ಷಗಳ ಹಿಂದೆ ಕ್ಷುದ್ರಗ್ರಹವೊಂದು (Asteroid) ಭೂಮಿಗೆ ಅಪ್ಪಳಿಸಿದ್ದರಿಂದ ಅದರ ಪರಿಣಾಮ ಎಷ್ಟೊಂದು ಭೀಕರವಾಗಿತ್ತು ಎಂದರೆ, ಡೈನೋಸಾರ್‌ಗಳ ಸಂತತಿಯೇ ನಾಶವಾಗಿ ಹೋಗಿತ್ತು. ಆದರೆ ಇದೀಗ ನಾಸಾ (NASA) ಇಂತಹ ಆಪತ್ತುಗಳನ್ನು ತಡೆಯುವ ಸಲುವಾಗಿ ನಡೆಸಿದ ಪ್ರಯೋಗ ಇಂದು ಯಶಸ್ವಿಯಾಗಿದೆ.
ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಾಸಾ ಬಾಹ್ಯಾಕಾಶ ನೌಕೆಯಿಂದ (Spacecraft) ಸಣ್ಣ ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆಸಿದೆ. ಈ ಮೂಲಕ ಕ್ಷುದ್ರಗ್ರಹದ ದಿಕ್ಕನ್ನು ಬದಲಿಸುವ ಪ್ರಯೋಗವನ್ನು ಯಶಸ್ವಿಯಾಗಿಸಿದೆ. ಭವಿಷ್ಯದಲ್ಲಿ ಅನ್ಯ ಲೋಕದ ವಸ್ತುಗಳು ಭೂಮಿಯೆಡೆಗೆ ನೇರವಾಗಿ ಬರುವ ಸಂದರ್ಭ ಅವುಗಳ ದಿಕ್ಕು ತಪ್ಪಿಸಲು ಈ ತಂತ್ರಜ್ಞಾನ ಸಹಕಾರಿಯಾಗಲಿದೆ.
Advertisement
Advertisement
ನಾಸಾ 2021ರ ನವೆಂಬರ್‌ನಲ್ಲಿ ಡಬಲ್ ಆಸ್ಟರಾಯ್ಡ್ ರೀಡೈರೆಕ್ಷನ್ ಟೆಸ್ಟ್(DART) ಅನ್ನು ಪ್ರಾರಂಭಿಸಿತ್ತು. 344 ದಶಲಕ್ಷ ಡಾಲರ್ ವೆಚ್ಚದಲ್ಲಿ ನಿರ್ಮಾಣಗೊಂಡ ಈ ನೌಕೆ ಭೂಮಿಯಿಂದ 9 ದಶಲಕ್ಷ ಕಿ.ಮೀ ಕ್ರಮಿಸಿ ಕ್ಷುದ್ರಗ್ರಹಕ್ಕೆ ಅಪ್ಪಳಿಸಿದೆ. ಮಾತ್ರವಲ್ಲದೇ ಅದರ ದಿಕ್ಕನ್ನು ಬದಲಾಯಿಸುವ ಕಾರ್ಯಾಚರಣೆ ಯಶಸ್ವಿಯಾಗಿಸಿದೆ. ಇದನ್ನೂ ಓದಿ: ಶೀಘ್ರವೇ 5G ಸೇವೆ ಆರಂಭ – ನಿಮ್ಮ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
Advertisement
ಕ್ಷುದ್ರಗ್ರಹಕ್ಕೆ ಹೋಲಿಸಿದರೆ ಡಾರ್ಟ್ ನೌಕೆ ಚಿಕ್ಕದಾಗಿದೆ. ಆದರೆ ಅದು 600 ಕೆಜಿ ತೂಕ ಹಾಗೂ 163 ಮೀ. ಅಗಲದ ಇದ್ದು, ಗಂಟೆಗೆ ಸುಮಾರು 22,500 ಕಿ.ಮೀ. ವೇಗದಲ್ಲಿ ಚಲಿಸಿದ್ದರಿಂದ ಕ್ಷುದ್ರಗ್ರಹದ ದಿಕ್ಕು ತಪ್ಪಿಸಲು ಸಾಧ್ಯವಾಗಿದೆ ಎಂದು ಗ್ರಹಗಳ ವಿಜ್ಞಾನಿ ನ್ಯಾನ್ಸಿ ಚಾಬೋಟ್ ತಿಳಿಸಿದ್ದಾರೆ
Advertisement
Don’t want to miss a thing? Watch the final moments from the #DARTMission on its collision course with asteroid Dimporphos. pic.twitter.com/2qbVMnqQrD
— NASA (@NASA) September 26, 2022
ಡಾರ್ಟ್‌ನ ಕಾರ್ಯಾಚರಣೆ ಭೂಮಿಯ ರಕ್ಷಣೆಗೆ ಒಂದು ಅಭೂತಪೂರ್ವವಾದ ಯಶಸ್ಸಾಗಿದೆ. ಇದರಿಂದ ನಿಜವಾಗಿಯೂ ಮಾನವನಿಗೆ ಪ್ರಯೋಜನವಾಗಲಿದೆ. ನಮ್ಮ ಬ್ರಹ್ಮಾಂಡವನ್ನು ರಕ್ಷಿಸಲು ಇದು ಮಹತ್ವದ ಕೆಲಸ ಮಾಡುತ್ತದೆ. ಭೂಮಿಯನ್ನು ರಕ್ಷಿಸಲು ಒಂದು ಮುಖ್ಯವಾದ ಮಾರ್ಗ ಇದಾಗಿದೆ ಎಂದು ನಾಸಾದ ಆಡಳಿತಾಧಿಕಾರಿ ಬಿಲ್ ನೆಲ್ಸನ್ ಹೇಳಿದ್ದಾರೆ. ಇದನ್ನೂ ಓದಿ: ಅ.1 ರಿಂದ ದೇಶದಲ್ಲಿ 5G ಸೇವೆ ಆರಂಭ – ಮೋದಿ ಚಾಲನೆ