ನವದೆಹಲಿ: ಕೋವ್ಯಾಕ್ಸಿನ್ (Covaxin) ಲಸಿಕೆಯನ್ನು ಅಭಿವೃದ್ಧಿಪಡಿಸಿರುವ ಹೈದರಾಬಾದ್‌ನ ಭಾರತ್ ಬಯೋಟೆಕ್ (Bharat Biotech) ಇಂಟ್ರಾನಾಸನಲ್ ಕೋವಿಡ್ ಲಸಿಕೆಯನ್ನು (Intranasal Covid Vaccine) ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದೀಗ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಇಂತಿಷ್ಟು ಹಣ ಪಾವತಿಸಿ ಈ ಲಸಿಕೆಯನ್ನು ಪಡೆದುಕೊಳ್ಳಬಹುದಾಗಿದೆ.
ವರದಿಗಳ ಪ್ರಕಾರ ಖಾಸಗಿ ಆಸ್ಪತ್ರೆಗಳಲ್ಲಿ ಈ ಲಸಿಕೆಯನ್ನು ಜಿಎಸ್‌ಟಿ ಹೊರತುಪಡಿಸಿ 800 ರೂ.ಗೆ ಪಡೆದುಕೊಳ್ಳಬಹುದು. ಸರ್ಕಾರಿ ಆಸ್ಪತ್ರೆಯಲ್ಲಿ ಇದರ ಪ್ರತಿ ಡೋಸ್‌ಗೆ 325 ರೂ. ಬೆಲೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಭಾರತ ಸರ್ಕಾರ ಮೂಗಿನ ಮೂಲಕ ಪಡೆಯಬಹುದಾದ ಲಸಿಕೆಗೆ ಅನುಮೋದನೆ ನೀಡಿದೆ. ಇದನ್ನು ಕೋವಿಶೀಲ್ಡ್ ಅಥವಾ ಕೋವಾಕ್ಸಿನ್ ತೆಗೆದುಕೊಂಡವರು ಬೂಸ್ಟರ್ ಡೋಸ್ ಆಗಿ ತೆಗೆದುಕೊಳ್ಳಬಹುದು. ಸೂಜಿ ರಹಿತವಾಗಿರುವ iNCOVACC ಲಸಿಕೆ ಜನವರಿ 4ನೇ ವಾರದಲ್ಲಿ ಲಭ್ಯವಾಗಲಿದೆ. ಇದನ್ನೂ ಓದಿ: ಜನರಿಗೆ ಮಾಸ್ಕ್ ಹಾಕಿ ಅನ್ನೋ ಬದಲು ಒಂದಷ್ಟು ಎಚ್ಚರಿಕೆ ಕ್ರಮ ಕೈಗೊಳ್ಳಲಿ: ಖಾದರ್ ಆಗ್ರಹ
ಮೂಗಿನಿಂದ ಪಡೆಯಬಹುದಾದ iNCOVACC ಲಸಿಕೆಯನ್ನು 2 ಡ್ರಾಪ್‌ನಂತೆ ಹಾಕಲಾಗುತ್ತದೆ. ಒಂದು ಬಾರಿ ಈ ಲಸಿಕೆಯನ್ನು ಪಡೆದ ಬಳಿಕ ಇನ್ನೊಂದು ಲಸಿಕೆಯನ್ನು 4 ವಾರಗಳ ಬಳಿಕ ಹಾಕಿಸಿಕೊಳ್ಳಬೇಕಾಗುತ್ತದೆ.
ನವೆಂಬರ್‌ನಲ್ಲಿ ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್‌ನಂತೆ iNCOVACC ಲಸಿಕೆಯನ್ನು ನೀಡಬಹುದು ಎಂದು ಅನುಮೋದನೆ ನೀಡಿತ್ತು. ಇದನ್ನೂ ಓದಿ: ವೈಕುಂಠ ಏಕಾದಶಿ, ಸಂಕ್ರಾಂತಿಗೂ ಕೊರೊನಾ ಕರಿನೆರಳು – ದೇವಾಲಯಗಳಿಗೆ ಟಫ್ ರೂಲ್ಸ್?