ವಾಸಿಂಗ್ಟನ್: ಅನ್ಯಗ್ರಹದ ಜೀವಿಗಳು ಭೂಮಿಗೆ ಕಾಲಿಟ್ಟಿವೆ. ಆದರೆ ಅವುಗಳನ್ನು ಗುರುತಿಸಲು ನಮಗೆ ಸಾಧ್ಯವಾಗಿಲ್ಲ ಎಂದು ನಾಸಾದ ವಿಜ್ಞಾನಿಯೊಬ್ಬರು ಹೇಳಿದ್ದಾರೆ.
ನಾಸಾದ ಕಂಪ್ಯೂಟರ್ ವಿಜ್ಞಾನಿ, ಎಮ್ಸ್ ಸಂಶೋಧನ ಕೇಂದ್ರದ ಪ್ರೊಫೆಸರ್ ಸಿಲ್ವನೋ ಪಿ ಕೊಲೊಂಬನೊ ಎಂಬವರು ಈ ಕುರಿತು ಸಂಶೋಧನ ಮಾಡಿದ್ದಾರೆ. ಈಗಾಗಲೇ ಎಲಿಯನ್ಸ್ ಭೂಮಿಗೆ ಆಗಮಿಸಿದ್ದು, ಮಾನವನ ಕಲ್ಪನೆಗಿಂತಲೂ ಭಿನ್ನವಾಗಿವೆ. ಅವುಗಳು ಕಾರ್ಬನ್ ಆಧಾರಿತ ಜೀವಿಗಳಾಗಿದ್ದು, ಕಾಣಿಸಿಕೊಳ್ಳದೆ ಉಳಿದುಕೊಂಡಿವೆ ಎಂದು ತಿಳಿಸಿದ್ದಾರೆ.
Advertisement
ಈಗಾಗಲೇ ಪತ್ತೆ ಮಾಡಲಾಗದ ಅನ್ಯಗ್ರಹದ ಜೀವಿಗಳು ಭೂಮಿ ಬಂದಿರಬಹುದು ಎಂದು ನಾನು ಊಹಿಸಿದ್ದೇನೆ. ಅವುಗಳ ಬಗ್ಗೆ ಇರುವ ನಮ್ಮ ಕಲ್ಪನೆಗಳನ್ನು ಪಾಲಿಸಬೇಕು. ಜೊತೆಗೆ ವಿಭಿನ್ನ ವಿಚಾರ ಗುಣಲಕ್ಷಣ ಹೊಂದಿರುವುದನ್ನು ಪರಿಗಣಿಸಬೇಕಾಗುತ್ತದೆ. ಈಗಾಗಲೇ ಏಲಿಯನ್ಸ್ ಭೂಮಿಗೆ ಕಾಲಿಟ್ಟು ಸಂಚಾರ ಆರಂಭಿಸಿವೆ ಎಂದು ಸಿಲ್ವನೋ ಅವರು ತಮ್ಮ ಸಂಶೋಧನಾ ಪ್ರಬಂಧದಲ್ಲಿ ತಿಳಿಸಿದ್ದಾರೆ.
Advertisement
Advertisement
ಕೇವಲ ಕಲ್ಪನೆ ಆಧಾರದ ಮೇಲೆ ಉಳಿದುಕೊಳ್ಳದೆ, ಹೀಗಾಗಿ ಉನ್ನತ ತಂತ್ರಜ್ಞಾನ ಹಾಗೂ ಇಂಟೆಲಿಜೆನ್ಸ್ ಮೂಲಕ ಎಲಿಯನ್ಸ್ ಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯಬೇಕಿದೆ. ಭೂಮಿಯ ಮೇಲೆ ಸುಮಾರು 10 ಸಾವಿರ ವರ್ಷಗಳ ಹಿಂದೆ ಮಾನವ ತಂತ್ರಜ್ಞಾನವನ್ನು ಬಳಕೆ ಮಾಡಲು ಪ್ರಾರಂಭಿಸಿದ. ಆದರೆ ವೈಜ್ಞಾನಿಕ ಅಧ್ಯಯನ ವಿಧಾನವನ್ನು ಅಳವಡಿಸಿಕೊಂಡಿದ್ದು 500 ವರ್ಷಗಳ ಹಿಂದೆ. ಹೀಗಾಗಿ ವೈಜ್ಞಾನಿಕ ಅಧ್ಯಯನ ಇನ್ನೂ ಸಾಕಷ್ಟು ಆಗಬೇಕಿದೆ ಎನ್ನುವ ಸಲಹೆಯನ್ನು ನೀಡಿದ್ದಾರೆ.
Advertisement
ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದ್ದರೂ, ಈ ತಂತ್ರಜ್ಞಾನಗಳನ್ನು ತಪ್ಪಿಸಿಕೊಂಡು ಭೂಮಿಯನ್ನು ಏಲಿಯನ್ಸ್ ಪ್ರವೇಶ ಮಾಡುತ್ತಿವೆ ಎಂದು ಅವರು ತಮ್ಮ ಸಂಶೋಧನಾ ಲೇಖನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv