ವಾಷಿಂಗ್ಟನ್: 13 ದಶಕೋಟಿ ವರ್ಷಗಳಷ್ಟು ಹಿಂದೆ ಜಗತ್ತು ಹೇಗಿತ್ತು? ಅಂದಿನ ಆಗಸದಲ್ಲಿ ಕಾಣುತ್ತಿದ್ದ ಶತಕೋಟಿ ತಾರೆಗಳು, ನಕ್ಷತ್ರಪುಂಜಗಳು ಯಾವ ಬಣ್ಣದಲ್ಲಿ ಕಂಗೊಳಿಸುತ್ತಿದ್ದವು? ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ವೈಟ್‌ಹೌಸ್‌ನಲ್ಲಿ, 13 ದಶಕೋಟಿ ವರ್ಷಗಳಷ್ಟು ಹಿಂದಿನ ಬಾಹ್ಯಾಕಾಶ ಲೋಕವನ್ನು ತೆರೆದಿಡಲಾಗಿದೆ.
Advertisement
ಜೇಮ್ಸ್ ವೆಬ್ ಟೆಲಿಸ್ಕೋಪ್ ಅತ್ಯದ್ಭುತ ಚಿತ್ರಗಳನ್ನು ಸೆರೆಹಿಡಿದಿದ್ದು, ಇದು ಪ್ರಪಂಚ ಹುಟ್ಟಿದ ಸಮಯ ಆಕಾಶ ಹೇಗೆ ಕಾಣಿಸುತ್ತಿತ್ತು ಎಂಬುದನ್ನು ಬಹಿರಂಗಪಡಿಸಿದೆ. ನೀಲಿ, ಕಿತ್ತಳೆ ಹಾಗೂ ಬಿಳಿ ಬಣ್ಣದಲ್ಲಿರುವ ಗ್ಯಾಲಾಕ್ಸಿಗಳು ಗಮನ ಸೆಳೆದಿವೆ. ಇನ್ನೂ ವಿಶೇಷವಾಗಿ ಈ ಟೆಲಿಸ್ಕೋಪ್ ತೆಗೆದಿರುವ ಮೊದಲ ಚಿತ್ರ ಇದಾಗಿದೆ. ಇದನ್ನೂ ಓದಿ: ಶಾರ್ಟ್‌ಕಟ್ ರಾಜಕೀಯದ ಮೂಲಕ ಮತಗಳನ್ನು ಸೆಳೆಯುವುದು ತುಂಬಾ ಸುಲಭ: ಪ್ರಧಾನಿ ಮೋದಿ
Advertisement
Advertisement
2021ರ ಡಿಸೆಂಬರ್‌ನಲ್ಲಿ ಜೇಮ್ಸ್ ವೆಬ್ ಟೆಲಿಸ್ಕೋಪ್ ಅನ್ನು ಅಮೆರಿಕ ಅಂತರಿಕ್ಷಕ್ಕೆ ಕಳುಹಿಸಿತ್ತು. ವಿಶ್ವದ ಸೃಷ್ಟಿಗೆ ಕಾರಣವಾದ ಬಿಗ್‌ಬ್ಯಾಂಗ್ (ಮಹಾಸ್ಫೋಟ) ಸಂಭವಿಸಿದ 800 ವರ್ಷಗಳ ಬಳಿಕದ ಚಿತ್ರಣ ಇದು ಎಂದು ತಜ್ಞರು ಅಂದಾಜು ಮಾಡಿದ್ದು, ಇದೊಂದು ಐತಿಹಾಸಿಕ ದಿನ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಬಣ್ಣಿಸಿದ್ದಾರೆ. ಇದನ್ನೂ ಓದಿ: ಬುಮ್ರಾ ಬೌಲಿಂಗ್ ದಾಳಿಗೆ ತತ್ತರಿಸಿದ ಆಂಗ್ಲರು – ಭಾರತಕ್ಕೆ 10 ವಿಕೆಟ್‌ಗಳ ಭರ್ಜರಿ ಜಯ
Advertisement
Better together. International collaboration gave us the most powerful space telescope ever made, and the deepest infrared views of the universe ever seen. With our partners at @ESA and @CSA_ASC, the science can begin. Together we #UnfoldTheUniverse: https://t.co/oFA1ja4jeP pic.twitter.com/8TXTZEIb6H
— NASA (@NASA) July 12, 2022
ಇನ್ನು ಮುಂದೆ ಸೃಷ್ಟಿಗೆ ಕಾರಣವಾದ, ವಿಸ್ಮಯ ವಿಚಾರಗಳು ಹಾಗೂ ಅತ್ಯಗತ್ಯ ಮಾಹಿತಿಗಳನ್ನು ಜೇಮ್ಸ್ ವೆಬ್ ಟೆಲಿಸ್ಕೋಪ್ ಫೋಟೋಗಳನ್ನು ಸೆರೆಹಿಡಿಯುವ ಮೂಲಕ ಒದಗಿಸಲಿದೆ.