Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬೆಂಗಳೂರು ವಿದ್ಯಾರ್ಥಿಗಳೊಂದಿಗೆ ನಾಸಾ, ಇಸ್ರೋ ಅಧಿಕಾರಿಗಳ ಸಂವಾದ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಬೆಂಗಳೂರು ವಿದ್ಯಾರ್ಥಿಗಳೊಂದಿಗೆ ನಾಸಾ, ಇಸ್ರೋ ಅಧಿಕಾರಿಗಳ ಸಂವಾದ

Bengaluru City

ಬೆಂಗಳೂರು ವಿದ್ಯಾರ್ಥಿಗಳೊಂದಿಗೆ ನಾಸಾ, ಇಸ್ರೋ ಅಧಿಕಾರಿಗಳ ಸಂವಾದ

Public TV
Last updated: November 29, 2023 10:33 pm
Public TV
Share
3 Min Read
NASA ISRO officials interact with Bengaluru students Bill Nelson shantanu bhatawdekar rakesh sharma 1
SHARE

– ಅಮೆರಿಕ-ಭಾರತ ಸಹಭಾಗಿತ್ವದ ಅತ್ಯುತ್ತಮ ಉದಾಹರಣೆ– ಬಿಲ್‌ ನೆಲ್ಸನ್‌

ಬೆಂಗಳೂರು: ನಾಸಾ (NASA) ಅಡ್ಮಿನಿಸ್ಟ್ರೇಟರ್‌ ಬಿಲ್‌ ನೆಲ್ಸನ್‌ (Bill Nelson) ಅವರು ಬೆಂಗಳೂರಿನ ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್‌ ‍ಆಂಡ್‌ ಟೆಕ್ನಲಾಜಿಕಲ್‌ ಮ್ಯೂಸಿಯಂನಲ್ಲಿ (VITM) ನಲ್ಲಿ “ರೀಚಿಂಗ್‌ ಫಾರ್‌ ದ ಸ್ಟಾರ್ಸ್‌: ಎ ಕಾನ್ವರ್ಸೇಷನ್‌ ವಿತ್‌ ನಾಸಾ ಅಂಡ್‌ ಇಸ್ರೋ” ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ವಿದ್ಯಾರ್ಥಿಗಳಲ್ಲಿ ಕುತೂಹಲ ಮತ್ತು ಅನ್ವೇಷಣೆಯ ಮನೋಭಾವ ಬೆಳೆಸುವುದನ್ನು ಗುರಿಯಾಗಿಟ್ಟುಕೊಂಡು ಅಮೇರಿಕ ಸರ್ಕಾರ ಮತ್ತು ವಿಐಟಿಎಂ ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು.

ಈ ಸಂದರ್ಭದಲ್ಲಿ ಮಾತನಾಡಿದ ಬಿಲ್‌ ನೆಲ್ಸನ್‌, ವಿದ್ಯಾರ್ಥಿಗಳಿಗೆ ಜ್ಞಾನ ಮತ್ತು ಶ್ರೇಷ್ಠತೆಯ ಅನ್ವೇಷಣೆಯಲ್ಲಿ ಕುತೂಹಲ, ಪರಿಶ್ರಮ ಮತ್ತು ಉತ್ಸಾಹದ ಮಹತ್ವವನ್ನು ವಿವರಿಸಿದರು. ಬಾಹ್ಯಾಕಾಶ ವಲಯದಲ್ಲಿ ಅಮೇರಿಕ ಮತ್ತು ಭಾರತದ ನಡುವೆ ಸತತ ಬೆಳೆಯುತ್ತಿರುವ ಸಹಭಾಗಿತ್ವವನ್ನು ಎತ್ತಿ ತೋರಿಸಿದ ಅವರು, ಬಾಹ್ಯಾಕಾಶ ಅನ್ವೇಷಣೆಯಲ್ಲಿ ದೇಶಗಳು ಜತೆಯಾಗಿ ಕೆಲಸ ಮಾಡಿದಾಗ ಬಹಳಷ್ಟು ಸಾಧಿಸಬಹುದಾಗಿದೆ ಎಂದರು.

NASA ISRO officials interact with Bengaluru students Bill Nelson shantanu bhatawdekar rakesh sharma 2

ವಿಶ್ವಾದ್ಯಂತ ಇರುವ ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಆಳವಾದ ಅಧ್ಯಯನ ಮಾಡಲು ಉತ್ಸುಕರಾಗಿದ್ದಾರೆ, ಅದು ಅವರನ್ನು ಭವಿಷ್ಯದ ಅನ್ವೇಷಕರು ಮತ್ತು ಮಾನವಕುಲವನ್ನು ಹೊಸ ಎತ್ತರಕ್ಕೆ ಕರೆದೊಯ್ಯುವ ನಿಟ್ಟಿನಲ್ಲಿ ಸಿದ್ಧಗೊಳಿಸುತ್ತಿದೆ. ಇದುವರೆಗೆ ಹೆಜ್ಜೆಮೂಡದ ನೆಲದಲ್ಲಿ ಪ್ರಪಂಚದ ಅನೇಕ ರಹಸ್ಯಗಳನ್ನು ಬಿಡಿಸಲಿದ್ದಾರೆ ಎಂದು ಹೇಳಿದರು.

ಬೆಂಗಳೂರಿಗೆ ಬಂದಿರುವುದು ಬಹು ಗೌರವದ ವಿಷಯ. ಇಲ್ಲಿ ನಾಸಾ ಮತ್ತು ಇಸ್ರೋ (ISR) ಜತೆಯಾಗಿ ಅರ್ಟಿಮಿಸ್‌ ಸದಸ್ಯರು, ಉಭಯ ದೇಶಗಳು ಹಾಗೂ ಇಡೀ ವಿಶ್ವಕ್ಕೇ ಅನುಕೂಲವಾಗುವ ಹೊಸ ಸಾಧ್ಯತೆಗಳ ಬಗ್ಗೆ ಜತೆಯಾಗಿ ಕೆಲಸ ಮಾಡಲಿದ್ದಾರು ಎಂದು ತಿಳಿಸಿದರು.

ಇದಲ್ಲದೇ ಉಭಯ ದೇಶಗಳ ಮುಂಬರುವ ಜಂಟಿ ನೈಸಾರ್‌ (ನಾಸಾ- ಇಸ್ರೋ ಸಿನ್‌ಥೆಟಿಕ್‌ ಅಪಾರ್ಚರ್‌ ರಾಡಾರ್‌) ಮಿಷನ್‌ 2024 ರಲ್ಲಿ ಉಡ್ಡಯನಗೊಳ್ಳಲು ನಿಗದಿಯಾಗಿದೆ. ಇದು ಬಾಹ್ಯಾಕಾಶ ವಲಯದಲ್ಲಿ ಅಮೆರಿಕ ಮತ್ತು ಭಾರತದ ಸಹಯೋಗವು ಹೇಗೆ ಪ್ರಪಂಚದ ಎಲ್ಲರಿಗೆ ಒಳಿತು ಮಾಡುತ್ತದೆ ಎಂಬುದರ ದ್ಯೋತಕವಾಗಿದೆ. ನೈಸಾರ್‌ನ ದತ್ತಾಂಶವು ವಿಶ್ವಾದ್ಯಂತ ನೈಸರ್ಗಿಕ ಸಂಪನ್ಮೂಲಗಳ ಸಮರ್ಥ ನಿರ್ವಹಣೆ ಮತ್ತು ಪ್ರಕೃತಿವಿಕೋಪಗಳಿಂದ ರಕ್ಷಣೆಗೆ ನೆರವಾಗುವುದಲ್ಲದೆ, ಹವಾಮಾನ ಬದಲಾವಣೆಯ ಗತಿ ಮತ್ತು ಅದರ ಪರಿಣಾಮಗಳ ಬಗ್ಗೆ ವಿಜ್ಞಾನಿಗಳಿಗೆ ಹೆಚ್ಚಿನ ಮಾಹಿತಿ ನೀಡಲಿದೆ.  ಇದನ್ನೂ ಓದಿ: ಇನ್ನು ಮುಂದೆ ಬೇಕಾಬಿಟ್ಟಿ ಸಿಮ್‌ ಕಾರ್ಡ್‌ ಖರೀದಿಸುವಂತಿಲ್ಲ – ಡಿ.1ರಿಂದ ಜಾರಿಯಾಗಲಿರುವ ಕಠಿಣ ನಿಯಮಗಳು ಏನು?

ಇಸ್ರೋ ಮತ್ತು ನಾಸಾದ ನಡುವಣ ಸುದೀರ್ಘ ಸಹಕಾರವನ್ನು ನೆನಸಪಿಸಿಕೊಂಡ ಇಸ್ರೋ ಸೈಟಿಫಿಕ್‌ ಸೆಕ್ರಟರಿ ಶಂತನು ಭಟವ್ಡೇಕರ್‌, ಗಗನಯಾನದಲ್ಲಿ ಎರಡೂ ಸಂಸ್ಥೆಗಳ ನಡುವಣ ಸಹಕಾರ ಮುಂದುವರಿದಿದೆ. ಮುಂದಿನ ದಿನಗಳಲ್ಲಿ ನೈಸಾರ್‌ ಕೊಡುವ ದತ್ತಾಂಶದ ಬಗ್ಗೆ ಕಾಯುತ್ತಿದ್ದೇವೆ ಎಂದರು.

 ಭಾರತದ ಗಗನಯಾತ್ರಿ ರಾಕೇಶ್‌ ಶರ್ಮಾ ಮಾತನಾಡಿ,  ಆರ್ಟೆಮಿಸ್ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ನಾವು ಸಹಭಾಗಿತ್ವದ ಪ್ರಯತ್ನಗಳಲ್ಲಿ ತೊಡಗಿರುವಾಗ, ಎಲ್ಲರ ಪ್ರಯೋಜನಕ್ಕಾಗಿ ಎಂಬ ನಾಸಾದ ಮಾರ್ಗದರ್ಶಿ ತತ್ವದೊಂದಿಗೆ ಭಾರತದ ಸಾಂಸ್ಕೃತಿಕ ಮೌಲ್ಯಗಳ ಜೋಡಣೆಯನ್ನು ನಾನು ಕುತೂಹಲದಿಂದ ನಿರೀಕ್ಷಿಸುತ್ತೇನೆ ಎಂದು ಹೇಳಿದರು.

ವೈವಿಧ್ಯಮಯ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳು 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ನಾಸಾ ಅಡ್ಮಿನಿಸ್ಟ್ರೇಟರ್‌ ಮತ್ತು ಗಗನಯಾತ್ರಿ ರಾಕೇಶ್‌ ಶರ್ಮಾ ಅವರ ಯಾನ, ಬಾಹ್ಯಾಕಾಶ ಪರಿಶೋಧನೆಯಲ್ಲಿನ ಬೆಳವಣಿಗೆಗಳು, ವಿಜ್ಞಾನಿ, ಎಂಜಿನಿಯರ್‌ ಆಗ ಬಯಸುವವರಿಗೆ ರುವ ಅವಕಾಶಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

 

ವಿಐಟಿಎಂ ನಿರ್ದೇಶಕಿ ಕೆ.ಎ. ಸಾಧನಾ ಅತಿಥಿಗಳನ್ನು ಸ್ವಾಗತಿಸಿದರು, ಚೆನ್ನೈ ದೂತಾವಾಸದ ವಕ್ತಾರರಾದ ಸಮಾಂತಾ ಜಾಕ್ಸನ್‌, ತಮ್ಮ ಸಮಯ ಮತ್ತು ಜ್ಞಾನದ ಮೂಲಕ ಯುವ ಮನಸ್ಸುಗಳಿಗೆ ಪ್ರೇರಣೆ ನೀಡಿದ್ದಕ್ಕಾಗಿ ಗಣ್ಯರಿಗೆ ಧನ್ಯವಾದ ಅರ್ಪಿಸಿದರು. ಚೆನ್ನೈ ದೂತಾವಾಸದ ವಕ್ತಾರರ ಕಚೇರಿಯು ನಾಸಾ- ಇಸ್ರೊ ಬಾಹ್ಯಾಕಾಶ ರಾಜತಾಂತ್ರಿಕತೆಯ ಭಾಗವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ, ಮಾಧ್ಯಮ ಸಂವಾದವನ್ನು ಆಯೋಜಿಸಿತ್ತು.

TAGGED:bengalurueducationindiaISRONASAಇಸ್ರೋನಾಸಾಬೆಂಗಳೂರುಭಾರತ
Share This Article
Facebook Whatsapp Whatsapp Telegram

Cinema news

Keerthy Suresh
ಕೀರ್ತಿ ಇಟ್ಟ ಗುರಿಗೆ ಫೋಟೋಗ್ರಾಫರ್ ಕಣ್ಣೇ ಹೋಯ್ತು..!
Cinema Latest South cinema
Kerala Court 2
ಖ್ಯಾತ ಬಹುಭಾಷಾ ನಟಿ ಮೇಲೆ ಲೈಂಗಿಕ ದೌರ್ಜನ್ಯ – 6 ಆರೋಪಿಗಳಿಗೆ 20 ವರ್ಷ ಜೈಲು
Cinema Court Latest Main Post National South cinema
Salman Khan Sharukh Khan
ಸಲ್ಮಾನ್-ಶಾರುಖ್ ಫ್ಯಾನ್ಸ್‌ಗೆ ಭರ್ಜರಿ ನ್ಯೂಸ್.. ಶೀಘ್ರದಲ್ಲೇ ಪಠಾಣ್-2!
Bollywood Cinema Latest Top Stories
Rishab Shetty
ಕಾಗದದ ಮೇಲೆ ಹುಟ್ಟಿದ ಪಾತ್ರ ಜೀವ ಪಡೆದಾಗ… `ಕಾಂತಾರ’ದ ಆತ್ಮಕಥೆ ಬಿಚ್ಚಿಟ್ಟ ರಿಷಬ್
Cinema Latest Sandalwood Top Stories

You Might Also Like

In a first since partition Pakistan brings course on Sanskrit to launch program on Bhagavad Gita
Latest

ದೇಶ ವಿಭಜನೆ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ವಿವಿಯಲ್ಲಿ ಸಂಸ್ಕೃತ ಕೋರ್ಸ್

Public TV
By Public TV
7 minutes ago
nice road
Bengaluru City

ನೈಸ್‌ ರಸ್ತೆಯಲ್ಲಿ ಹಿಟ್ ಆ್ಯಂಡ್ ರನ್‌ಗೆ ಇಬ್ಬರು ಮಹಿಳಾ ಕಾರ್ಮಿಕರು ಬಲಿ

Public TV
By Public TV
14 minutes ago
Subhash Guttedar
Bengaluru City

ಆಳಂದದಲ್ಲಿ ಗುತ್ತೇದಾರ್ ಸೂತ್ರದಂತೆ ಮತಗಳವು – ಎಸ್‌ಐಟಿಯಿಂದ ಚಾರ್ಜ್‌ಶೀಟ್‌

Public TV
By Public TV
34 minutes ago
Shivamogga Crime Murder MANJUNATH
Crime

ಪ್ರೇಮಿಗಳಿಗೆ ಸಹಕರಿಸಿದ್ದಕ್ಕೆ ಭದ್ರಾವತಿಯಲ್ಲಿ ಡಬಲ್‌ ಮರ್ಡರ್‌ – ಐವರು ಅರೆಸ್ಟ್‌

Public TV
By Public TV
43 minutes ago
daily horoscope dina bhavishya
Astrology

ದಿನ ಭವಿಷ್ಯ 13-12-2025

Public TV
By Public TV
2 hours ago
Mysuru Palace 2
Districts

ಮೈಸೂರು | ಅರಮನೆಯ ಜಯರಾಮ-ಬಲರಾಮ ದ್ವಾರದ ಗೋಡೆಯಲ್ಲಿ ಭಾರೀ ಬಿರುಕು

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?