ಗಗನಯಾತ್ರಿಗಳ ಮೂತ್ರ, ಬೆವರಿನಿಂದಲೇ ಕುಡಿಯುವ ನೀರಿನ ಉತ್ಪಾದನೆ – ಬಾಹ್ಯಾಕಾಶದಲ್ಲಿ ಮಹತ್ವದ ಸಂಶೋಧನೆ

Public TV
1 Min Read
International Space Station

ವಾಷಿಂಗ್ಟನ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (International Space Station) ನಾಸಾ ಗಗನಯಾತ್ರಿಗಳು ಮಹತ್ವದ ಸಾಧನೆಗೈದಿದ್ದಾರೆ.

ಗಗನಯಾತ್ರಿಗಳ ಮೂತ್ರ ಹಾಗೂ ಬೆವರನ್ನು ನೀರಾಗಿ ಪರಿವರ್ತಿಸುವ ವಿಧಾನವನ್ನ ಕಂಡುಹಿಡಿಯಲಾಗಿದೆ. ಈ ವಿಧಾನವು ಬಾಹ್ಯಾಕಾಶದಲ್ಲಿ ನೀರಿನ ಕೊರತೆ ಪ್ರಮಾಣ ತಗ್ಗಿಸಲಿದೆ ಎಂದು ನಾಸಾ ಹೇಳಿದೆ. ಇದನ್ನೂ ಓದಿ: 2024ಕ್ಕೆ ನಾಸಾ-ಇಸ್ರೋ ಜಂಟಿ ಬಾಹ್ಯಾಕಾಶ ಯಾನ – ಭಾರತ-US ನಡುವೆ ಒಪ್ಪಂದ

International Space Station 1

ಬಾಹ್ಯಾಕಾಶ ಸಂಸ್ಥೆಯು (Space Agency) ತಿಳಿಸಿರುವಂತೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೆ ಕುಡಿಯಲು, ಆಹಾರ ತಯಾರಿಕೆ ಹಾಗೂ ನೈರ್ಮಲ್ಯದ ಬಳಕೆಗಾಗಿ ಪ್ರತಿದಿನ 1 ಗ್ಯಾಲನ್‌ನಷ್ಟು (ಸುಮಾರು 3 ಲಕ್ಷ ಲೀಟರ್‌ಗೂ ಅಧಿಕ) ನೀರು ಬೇಕಾಗುತ್ತದೆ. ಸದ್ಯ ಗಗನ ಯಾತ್ರಿಗಳು ಕಂಡುಹಿಡಿದಿರುವ ನೀರಿನ ಮರುಸ್ಥಾಪನೆಯ ವಿಧಾನದಿಂದ ಶೇ.98 ರಷ್ಟು ಚೇತರಿಕೆ ಸಾಧ್ಯವಾಗಲಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಮುಸ್ಲಿಂ ರಾಷ್ಟ್ರಗಳ ಮೇಲೆ ಬಾಂಬ್‌ ದಾಳಿ ನಡೆಸಿದವರು ರಕ್ಷಣೆ ಬಗ್ಗೆ ಮಾತಾಡೋದು ಹಾಸ್ಯಾಸ್ಪದ – ನಿರ್ಮಲಾ ಸೀತಾರಾಮನ್‌

mystery chinese spacecraft

ಇದರೊಂದಿಗೆ ಬಾಹ್ಯಾಕಾಶದಲ್ಲಿ ಪರಿಸರ ನಿಯಂತ್ರಣ ಮತ್ತು ಜೀವನಕ್ಕೆ ಸಹಕಾರಿಯಾಗುವ ವ್ಯವಸ್ಥೆಗಳನ್ನು (ECLSS) ಬಳಸಿಕೊಂಡು ಆಹಾರ, ಗಾಳಿ ಮತ್ತು ನೀರಿನಂತಹ ಉಪಯುಕ್ತ ವಸ್ತುಗಳನ್ನ ಪುನರುತ್ಪಾದಿಸುವ ಗುರಿಯನ್ನು ಹೊಂದಲಾಗಿದೆ.

ಇಸಿಎಲ್‌ಎಸ್‌ಎಸ್ ವಿಧಾನವು ಒಂದು ಯಂತ್ರಾಂಶದ ಸಂಯೋಜನೆಯಾಗಿದೆ. ಇದು ತ್ಯಾಜ್ಯದ ನೀರನ್ನು ಸಂಗ್ರಹಿಸಿಕೊಂಡು ವಾಟರ್ ಪ್ರೊಫೆಸಟರ್ ಅಸೆಂಬ್ಲಿಗೆ (WPA) ಕಳುಹಿಸುವ ಮೂಲಕ ನೀರು ಕುಡಿಯಲು ಯೋಗ್ಯವಾಗುವ ರೀತಿಯಲ್ಲಿ ಉತ್ಪಾದಿಸುತ್ತದೆ. ಜೊತೆಗೆ ಇಲ್ಲಿ ಸಿಬ್ಬಂದಿಯ ಉಸಿರು ಮತ್ತು ಬೆವರಿನಿಂದ ಬಿಡುಗಡೆಯಾಗುವ ತೇವಾಂಶವನ್ನ ಸೆರೆ ಹಿಡಿಯಲು ಕ್ಯಾಬಿನ್ ಏರ್ ವಿಶೇಷ ಘಟಕವನ್ನೂ ಸ್ಥಾಪಿಸಲಾಗಿದೆ.

ಇಲ್ಲಿ ಪುನರುತ್ಪಾದಿಸಲಾಗುವ ನೀರು ಭೂಮಿಯಲ್ಲಿ ನೀರಿನ ವಿತರಣಾ ವ್ಯವಸ್ಥೆಯನ್ನೇ ಹೋಲುತ್ತದೆ. ಆದ್ರೆ ಭೂಮಿಯಲ್ಲಿ ಸಿಗುವ ಕುಡಿಯುವ ನೀರಿಗಿಂತಲೂ ಹೆಚ್ಚು ಶುಚಿಯಾಗಿರುತ್ತದೆ. ಏಕೆಂದರೆ ಪುನರುತ್ಪಾದಿಸಲಾದ ನೀರನ್ನು ಫಿಲ್ಟರ್ ಮಾಡಲಾಗಿರುತ್ತದೆ ಎಂದು ಇಸಿಎಲ್‌ಎಸ್‌ಎಸ್ ವ್ಯವಸ್ಥಾಪಕ ಜಿಲ್. ವಿಲಿಯಮ್ಸ್ ತಿಳಿಸಿದ್ದಾರೆ.

Share This Article