ಡೆಹ್ರಾಡೂನ್: ಉತ್ತರಾಖಂಡದ ರಸ್ತೆಯಲ್ಲಿ ಬಸ್ಸೊಂದು ಸಂಚರಿಸುತ್ತಿರುವಾಗಲೇ ಮುಂದಿದ್ದ ಗುಡ್ಡವೊಂದು ಭೀಕರವಾಗಿ ಕುಸಿತಕಂಡಿದೆ. ಪರಿಣಾಮ ಕೊದಲೆಳೆ ಅಂತರದಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪರಾಗಿರುವ ವೀಡಿಯೋ ವೈರಲ್ ಅಗುತ್ತಿದೆ.
Advertisement
ಉತ್ತರಾಖಂಡ ರಾಜ್ಯದ ನೈನಿತಾಲ್ ಎಂಬ ಪ್ರದೇಶದಲ್ಲಿ ಗುಡ್ಡ ಕುಸಿತಗೊಂಡಿರುವುದು. ಈ ಪ್ರದೇಶದಲ್ಲಿರುವ ಸಣ್ಣ ರಸ್ತೆಯೊಂದರಲ್ಲಿ ಬಸ್ 14 ಮಂದಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿತ್ತು. ಈ ವೇಳೆ ಏಕಾಏಕಿ ಮುಂದಿದ್ದ ಗುಡ್ಡ ಕುಸಿತಗೊಂಡಿದೆ. ಕೂಡಲೇ ಬಸ್ಸಿನ ಚಾಲಕ ಬಸ್ಸನ್ನು ಹಿಮ್ಮುಖವಾಗಿ ಚಲಾಯಿಸಿ ಪ್ರಯಾಣಿಕರನ್ನು ರಕ್ಷಿಸಿದ್ದಾನೆ. ಇದನ್ನೂ ಓದಿ: ಐಪಿಎಬೆಕ್ಕಿಗಾಗಿಯೇ ಎಸಿ ರೂಮ್, ಮಿನಿ ಥಿಯೇಟರ್ ನಿರ್ಮಾಣ – ಗುಜರಾತಿನಲ್ಲೊಬ್ಬ ಕ್ಯಾಟ್ ಪ್ರಿಯ
Advertisement
Advertisement
ಈ ವೀಡಿಯೋದಲ್ಲಿ ಗುಡ್ಡ ಕುಸಿತಗೊಳ್ಳುತ್ತಿದ್ದಂತೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಭಯದಿಂದ ಬಸ್ಸಿನಿಂದ ಇಳಿದು ಓಡಲು ಪ್ರಯತ್ನಿಸಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಕೂದಲೆಳೆ ಅಂತರದಲ್ಲಿ 14 ಜನ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
Advertisement
#WATCH | Uttarakhand: A bus carrying 14 passengers narrowly escaped a landslide in Nainital on Friday. No casualties have been reported. pic.twitter.com/eyj1pBQmNw
— ANI (@ANI) August 21, 2021
ಉತ್ತರಖಂಡದಲ್ಲಿ ಮುಂದಿನ ಎರಡು ದಿನ ವಿಪರೀತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈಗಾಗಲೇ ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುತ್ತಿದೆ. ಇದನ್ನೂ ಓದಿ: ಷರಿಯತ್ ಕಾನೂನು ಎಂದರೇನು? ಅಫ್ಘಾನ್ ತಾಲಿಬಾನ್ ಹೇಗೆ ಅರ್ಥೈಸುತ್ತದೆ?