ಖ್ಯಾತ ನಟಿ ಖುಷ್ಭೂ ಸುಂದರ್ (Khushboo) ಅವರನ್ನು ಕೇರಳದ (Kerala) ತ್ರಿಶೂರ್ ನ ವಿಷ್ಣುಮಾಯಾ (Vishnumaya) ದೇವಸ್ಥಾನಕ್ಕೆ ಆಹ್ವಾನಿಸಿ ಪಾದಪೂಜೆ ನೆರವೇರಿಸಿದ್ದಾರೆ ಪೂಜಾರಿಗಳು. ಕೇರಳ ವಿಷ್ಣುಮಾಯಾ ದೇವಸ್ಥಾನದಲ್ಲಿ (Temple) ಪ್ರತಿ ವರ್ಷವೂ ಸುಹಾಸಿನಿ ಪೂಜಾ ಹೆಸರಿನಲ್ಲಿ ನಾರಿ ಪೂಜೆಯನ್ನು ಮಾಡಲಾಗುತ್ತಿದೆ. ಪ್ರತಿ ವರ್ಷವೂ ಒಬ್ಬೊಬ್ಬ ಮಹಿಳೆಯನ್ನು ಆಹ್ವಾನಿಸಿ ಈ ರೀತಿ ಪೂಜೆ ನೆರವೇರಿಸಲಾಗುತ್ತದೆ.
Advertisement
ಈ ಬಾರಿ ನಟಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯೂ ಆಗಿರುವ ಖುಷ್ಣೂ ಸುಂದರ್ ಅವರನ್ನು ದೇವಸ್ಥಾನಕ್ಕೆ ಕರೆಯಿಸಿಕೊಂಡು ನಾರಿ ಪೂಜೆಯನ್ನು ಮಾಡಲಾಗಿದೆ. ಪಾದಪೂಜೆ ಸೇರಿದಂತೆ ವಿವಿಧ ಪೂಜಾ ವಿಧಾನಗಳ ಮೂಲಕ ಶಾಸ್ತ್ರೋಕ್ತವಾಗಿ ಪೂಜೆಯನ್ನು ಮಾಡಲಾಗುತ್ತದೆ.
Advertisement
Advertisement
ಪೂಜೆಯಲ್ಲಿ ಮಹಿಳೆಯರಿಗೆ ರೇಷ್ಮೆ ವಸ್ತ್ರಗಳನ್ನು ನೀಡುವುದರ ಜೊತೆ ಪಾದ ಪೂಜೆ ಮಾಡಿ, ಕೊರಳಿಗೆ ಹಾರ ಹಾಕಲಾಗುತ್ತದೆ. ಹೀಗೆ ಮಾಡಿದರೆ ಸ್ವರ್ಗದಿಂದಲೇ ದೇವತೆಯು ಧರೆಗೆ ಬಂದು, ಪಾದ ಪೂಜೆ ಮಾಡಿಸಿಕೊಳ್ಳುತ್ತಾಳೆ ಎನ್ನುವುದು ಅಲ್ಲಿನ ನಂಬಿಕೆ. ಇದನ್ನೂ ಓದಿ:‘ಐ ಯ್ಯಾಮ್ ಇನ್ ಲವ್’ ಅಂತಿದ್ದಾರೆ ರಚಿತಾ ರಾಮ್
Advertisement
ಈ ವಿಷಯವನ್ನು ಸ್ವತಃ ಖುಷ್ಭೂ ಅವರೇ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಂತಹ ಅವಕಾಶ ನನಗೆ ಸಿಕ್ಕಿದ್ದು ನನ್ನ ಅದೃಷ್ಟ, ಶಾಂತಿ ನೆಲೆಸಲು ನಾನು ನಿರಂತರವಾಗಿ ಶ್ರಮಿಸುವೆ ಎಂದೆಲ್ಲ ಅವರು ಬರೆದುಕೊಂಡಿದ್ದಾರೆ.
ಖುಷ್ಬು ಮೂಲತಃ ಮುಸ್ಲಿಂ ಸಮುದಾಯಲ್ಲಿ ಹುಟ್ಟಿದವರು. ಇವರು ಮೂಲ ಹೆಸರು ನಖತ್ ಖಾನ್. ಸಿನಿಮಾ ರಂಗಕ್ಕೆ ಬಂದ ನಂತರ ಮತ್ತು ಮದುವೆಯ ನಂತರ ತಮ್ಮ ಹೆಸರನ್ನು ಬದಲಾಯಿಸಿಕೊಂಡರು. ಇದೀಗ ಖುಷ್ಭೂ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಜೊತೆಗೆ ಅಭಿಮಾನಿಗಳು ಖುಷ್ಭೂಗಾಗಿ ದೇವಸ್ಥಾನವೊಂದನ್ನು ಕಟ್ಟಿದ್ದಾರೆ.
Web Stories