ಬೆಂಗಳೂರು: ನಗರದ ಕಾರ್ಯಕ್ರಮದವೊಂದರಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಹೌದು. ನಗರದ ಬಿ.ಮಾರೇನಹಳ್ಳಿಯಲ್ಲಿರುವ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ & ಟೆಕ್ನಾಲಜಿ ಸೆಂಟರ್ ನ ಉದ್ಘಾಟನೆ ಹಾಗೂ ಬೋಯಿಂಗ್ ಸುಕನ್ಯಾ ಲೋಕಾರ್ಪಣೆ ಮಾಡಿ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬೆಂಗಳೂರಿಗೆ ಆಗಮಿಸಿದರು. ಅಂತೆಯೇ ಬೋಯಿಂಗ್ ಸುಕನ್ಯಾ ಯೋಜನೆ ಲೋಕಾರ್ಪಣೆ ಮಾಡಿದ ಬಳಿಕ ತಮ್ಮ ಬಾಷಣದಲ್ಲಿ ಮೋದಿಯವರು ಸಿದ್ದರಾಮಯ್ಯನವರ (Siddaramaiah) ಕಾಲೆಳೆದಿದ್ದಾರೆ. ಇದರ ವೀಡಿಯೋ ತುಣುಕು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Advertisement
Advertisement
ಮೋದಿ ಹೇಳಿದ್ದೇನು..?: ಮೋದಿಯವರು ಮಾತನಾಡುತ್ತಾ ವೈಮಾನಿಕ ರಂಗ ವೇಗವಾಗಿ ಬೆಳೆಯುತ್ತಿದೆ. ಈ ಮೂಲಕ ಭಾರತದ ಆರ್ಥಿಕತೆಯ ದಿಕ್ಕು ಬದಲಾಗುತ್ತಿದೆ. ಉದ್ಯೋಗವಕಾಶಗಳೂ ಹೆಚ್ಚಾಗಿವೆ. ಬೋಯಿಂಗ್ ಹಾಗೂ ಬೇರೆ ಅಂತರಾಷ್ಟ್ರೀಯ ವೈಮಾನಿಕ ಕಂಪನಿಗಳಿಗೂ ಭಾರತಕ್ಕೆ ಬರಲು ಇದೇ ಸರಿಯಾದ ಸಮಯ. ಕೇಂದ್ರದಲ್ಲಿ ಈಗ ಸ್ಥಿರ ಸರ್ಕಾರ ಇದೆ ಅಂತಾ ಮೋದಿ ಹೇಳಿದರು. ಇದನ್ನೂ ಓದಿ: ಬೋಯಿಂಗ್ ಸುಕನ್ಯಾ ಕಾರ್ಯಕ್ರಮ ಹೆಣ್ಣುಮಕ್ಕಳ ಸಾಮರ್ಥ್ಯ ಇನ್ನಷ್ಟು ಹೆಚ್ಚಿಸಲಿದೆ: ಮೋದಿ
Advertisement
ಮೋದಿಯವರು ಭಾರತದಲ್ಲಿ ಸ್ಥಿರ ಸರ್ಕಾರ ಇದೆ ಎಂದು ಹೇಳುತ್ತಿದ್ದಂತೆಯೇ ನೆರೆದಿದ್ದ ಬೋಯಿಂಗ್ ಸಂಸ್ಥೆಯ ಸಿಬ್ಬಂದಿ ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಸಿಎಂ ಕಡೆ ತಿರುಗಿ, ಮುಖ್ಯಮಂತ್ರಿಗಳೇ ಹೀಗೆಲ್ಲ ಆಗುತ್ತಿರುತ್ತದೆ ಅಂತ ಹೇಳುವ ಮೂಲಕ ಮೋದಿ ಕಾಲೆಳೆದಿದ್ದಾರೆ.
Advertisement
ಬೋಯಿಂಗ್ ಸುಕನ್ಯಾ ಕಾರ್ಯಕ್ರಮ ನಮ್ಮ ಹೆಣ್ಣುಮಕ್ಕಳ ಸಾಮರ್ಥ್ಯ ಇನ್ನಷ್ಟು ಹೆಚ್ಚಿಸಲಿದೆ. ಭಾರತದಲ್ಲಿ ಉದ್ಯಮಿಗಳು ಇನ್ನೂ ಹೆಚ್ಚು ಹೆಚ್ಚು ಅವಕಾಶ ಬಯಸ್ತಿದ್ದಾರೆ. ವಿಮಾನದಲ್ಲಿ ಸಂಚರಿಸುವ ಡೊಮೆಸ್ಟಿಕ್ ಪ್ಯಾಸೆಂಜರ್ ಗಳ ಸಂಖ್ಯೆ ಭಾರತದಲ್ಲಿ ಹೆಚ್ಚಾಗ್ತಿದೆ. ಭಾರತ ವೈಮಾನಿಕ ರಂಗದಲ್ಲಿ ಹತ್ತು ವರ್ಷದ ಹಿಂದೆ ಹೇಗಿತ್ತು?. ಕೇವಲ ಹತ್ತೇ ವರ್ಷಗಳಲ್ಲಿ ವೈಮಾನಿಕ ರಂಗದಲ್ಲಿ ನಮ್ಮ ದೇಶ ಮುಂಚೂಣಿಯಲ್ಲಿದೆ. ವೈಮಾನಿಕ ಸೇವೆಗಳು ಜನರಿಗೆ ಸುಲಭವಾಗಿ ಈಗ ಕೈಗೆಟುಕುತ್ತಿವೆ. 70 ವಿಮಾನ ನಿಲ್ದಾಣಗಳು ಈ ಹಿಂದೆ ಇದ್ವು, ಈಗ 150 ಇವೆ. ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ ಅಷ್ಟೇ ಅಲ್ಲ ಅವುಗಳ ಕಾರ್ಯಕ್ಷಮತೆ, ಗುಣಮಟ್ಟವೂ ಹೆಚ್ಚಿದೆ ಎಂದು ಮೋದಿ ತಿಳಿಸಿದರು.