ನವದೆಹಲಿ: ಸುಪ್ರೀಂಕೋರ್ಟ್‍ನಿಂದ ಕಳುಹಿಸಲಾಗುತ್ತಿದ್ದ ಇಮೇಲ್‍ಗಳ ಅಡಿ ಟಿಪ್ಪಣಿಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ತೆಗೆದು ಹಾಕುವಂತೆ ಇಮೇಲ್ ಸೇವೆಗಳನ್ನು ಒದಗಿಸುವ ನ್ಯಾಷನಲ್ ಇನ್ಫಾಮ್ರ್ಯಾಟಿಕ್ಸ್ ಸೆಂಟರ್ (NIC)ಗೆ ಸುಪ್ರೀಂಕೋರ್ಟ್ ರಿಜಿಸ್ಟರ್ ಸೂಚಿಸಿದ್ದಾರೆ.
Advertisement
ಹಲವು ವಕೀಲರ ದೂರಿನ ಬಳಿಕ ಎಚ್ಚೇತ್ತುಕೊಂಡ ಸುಪ್ರೀಂಕೋರ್ಟ್ ರಿಜಿಸ್ಟರ್ ನಿನ್ನೆ ಈ ಬಗ್ಗೆ ಪತ್ರ ಬರೆದಿದ್ದು, ಇಮೇಲ್ ಅಡಿ ಟಿಪ್ಪಣಿಯಲ್ಲಿರುವ ಅಜಾದಿ ಕಾ ಅಮೃತ್ ಮಹೋತ್ಸವ ಜಾಹೀರಾತು ಜೊತೆಗಿರುವ ಪ್ರಧಾನಿ ನರೇಂದ್ರ ಮೋದಿ ಫೋಟೋ ಬದಲಿಗೆ ಸುಪ್ರೀಂಕೋರ್ಟ್ ಫೋಟೋ ಬಳಕೆ ಮಾಡುವಂತೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಕ್ವಾಡ್ ಜಾಗತಿಕ ಒಳಿತಿಗಾಗಿ ಸದಾ ಶ್ರಮಿಸುತ್ತದೆ: ಪ್ರಧಾನಿ ಮೋದಿ
Advertisement
Advertisement
75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಕೇಂದ್ರ ಸರ್ಕಾರ ಭಾರತ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಹೆಸರಿನಲ್ಲಿ ಪ್ರಚಾರ ಆಚರಿಸಲು ಶುರು ಮಾಡಿತ್ತು. ಇದರ ಭಾಗವಾಗಿ ಸಾಕಷ್ಟು ಜಾಹೀರಾತು ಕೂಡಾ ನೀಡಿತ್ತು. ಸರ್ಕಾರಿ ಕಚೇರಿಗಳಿಂದ ಕಳುಹಿಸುತ್ತಿದ್ದ ಇಮೇಲ್ ಗಳಲ್ಲೂ ಈ ಜಾಹೀರಾತು ಬಳಕೆ ಮಾಡಲಾಗುತ್ತಿತ್ತು. ಅದೇ ರೀತಿ ಸುಪ್ರೀಂಕೋರ್ಟ್ ಇಮೇಲ್ ನಲ್ಲೂ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಇರುವ ಅಜಾದಿ ಕಾ ಅಮೃತ್ ಮಹೋತ್ಸವ ಜಾಹೀರಾತು ಅಡಿ ಟಿಪ್ಪಣಿಯಲ್ಲಿ ರವಾನೆಯಾಗುತ್ತಿತ್ತು. ಈ ಜಾಹೀರಾತನ್ನು ಹಲವು ವಕೀಲರು ನೋಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುಪ್ರೀಂಕೋರ್ಟ್ ಸ್ವತಂತ್ರ ಸಂಸ್ಥೆಯಾಗಿದ್ದು ಇಲ್ಲಿ ಪ್ರಧಾನಿ ಫೋಟೋ ಸಲ್ಲದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಮಲಾ ಹ್ಯಾರಿಸ್‍ಗೆ ಅಪರೂಪದ ಗಿಫ್ಟ್ ನೀಡಿದ ಪ್ರಧಾನಿ ಮೋದಿ
Advertisement
ಸುಪ್ರೀಂಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಅಸೋಸಿಯೇಷನ್ ವಾಟ್ಸಾಪ್ ಗ್ರೂಪ್ ನಲ್ಲಿ ಈ ಬಗ್ಗೆ ವಕೀಲರು ಚರ್ಚೆ ಮಾಡಿದ್ದು, ಸುಪ್ರೀಂಕೋರ್ಟ್ ಸ್ವತಂತ್ರವಾಗಿದೆ, ಸ್ವತಂತ್ರವಾಗಿರುವುದನ್ನೂ ನೋಡಬೇಕು. ಜನರ ಮನಸ್ಸಿನಲ್ಲಿ ನ್ಯಾಯಾಂಗವು ರಾಜಕೀಯ, ಕಾರ್ಯಕಾರಿಣಿಯಿಂದ ಪ್ರತ್ಯೇಕವಾಗಿರುವ ಚಿತ್ರಣವನ್ನು ಉಳಿಸಿಕೊಳ್ಳಬೇಕಾದರೆ ನಾವು ಇದನ್ನು ವಿರೋಧಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಚರ್ಚೆ ಬಳಿಕ ಎಚ್ಚೇತ್ತುಕೊಂಡ ರಿಜಿಸ್ಟರ್ NICಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಭಾರತ-ಅಮೆರಿಕ ಸಂಬಂಧ ವೃದ್ಧಿಗೆ ಬೀಜ ಬಿತ್ತಲಾಗಿದೆ: ಪ್ರಧಾನಿ ಮೋದಿ