ಹಾಸನ: ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಖಂಡಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖರ್ಗೆ ಅವರು ರಬ್ಬರ್ ಸ್ಟ್ಯಾಂಪ್ ಎಂಬಂತೆ ಬಿಂಬಿಸಿ ತುಚ್ಛವಾಗಿ ಮಾತನಾಡಿದ್ದಾರೆ. ಮಹಾತ್ಮಾ ಗಾಂಧಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಬಾಬು ಜಗಜೀವನ್ ರಾಮ್ ಅವರು ಕುಳಿತ ಜಾಗದಲ್ಲಿ ಖರ್ಗೆ ಕುಳಿತಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ, ಮುನ್ಸಿಪಲ್ ಸದಸ್ಯರಾಗಿ ಬರೋಬ್ಬರಿ 50 ವರ್ಷ ಸಂಸದೀಯ ವ್ಯವಸ್ಥೆಯಲ್ಲಿ ಮುಂದುವರಿಸಿಕೊಂಡು ಬಂದಿದ್ದಾರೆ ಎಂದರು.
Advertisement
Advertisement
ಖರ್ಗೆ ಒಬ್ಬ ದಲಿತ ನಾಯಕ ಸಾಮರ್ಥ್ಯದ ಮೇಲೆ ಬೆಳೆದಿದ್ದಾರೆ. ಕಾಂಗ್ರೆಸ್ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟು ಚುನಾವಣೆ ನಡೆಸಿ ಉನ್ನತ ಹುದ್ದೆ ನೀಡಿದೆ. ಅಂತಹವರಿಗೆ ಅವಮಾನ ಆಗುವ ರೀತಿಯಲ್ಲಿ ಮೋದಿ ಹೇಳಿಕೆ ನೀಡಿರುವುದು ಖಂಡನೀಯ ಎಂದರು.
Advertisement
ಇದೊಂದು ಭ್ರಷ್ಟ ಸರ್ಕಾರ, ಕಾರ್ಯಾಂಗಕ್ಕೆ ಸಹಕಾರ ಕೊಡಬೇಕು, ಅದಕ್ಕೆ ನಮ್ಮ ಪಕ್ಷ ಬದ್ಧವಾಗಿದೆ. ಹಿಂದೆಯೂ ಆಡಿದ್ದ ಮಾತು ಉಳಿಸಿಕೊಂಡಿದ್ದೇವೆ. ಹಿಂದೆ ಯಡಿಯೂರಪ್ಪ ಅವರಿಂದ ಲಾಭ ಪಡೆದುಕೊಂಡವರು ನಂತರ ವಿವಿಧ ರೀತಿಯ ಕಿರುಕುಳ ನೀಡಿದರು. ಈಗ ಚುನಾವಣೆ ನಿವೃತ್ತಿ ಪಡೆಯುವಂತೆ ಮಾಡಿದ್ದಾರೆ. ಕಾಳಜಿ ಇದ್ದರೆ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಚುನಾವಣೆ ನಡೆಸಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಕಾಂಗ್ರೆಸ್‌ಗೆ ಈ ಚುನಾವಣೆ ಬಳಿಕ ತಲೆ ಎತ್ತದಂತೆ ಅಂತಿಮ ಮೊಳೆ: ಆರ್.ಅಶೋಕ್
Advertisement
ಯಡಿಯೂರಪ್ಪ ಅವರನ್ನು ಯೂಸ್ ಆ್ಯಂಡ್ ಥ್ರೋ ಎಂಬಂತೆ ಮಾಡಿದ್ದಾರೆ. ರಾಜ್ಯ ಬಿಜೆಪಿಗೆ ಲೀಡರ್ ಶಿಪ್ ಇಲ್ಲ. ಬೊಮ್ಮಾಯಿ ನಾಯಕತ್ವವನ್ನು ಯಾರೂ ಒಪ್ಪುತ್ತಿಲ್ಲ. ಮುಂದಿನ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಮಾರ್ಚ್ 7 ಮತ್ತು 8 ರಂದು ಸ್ಕ್ರೀನಿಂಗ್ ಕಮಿಟಿ ಸಭೆ ಇದೆ. ಅದಾದ ನಂತರ 150 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ. ಪ್ರಜಾಧ್ವನಿ ಯಾತ್ರೆ ವೇಳೆ ಎಲ್ಲೆಡೆ ಜನರ ಪ್ರೀತಿ ಚೆನ್ನಾಗಿದೆ. ಇಡೀ ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸಿದೆ. ಕಾಂಗ್ರೆಸ್ ಗಾಳಿ ದೊಡ್ಡ ಶಕ್ತಿಯಾಗಿ ಕಾಣಿಸುತ್ತಿದೆ ಎಂದರು.
ಇಂದಿನಿಂದ ಆರಂಭಿಸಿರುವ ಬಿಜೆಪಿ ವಿಜಯ ಸಂಕಲ್ಪಯಾತ್ರೆ ಆರಂಭವಾಗಿದ್ದರೂ, ಜನರೇ ಬಿಜೆಪಿ ಮುಕ್ತ ಮಾಡಲು ಸಂಕಲ್ಪ ಮಾಡಿದ್ದಾರೆ. ಅಧಿಕಾರ ಇದ್ದಾಗ ಏನೂ ಮಾಡದವರು, ಈಗ ಯಾತ್ರೆ ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ನಾವು ಸಾಮೂಹಿಕ ನಾಯಕತ್ವದಡಿ, ಪಕ್ಷ ಹೇಳಿದ ರೀತಿ ನಡೆಯುತ್ತೇವೆ ಎಂದು ನುಡಿದರು. ಇದನ್ನೂ ಓದಿ: ದುಡ್ಡು ಕೊಟ್ಟು ಮೋದಿ ರೋಡ್ ಶೋಗೆ ಜನ ಕರೆಸುತ್ತಾರೆ – ಸಿದ್ದರಾಮಯ್ಯ ಕಿಡಿ