ಇಸ್ಲಾಮಾಬಾದ್: ಉತ್ತರಪ್ರದೇಶದಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿರೋದಕ್ಕೆ ಪಾಕಿಸ್ತಾನದ 11ರ ಬಾಲಕಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭ ಕೋರಿದ್ದಾಳೆ.
ಪಾಕಿಸ್ತಾನದ 11ರ ಹರೆಯದ ಅಖೀದತ್ ನವೀದ್ ಎಂಬಾಕೆ ಪತ್ರದ ಮೂಲಕ ಪ್ರಧಾನಿಗೆ ವಿಶ್ ಮಾಡಿದ್ದಾಳೆ. ಪಾಕಿಸ್ತಾನ ಮತ್ತು ಭಾರತದ ಮಧ್ಯೆ ಶಾಂತಿಯ ಅಗತ್ಯವಿದ್ದು, ಮೋದಿ ಅವರಿಂದ ಈ ಕೆಲಸ ಶೀಘ್ರವಾಗಿ ಆಗುತ್ತದೆ ಎಂದು ಹೇಳಿದ್ದಾಳೆ.
Advertisement
ಪತ್ರದಲ್ಲೇನಿದೆ?: `ಜನರ ಮನಸ್ಸನ್ನು ಗೆಲ್ಲುವುದು ಅದ್ಭುತವಾದ ಕೆಲಸ ಎಂದು ನನ್ನ ತಂದೆ ಹೇಳುತ್ತಿದ್ದರು. ಅಂತೆಯೇ ನೀವು ಈಗಾಗಲೇ ಭಾರತೀಯರ ಮನ ಗೆದ್ದಿದ್ದೀರಿ. ಹೀಗಾಗಿ ನೀವು ಉತ್ತರಪ್ರದೇಶದಲ್ಲಿ ಭರ್ಜರಿ ಜಯ ಗಳಿಸಿದ್ದೀರಿ. ಅಂತೆಯೇ ಮತ್ತಷ್ಟು ಭಾರತೀಯರು ಹಾಗೂ ಪಾಕಿಸ್ತಾನ ಜನತೆಯ ಹೃದಯಗಳನ್ನು ಗೆಲ್ಲಬೇಕಾದರೆ, ಉಭಯ ರಾಷ್ಟ್ರಗಳ ನಡುವೆ ಸ್ನೇಹ ಮತ್ತು ಶಾಂತಿಯನ್ನು ಕಾಪಾಡಬೇಕು. ಈ ಎರಡೂ ರಾಷ್ಟ್ರಗಳ ನಡುವೆ ಉತ್ತಮ ಸಂಬಂಧದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿಯ ಸೇತುವೆಯನ್ನು ನಿರ್ಮಾಣ ಮಾಡಿ. ನಾವು ಬುಲೆಟ್‍ಗಳನ್ನು ಖರೀದಿ ಮಾಡುವ ಬದಲಾಗಿ ಪುಸ್ತಕಗಳನ್ನು ಖರೀದಿ ಮಾಡಲು ನಿರ್ಧರಿಸೋಣ. ಪಿಸ್ತೂಲ್‍ಗಳನ್ನು ಖರೀದಿ ಮಾಡೋ ಬದಲು ಬಡವರಿಗಾಗಿ ಔಷಧಿಗಳನ್ನು ಖರೀದಿ ಮಾಡೋಣವೆಂದು ನಿರ್ಧಾರ ಕೈಗೊಳ್ಳೋಣ ಅಂತಾ ಅಖೀದತ್ ಪ್ರಧಾನಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾಳೆ.
Advertisement
ಪತ್ರದ ಕೊನೆಯಲ್ಲಿ ಶಾಂತಿ ಮತ್ತು ಸಂಘರ್ಷ ಯಾವುದು ಬೇಕು ಎಂಬ ಆಯ್ಕೆ ಎರಡೂ ರಾಷ್ಟ್ರಗಳ ಕೈಯಲ್ಲಿದೆ ಎಂದು ಹೇಳಿದ್ದು, ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಪ್ರಧಾನಿಗೆ ಶುಭಾಶಯ ತಿಳಿಸಿದ್ದಾಳೆ.
Advertisement
#Pakistani girl congratulates PM @narendramodi on UP victory https://t.co/ZrddOwwqAZ
— Doordarshan News (@DDNewsLive) March 15, 2017
Advertisement