ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬುಧವಾರ ಸದನಕ್ಕೆ (Parliament) ತ್ಯಾಜ್ಯಗಳಿಂದ ತಯಾರಿಸಲ್ಪಟ್ಟ ಜಾಕೆಟ್ ಅನ್ನು ಧರಿಸಿ ಬಂದಿದ್ದು ವಿಶೇಷವಾಗಿತ್ತು.
ಸೋಮವಾರ ಮೋದಿ ಬೆಂಗಳೂರಿಗೆ (Bengaluru) ಬಂದಿದ್ದಾಗ ಜಾಕೆಟ್ (Jacket) ಅನ್ನು ಉಡುಗೊರೆಯಾಗಿ ನೀಡಿದ್ದರು. ಈ ಜಾಕೆಟ್ ಪ್ಲಾಸ್ಟಿಕ್ ಬಾಟಲಿಗಳಿಂದ ಮರುಬಳಕೆ ಮಾಡಲಾದ ವಸ್ತುಗಳಿಂದ ತಯಾರಿಸಲ್ಪಟ್ಟಿದೆ. ರಾಜ್ಯಸಭೆಯಲ್ಲಿ ತಿಳಿ ನೀಲಿ ಬಣ್ಣದ ಸದ್ರಿ ಜಾಕೆಟ್‍ನಲ್ಲಿ ಕಾಣಿಸಿಕೊಂಡಿದ್ದಾರೆ.
Advertisement
ಪ್ಲಾಸ್ಟಿಕ್ ತ್ಯಾಜ್ಯದಿಂದ ತಯಾರಿಸಲ್ಪಟ್ಟ ಸಮವಸ್ತ್ರವನ್ನು ಬೆಂಗಳೂರಿನಲ್ಲಿ ಪ್ರಧಾನಮಂತ್ರಿ ಶ್ರೀ @narendramodi ಯವರಿಗೆ ಉಡುಗೊರೆಯಾಗಿ ನೀಡುವ ಮೂಲಕ ಲೋಕಾರ್ಪಣೆಗೈದ ಇಂಡಿಯನ್ ಆಯಿಲ್ ಕಂಪನಿ#IndiaEnergyWeek #IndiaDrivesE20 pic.twitter.com/zwxoJDWnGa
— Pralhad Joshi (@JoshiPralhad) February 6, 2023
Advertisement
ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಬೆಂಗಳೂರಿನ ಮಾದವಾರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿದ್ದ ಭಾರತ ಇಂಧನ ಸಪ್ತಾಹ-2023ಕ್ಕೆ ಫೆ. 6ರಂದು ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಇದೇ ಸಂದರ್ಭದಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿ) ತಯಾರಿಸಿರುವ ಸೌರಶಕ್ತಿ ಆಧಾರಿತ ಕುಕ್‍ಟಾಪ್ ಹಾಗೂ ಬಳಸಿದ ಪ್ಲಾಸ್ಟಿಕ್ ಬಾಟಲಿಗಳಿಂದ ತಯಾರಿಸಿರುವ ವಸ್ತ್ರಗಳನ್ನು ಬಿಡುಗಡೆ ಮಾಡಿದ್ದರು. ಈ ಸಮಾರಂಭದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಈ ಜಾಕೆಟ್ ಅನ್ನು ಪ್ರಧಾನಿ ಅವರಿಗೆ ಉಡುಗೊರೆಯಾಗಿ ನೀಡಿತ್ತು.
Advertisement
Advertisement
ಅಷ್ಟೇ ಅಲ್ಲದೇ ಇಂಡಿಯಾ ಎನರ್ಜಿ ವೀಕ್‍ನ ಅಂಗವಾಗಿ ಅಜೆರ್ಂಟೀನಾದ ವೈಪಿಎಫ್ ಅಧ್ಯಕ್ಷ ಪಾಬ್ಲೊ ಗೊನ್ಜಾಲೆಜ್ ಅವರು, ವಿಶ್ವಕಪ್ ವಿಜೇತ ಚಾಂಪಿಯನ್ ಲಿಯೊನೆಲ್ ಮೆಸ್ಸಿ ಅವರ ಹೆಸರನ್ನು ಒಳಗೊಂಡ ಅರ್ಜೆಂಟೀನಾ ಫುಟ್‍ಬಾಲ್ ತಂಡದ ಜೆರ್ಸಿಯನ್ನು ಮೋದಿಗೆ ಉಡುಗೊರೆಯಾಗಿ ನೀಡಿದ್ದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k