ಬೆಂಗಳೂರು: ನರೇಂದ್ರ ಮೋದಿ (Narendra Modi) ಬರ್ತಾರೆ, ಗೆಲ್ಲಿಸ್ತಾರೆ ಎಂದು ನಂಬಿ ಕೂತಿರುವ ರಾಜ್ಯ ನಾಯಕರಿಗೆ ಬಿಗ್ ಶಾಕ್ ಸಿಕ್ಕಿದೆ. ಬಿಜೆಪಿ ನಾಯಕರ ವರ್ತನೆಯಿಂದ ಪ್ರಧಾನಿ ನರೇಂದ್ರ ಮೋದಿ ಎಂಬ ಚರ್ಚೆಗಳು ಶುರವಾಗಿವೆ.
ಮೋದಿಯ ಮೇಲೆ ಅತಿಯಾದ ಅವಲಂಬನೆ ಆಗಿ ರಾಜ್ಯದ ನಾಯಕರ ಶ್ರಮ ಕಡಿಮೆ ಆಗಿದೆಯಾ? ಎಂಬ ಪ್ರಶ್ನೆಗಳೆದ್ದಿವೆ. ಹಾಗಾದ್ರೆ ಬಿಜೆಪಿ ಹೈಕಮಾಂಡ್‌ಗೆ ತಲುಪಿದ ಆ ವರದಿಯಿಂದಲೇ ಮೋದಿ ಮಹಾ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
Advertisement
Advertisement
ಅಂದಹಾಗೆ 2024ರ ಚುನಾವಣೆಗೆ ಇನ್ನೂ 400 ದಿನ ಬಾಕಿ ಇದೆ. ಮಂಗಳವಾರ ದೆಹಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಸಮಾರೋಪದಲ್ಲೇ ಪ್ರಧಾನಿ ನರೇಂದ್ರ ಮೋದಿ ಕಹಳೆ ಊದಿದ್ದಾರೆ. ಮೋದಿಯಿಂದ ಎಚ್ಚರಿಕೆಯ ಖಡಕ್ ಸಂದೇಶ ರವಾನೆಯಾಗಿದೆ ಎನ್ನಲಾಗಿದ್ದು, ಮೋದಿ ಭ್ರಮೆ ಬೇಡ, ಮೋದಿ ಹೆಸರೇಳಿಕೊಂಡು ಕೂರಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಅತಿಯಾದ ಆತ್ಮವಿಶ್ವಾಸ ಬೇಡ, ಮೊದಲು ಮತದಾರರ ಮನ ಗೆಲ್ಲಿ ಎಂದು ಮೋದಿಯಿಂದ ಸಲಹೆ ಕೊಟ್ಟಿದ್ದು ಕರ್ನಾಟಕವೇ ಮೊದಲ ಟಾರ್ಗೆಟ್ ಎಂಬ ಚರ್ಚೆ ಆಗುತ್ತಿದೆ.
Advertisement
ಅಂದಹಾಗೆ ಕರ್ನಾಟಕ ಸೇರಿದಂತೆ ಮುಂಬರುವ ಚುನಾವಣೆಗಳ ತಂತ್ರಗಾರಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಬದಲಿಸುವ ಸುಳಿವು ಎನ್ನಲಾಗಿದೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ಒಟ್ಟು 9 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮೇಘಾಲಯ, ನಾಗಲ್ಯಾಂಡ್, ತ್ರಿಪುರ ಬಳಿಕ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಕರ್ನಾಟಕದ ಬಳಿಕ ಮಿಝೋರಾಂ, ಛತ್ತೀಸ್‌ಗಢ್, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಆದ್ರೆ 25 ಸಂಸದರನ್ನು ಕೊಟ್ಟಿರುವ ಕರ್ನಾಟಕದ ಬಗ್ಗೆ ಬಿಜೆಪಿ ಹೈಕಮಾಂಡ್‌ಗೆ ಮೊದಲ ಸವಾಲಾಗಿದೆ. ಇದನ್ನೂ ಓದಿ: ಅನಾರೋಗ್ಯದಿಂದ ಬಳಲುತ್ತಿದ್ದ ಹುಲಿ ಸೆರೆ – ಚಿಕಿತ್ಸೆಗೆ ಮೈಸೂರಿನ ಮೃಗಾಲಯಕ್ಕೆ ರವಾನೆ
Advertisement
ಈ ನಡುವೆ ಕರ್ನಾಟಕ (Karnataka) ಚುನಾವಣೆಯಲ್ಲೂ (Election) ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿಯನ್ನೇ (Narendra Modi) ನಂಬಿಕೊಂಡಿದ್ದಾರೆ. ಮೋದಿ ಅವರ ಎಚ್ಚರಿಕೆಯ ಸಂದೇಶದಿಂದ ರಾಜ್ಯ ನಾಯಕರು ತಮ್ಮ ಕಾರ್ಯಶೈಲಿಯನ್ನು ಬದಲಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಮೋದಿ ಹೆಚ್ಚು ನಂಬಿ ಸಂಘಟನೆಯಲ್ಲಿ ವೀಕ್ ಆಗುತ್ತೆ ಎಂಬ ಆತಂಕ ಬಿಜೆಪಿ ಹೈಕಮಾಂಡ್‌ಗೆ ಇದೆ ಎನ್ನಲಾಗಿದ್ದು, ಆ ಕಾರಣದಿಂದಲೇ ಮಿಷನ್ 2024 ಟಾರ್ಗೆಟ್ ಮಿಸ್ ಆದ್ರೆ ಕಷ್ಟ ಎಂದು ಮೋದಿ ವಾರ್ನ್ ಮಾಡಿದ್ದಾ? ಎಂಬ ಚರ್ಚೆಗೆ ವೇದಿಕೆ ಆಗಿರೋದಂತೂ ಸತ್ಯ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮುಗಿಯದ ಗುಂಡಿ ಗಂಡಾಂತರ – ಆ್ಯಪ್‍ನಲ್ಲಿ 40 ಸಾವಿರಕ್ಕೂ ಹೆಚ್ಚು ದೂರು
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k