– ಧನುಷ್ಕೋಡಿಯ ಕೋದಂಡರಾಮ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ
– ಕಡಲ ತೀರದಲ್ಲಿ ಅನುಲೋಮ-ವಿಲೋಮ ಪ್ರಾಣಾಯಾಮ ಅಭ್ಯಾಸ
ಚೆನ್ನೈ: ಅಯೋಧ್ಯೆಯಲ್ಲಿ (Ayodhya) ರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠೆ ಸಮಾರಂಭಕ್ಕೆ ಒಂದು ದಿನ ಮುಂಚಿತವಾಗಿ ಭಾನುವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ತಮಿಳುನಾಡಿನ (Tamil Nadu) ಧನುಷ್ಕೋಡಿ (Dhanushkodi) ಬಳಿಯ ರಾಮಸೇತು ನಿರ್ಮಿಸಿದ ಸ್ಥಳವಾದ ಅರಿಚಲ್ ಮುನೈಗೆ ಭೇಟಿ ನೀಡಿದ್ದು, ಅರಿಚಲ್ ಮುನೈ ಪಾಯಿಂಟ್‌ನಲ್ಲಿ (Arichal Munai Point) `ಅನುಲೋಮ-ವಿಲೋಮ’ ಅಭ್ಯಾಸ ಮಾಡಿದ್ದಾರೆ.
Advertisement
Advertisement
ರಾವಣನನ್ನು ಸೋಲಿಸಲು ಭಗವಾನ್ ಶ್ರೀರಾಮನು ಪ್ರತಿಜ್ಞೆ ಮಾಡಿದ ಸ್ಥಳ ಧನುಷ್ಕೋಡಿ ಎಂದು ನಂಬಲಾಗಿದೆ. ಶ್ರೀರಾಮನು ಲಂಕೆಗೆ ತೆರಳಿದ ಪುಣ್ಯಭೂಮಿ ಇದಾಗಿದೆ. ಅಲ್ಲದೇ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲೂ ಮೋದಿ ಪೂಜೆ ಸಲ್ಲಿಸಲಿದ್ದಾರೆ. ಕೋದಂಡರಾಮ ಎಂದರೆ ಬಿಲ್ಲು ಹೊಂದಿರುವ ರಾಮ ಎಂದರ್ಥ. ಇದು ಧನುಷ್ಕೋಡಿಯಲ್ಲಿದೆ. ರಾವಣನ ಸಹೋದರ ವಿಭೀಷಣ ಮೊದಲು ಭಗವಾನ್ ರಾಮನನ್ನು ಭೇಟಿಯಾಗಿ ಆಶ್ರಯವನ್ನು ಕೇಳಿದ್ದು ಇಲ್ಲಿಯೇ ಎಂದು ಹೇಳಲಾಗುತ್ತದೆ. ಶ್ರೀರಾಮನು ವಿಭೀಷಣನ ಪಟ್ಟಾಭಿಷೇಕವನ್ನು ನಡೆಸಿದ ಸ್ಥಳ ಇದಾಗಿದೆ ಎಂದು ಕೆಲವು ದಂತಕಥೆಗಳು ಹೇಳುತ್ತವೆ. ಇದನ್ನೂ ಓದಿ: ಪ್ರಾಣಪ್ರತಿಷ್ಠೆ ಮತ್ತೊಂದು ದೀಪಾವಳಿ, ಕ್ರಿಶ್ಚಿಯನ್ ಮಹಿಳೆಯಾದ್ರೂ ನಾನು ಆಚರಿಸುತ್ತೇನೆ – ಮೇರಿ ಮಿಲ್ಬೆನ್ ಸಂತಸ
Advertisement
Advertisement
ರಾಮಮಂದಿರದ ಪ್ರಾಣ-ಪ್ರತಿಷ್ಠೆಗಾಗಿ ಮೋದಿ ಭಾನುವಾರ ಸಂಜೆ ಅಯೋಧ್ಯೆಗೆ ತೆರಳಲಿದ್ದಾರೆ. ಇದಕ್ಕೂ ಮುನ್ನ ಶನಿವಾರ ಪ್ರಧಾನಿಯವರು ತಿರುಚಿರಾಪಳ್ಳಿಯ ಶ್ರೀರಂಗನಾಥಸ್ವಾಮಿ ದೇವಾಲಯ ಮತ್ತು ದಕ್ಷಿಣ ರಾಜ್ಯದ ರಾಮೇಶ್ವರಂನಲ್ಲಿರುವ ಶ್ರೀ ಅರುಲ್ಮಿಗು ರಾಮನಾಥಸ್ವಾಮಿ ದೇವಾಲಯಕ್ಕೂ ಭೇಟಿ ನೀಡಿದ್ದರು. ಇದನ್ನೂ ಓದಿ: ಸಿಎಂ ತವರಲ್ಲಿ ಶ್ರೀರಾಮನ ಹೆಸರಿನ ಲಕ್ಷ ದೀಪೋತ್ಸವಕ್ಕೆ ಅನುಮತಿ ರದ್ದು – ರಾಮಭಕ್ತರಿಂದ ಆಕ್ಷೇಪ
ಅಯೋಧ್ಯೆಯಲ್ಲಿ ಸುಮಾರು 8,000 ವಿಐಪಿ ಅತಿಥಿಗಳು ಪಾಲ್ಗೊಳ್ಳುವ ಅದ್ಧೂರಿ ಕಾರ್ಯಕ್ರಮದ ದೃಷ್ಟಿಯಿಂದ, ಉತ್ತರ ಪ್ರದೇಶ ಪೊಲೀಸ್ ಪಡೆ ಅಯೋಧ್ಯೆಯಲ್ಲಿ ಭದ್ರತೆಯನ್ನು ಹೆಚ್ಚಿಸಿದೆ. ಇದನ್ನೂ ಓದಿ: ಪ್ರಾಣಪ್ರತಿಷ್ಠೆಗೆ ಕೌಂಟ್‌ಡೌನ್ – ಬೆಂಗ್ಳೂರಿನಿಂದ ಅಯೋಧ್ಯೆಗೆ ಹೆಚ್ಚುವರಿ ರೈಲು ಸೇವೆ, ಇಲ್ಲಿದೆ ಡಿಟೇಲ್ಸ್