ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ರಾಷ್ಟ್ರಕ್ಕೆ ಒಳಿತಾಗಲಿ ಎಂದು ಸಂಕಲ್ಪ ಮಾಡಿದರು. ನಾವು ಅವರ ಸಂಕಲ್ಪದ ಇಚ್ಛೆಯಂತೆ ತಾಯಿಗೆ ಪೂಜೆ ಮಾಡಿದೆವು ಎಂದು ಮೈಸೂರು ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ತಿಳಿಸಿದರು.
Advertisement
ಚಾಮುಂಡಿ ಬೆಟ್ಟಕ್ಕೆ ಮೋದಿ ಭೇಟಿ ನೀಡಿದ ಬಳಿಕ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅರ್ಚಕರು, ಮೋದಿ ಬಹಳ ಸರಳ ಹಾಗೂ ಸಜ್ಜನ ವ್ಯಕ್ತಿ. ಅವರು 3 ಬಾರಿ ಮೈಸೂರಿಗೆ ಬಂದಿದ್ದರು ಆದರೆ ಚಾಮುಂಡಿ ಬೆಟ್ಟಕ್ಕೆ ಬಂದಿರಲಿಲ್ಲ. ಈ ಬಾರಿ ಅವರು ಬಂದಿರುವುದು ತುಂಬಾ ಸಂತೋಷ ತಂದಿದೆ. ತಾಯಿಯೇ ನನ್ನನ್ನು ಈ ಬಾರಿ ಬೆಟ್ಟಕ್ಕೆ ಕರೆಸಿಕೊಂಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು ಎಂದು ಹೇಳಿದರು. ಇದನ್ನೂ ಓದಿ: ಪ್ರಧಾನಿಯೊಂದಿಗೆ ಭಾಗವಹಿಸಿದ್ದು ಸಂತಸ ತರಿಸಿದೆ: ಯದುವೀರ್
Advertisement
Advertisement
ನಾವು ದೇವರಿಗೆ ಅರ್ಚನೆ ಮಾಡುವ ವೇಳೆ ಮೋದಿ ಅವರು ಕಣ್ಣು ಮುಚ್ಚಿ ಮನಸ್ಸಿನಲ್ಲಿಯೇ ಪ್ರಾರ್ಥನೆ ಮಾಡಿದರು. ಇಡೀ ರಾಷ್ಟ್ರಕ್ಕೆ ಒಳಿತಾಗಲಿ ಎಂದು ಅವರು ಸಂಕಲ್ಪ ಮಾಡಿದರು ಹಾಗೂ ನಾವು ಅವರ ಸಂಕಲ್ಪದ ಇಚ್ಛೆಯಂತೆ ತಾಯಿಗೆ ಪೂಜೆ ಮಾಡಿದೆವು ಎಂದು ತಿಳಿಸಿದರು. ಇದನ್ನೂ ಓದಿ: ಯೋಗದಿಂದ ವಿಶ್ವಕ್ಕೆ ಶಾಂತಿ – ಮೈಸೂರಿನಲ್ಲಿ 15 ಸಾವಿರ ಮಂದಿಯೊಂದಿಗೆ ಮೋದಿ ಯೋಗ
Advertisement
ಪೂಜೆಯ ಬಳಿಕ ದೇವಸ್ಥಾನದ ಕುರಿತು ನನ್ನನ್ನು ಕೇಳಿದರು. ನಾನು ಅವರಿಗೆ ದೇವಸ್ಥಾನದ ಹಿನ್ನೆಲೆಯನ್ನು ತಿಳಿಸಿದೆ. ಅವರು ಪ್ರದಕ್ಷಿಣೆ ಹಾಕುವಾಗ ಪ್ರಾರ್ಥನೆ ಮಾಡಿಕೊಂಡು ಪ್ರದಕ್ಷಿಣೆ ಮಾಡುವಂತೆ ಹೇಳಿದೆ. ಇದಾದ ಬಳಿಕ ತಾಯಿಯ ಪಾದ ಮುಟ್ಟುವುದನ್ನು ಮರೆತಿದ್ದರು. ಆ ವೇಳೆ ತಾಯಿ ಪಾದಗಳನ್ನು ಮುಟ್ಟಿ ಪ್ರಾರ್ಥನೆ ಮಾಡಿಕೊಳ್ಳುವಂತೆ ಹೇಳಿದೆ. ಆಗ ದೇಶಕ್ಕೆ ಒಳಿತಾಗಲಿ ಎಂದು ತಾಯಿಯನ್ನು ಪ್ರಾರ್ಥನೆ ಮಾಡಿದರು ಎಂದರು.
ನಾನು ಈ ಸನ್ನಿಧಿಗೆ ಬಂದಿರುವುದು ನನ್ನ ಪುಣ್ಯ. ನೀವು ಇಲ್ಲೇ ಇದ್ದೀರಾ ಅದು ನಿಮ್ಮ ಪುಣ್ಯ ಎಂದು ಮೋದಿ ನುಡಿದರು. ನಾನು ಅವರ ಕಿವಿಯಲ್ಲಿ ಪೂಜಾ ವಿಧಿವಿಧಾನಗಳನ್ನು ಹೇಳಿದೆ. ಆ ವೇಳೆ ಅವರು ಸಮಾಧಾನದಿಂದ ಕೇಳಿಸಿಕೊಂಡರು. ಅದು ನನಗೆ ತುಂಬಾ ಸಂತಸ ಕೊಟ್ಟಿತು ಎಂದು ಅರ್ಚಕ ಶಶಿಶೇಖರ್ ದೀಕ್ಷಿತ್ ಪ್ರತಿಕ್ರಿಯಿಸಿದರು.