ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಸೋಮವಾರ ಬೆಂಗಳೂರು (Bengaluru) ಸೇರಿದಂತೆ ನಗರದ ಹೊರವಲಯದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಕಾರ್ಯಕ್ರಮದ ವಿವರ:
ಬೆಂಗಳೂರು ಹೊರವಲಯ ನೆಲಮಂಗಲದ (Nelamangala) ಮಾದವಾರದ ಬಿಐಇಸಿಯಲ್ಲಿ, ಇಂಡಿಯಾ ಎನರ್ಜಿ ವೀಕ್ 2023ಕ್ಕೆ ಚಾಲನೆ ನೀಡಲಿದ್ದಾರೆ. ಸೋಮವಾರ ಬೆಳಗ್ಗೆ 11ಕ್ಕೆ ಹೆಲಿಪ್ಯಾಡ್ ಮೂಲಕ ಮಾದವಾರ ಲ್ಯಾಂಡ್ ಆಗಲಿದ್ದು ನಂತರ 2:30 ಗಂಟೆಗಳ ಕಾಲ ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ 30 ಸಾವಿರಕ್ಕೂ ಹೆಚ್ಚು ಜನ, 650ಕ್ಕೂ ಹೆಚ್ಚು ಪ್ರಾಯೋಜಕರು, 8,000 ಹೊರ ದೇಶದ ಪ್ರತಿನಿಧಿಗಳು, 500ಕ್ಕೂ ಹೆಚ್ಚು ಭಾಷಣಕಾರರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಹಾಲ್ ಎರಡರ ಉದ್ಘಾಟನೆಯನ್ನು ಮೋದಿಯವರು ಮಾಡಲಿದ್ದಾರೆ. ನಂತರ ದೇಶ ಸೇರಿದಂತೆ ವಿದೇಶಿ ಗಣ್ಯರ ಜೊತೆಗೆ ಸಮಾಲೋಚನೆ ಮಾಡಲಿದ್ದಾರೆ. ಇದನ್ನೂ ಓದಿ: ನಾಳೆ ಮತ್ತೆ ಕರ್ನಾಟಕಕ್ಕೆ ಮೋದಿ – ಒಂದೇ ದಿನ 6 ಕಾರ್ಯಕ್ರಮಗಳಿಗೆ ಚಾಲನೆ
ಈಗಾಗಲೇ ಕಾರ್ಯಕ್ರಮದ ಭದ್ರತೆಗೆ IG-1, SP-5, DSP-13, CPI-40, PSI-120, ASI-100, HC-560, PC-650, KSRP 8, ಗರುಡ 2, DR-3 ಸೇರಿದಂತೆ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಎಲ್ಲಾ ಕಡೆ ಮಫ್ತಿಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಮೋದಿ ಬರುವ ವೇಳೆ ಕೆಲಕಾಲ ಟ್ರಾಫಿಕ್ ನಿಯಂತ್ರಣ ಮಾಡುವುದಕ್ಕೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕಾರ್ಯಕ್ರಮದ ಆಯೋಜಕರಿಂದ ಪಾಸ್ ಪಡೆದವರಿಗೆ ಮಾತ್ರ ಎಂಟ್ರಿ ಪಾಸ್ ಇಲ್ಲದವರಿಗೆ ನೋ ಎಂಟ್ರಿ. ಸಾರ್ವಜನಿಕರಿಗೆ ನಿರ್ಬಂಧ ಇದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನ ಕಾರ್ಯಕ್ರಮ ಮುಗಿಸಿಕೊಂಡು ತುಮಕೂರಿನಲ್ಲಿ ನಡೆಯಲಿರುವ ಹೆಲಿಕಾಪ್ಟರ್ ತಯಾರಿಕಾ ಘಟಕ ಹಾಗೂ ಕೈಗಾರಿಕಾ ಟೌನ್‌ಶಿಪ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಹ್ಲಾದ್ ಜೋಶಿ ಸಿಎಂ- ಹೆಚ್‍ಡಿಕೆ ಹೊಸ ಬಾಂಬ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k