ವಿಜಯಪುರ: ಕಾಂಗ್ರೆಸ್ ಸರ್ಕಾರದಲ್ಲಿನ ಸಚಿವರು ಕುರ್ಚಿಗೆ ಮಾತ್ರ ಸೀಮಿತವಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.
ಈ ಭಾಗದಲ್ಲಿ ಬರಗಾಲ ತಾಂಡವವಾಡುತ್ತಿತ್ತು, ಶಿಕ್ಷಣ ಕ್ಷೇತ್ರದಲ್ಲಿ ಸಮಸ್ಯೆ ಉದ್ಭವವಾಗಿತ್ತು, ಭೂಮಾಫಿಯಾ ಜೋರಾಗಿತ್ತು. ಆದರೆ ಈ ಭಾಗದ ಸಚಿವರು ತಮ್ಮ ಖಾತೆ ನಿರ್ವಹಿಸುವುದನ್ನು ಬಿಟ್ಟು ದೆಹಲಿಯಲ್ಲಿ ಕೂತು ಜಾತಿ ಒಡೆಯೋದು ಹೇಗೆ ಅಂತ ಪ್ಲಾನ್ ಮಾಡುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದರು.
Advertisement
ಜನ ಬದಲಾವಣೆ ಬಗ್ಗೆ ಮಾತನಾಡುತ್ತಾ ಇದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಸೋಲಿಸುವುದರ ಜೊತೆಗೆ ಕಠಿಣ ಶಿಕ್ಷೆ ನೀಡಲು ಜನತೆ ತೀರ್ಮಾನ ಮಾಡಿದ್ದಾರೆ. ಮೇ 15 ನಂತರ ಮತಯಂತ್ರದ ಮೇಲೆ ದೋಷ ಹಾಕಲು ಕಾಂಗ್ರೆಸ್ ಸರ್ಕಾರ ಸಿದ್ದವಾಗಿದೆ ಎಂದು ವ್ಯಂಗ್ಯವಾಡಿದರು.
Advertisement
ಏರ್ ಕಂಡೀಷನ್ ಕೊಠಡಿ ಯಲ್ಲಿ ಕೂತು ಕೆಲವರು ಬಹುಮತ ಬರಲ್ಲ ಅಂತ ಹೇಳುತ್ತಾರೆ. ಅವರು ಇಷ್ಟೊಂದು ಉರಿಬಿಸಿಲಿನಲ್ಲಿ ಕೂತಿರುವ ಜನರನ್ನ ಬಂದು ನೋಡಬೇಕು. ಕರ್ನಾಟಕದ ಅನೇಕ ಪ್ರದೇಶಕ್ಕೆ ಹೋಗಿದ್ದೇನೆ. ಕರ್ನಾಟಕದಲ್ಲಿ ಸ್ಪಷ್ಟ ಬಹುಮತದ ಬಿಜೆಪಿ ಸರ್ಕಾರ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
ಬಸವಣ್ಣ ತಮ್ಮ ವಚನದಲ್ಲಿ ಹೇಳುತ್ತಾರೆ. ಇವನಾರವ ಇವನಾರವ ಇವನಾರವ ಎಂದೆಣಿಸದಿರಯ್ಯ. ಇವನಮ್ಮವ ಇವನಮ್ಮವ ಎಂದೆಣಿಸಯ್ಯ ಕೂಡಲಸಂಗಮ ದೇವ ಅಂದರೆ ಎಲ್ಲರನ್ನ ಒಂದೇ ಎಂದು ಕಾಣಬೇಕು ಎಂದು ಸಾರಿದ ಪುಣ್ಯ ಭೂಮಿ ಇದು. ಆದರೆ ಈ ಸರ್ಕಾರ ಬಸವಣ್ಣನ ವಚನದ ವಿರುದ್ಧ ನಡೆಯುತ್ತಿದೆ. ಮತ ಪಂಥ ಸಂಪ್ರದಾಯದ ವಿರುದ್ಧ ನಡೆದುಕೊಳ್ತಿದೆ. ಜಾತಿ, ಮತ, ಪಂಥವನ್ನು ಒಡೆಯೋ ಪ್ರಯತ್ನ ಮಾಡುತ್ತಿದೆ. ಇದು ಜಾತಿಗಾಗಿ ಜಗಳವಾಡೋ ಭೂಮಿ ಅಲ್ಲ ಅನ್ನೋದನ್ನ ಜನ ತೋರಿಸಿಕೊಟ್ಟಿದ್ದಾರೆ ಎಂದು ಕಿಡಿಕಾರಿದರು.
Advertisement
ಕರ್ನಾಟಕ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲದ ಒಬ್ಬ ಮಂತ್ರಿಯ ಹೆಸರನ್ನು ಹೇಳಿ ಎಂದು ಪ್ರಶ್ನಿಸಿದರು. ನೀರವಾರಿ ಸಚಿವ ಎಂ.ಬಿ. ಪಾಟೀಲರಿಂದ ಯಾರು ಯಾರು ಗುತ್ತಿಗೆ ಪಡೆದಿದ್ದಾರೆ ಅವರೆಲ್ಲರೂ ಹೆಲಿಪ್ಯಾಡನಲ್ಲಿ ಅಲೆದಾಡುತ್ತಿದ್ದಾರೆ. ದ್ರಾಕ್ಷಿ ಮಾರುಕಟ್ಟೆಗೆ ತರಲು ನೀವು ಹೆಣಗಾಡುತ್ತೀರಿ. ನಿಮ್ಮ ಕಷ್ಟವನ್ನ ಪರಿಹಾರ ಮಾಡಲು ನಾವು ವ್ಯವಸ್ಥೆ ಮಾಡುತ್ತೇವೆ. ಮೇ 15ಕ್ಕೆ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ. ರೈತ ಬಂಧು ಇಲಾಖೆ ಸ್ಥಾಪನೆಯಾಗಲಿದೆ. 1.5 ಲಕ್ಷ ಕೋಟಿ ರೂ ವೆಚ್ಚದಲ್ಲಿ ನೀರಾವರಿ ಯೋಜನೆ ಜಾರಿಗೆ ಬರಲಿದೆ. ವಿಜಯಪುರದಲ್ಲಿ ತೋಟಗಾರಿಕೆ ಇಲಾಖೆ ಸ್ಥಾಪನೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.