ಮಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಶುಕ್ರವಾರ ಬಳ್ಳಾರಿ ಸಂಸದ ಶ್ರೀರಾಮುಲು ಎಡವಟ್ಟು ಮಾಡಿದ್ದು, ಇದೀಗ ಇಂದು ಮತ್ತೆ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆಯ ಸಚಿವ ಡಿವಿ ಸದಾನಂದ ಗೌಡ ಅವರು ಎಡವಟ್ಟು ಮಾಡುವ ಮೂಲಕ ವಿರೋಧ ಪಕ್ಷದವರ ನಗೆಪಾಟಲಿಗೀಡಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಿನ್ನೆ ನಡೆದಿದ್ದು, ಇಂದು ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಸಮಾವೇಶ ನಡೆಯಿತು. ತಮ್ಮ ಭಾಷಣದ ವೇಳೆ ಕೇಂದ್ರ ಸಚಿವ ಡಿವಿ ಸದಾನಂದ ಗೌಡ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಕೇಂದ್ರದ ಬಗ್ಗೆ ಅಪಹಾಸ್ಯ ಮಾಡಲು ನರೇಂದ್ರ ಮೋದಿಯವರಿಗೆ ನಾಚಿಗೆಯಾಗಬೇಕು ಎಂದು ಹೇಳಿದರು.
Advertisement
ಇದನ್ನೂ ಓದಿ: ಯಡಿಯೂರಪ್ಪ, ಶೋಭಾ, ಸದಾನಂದ ಗೌಡರಿಂದ ಹಿಂದೂ ಕಾರ್ಯಕರ್ತರ ಕೊಲೆ:ಶ್ರೀರಾಮುಲು ಎಡವಟ್ಟು
Advertisement
ಬಳಿಕ ಈಶ್ವರಪ್ಪ ಮಾತನಾಡಿ, ಸಿದ್ದರಾಮಯ್ಯ ಮೈಯಲ್ಲಿ ಕನಕದಾಸರ ರಕ್ತ ಹರೀತಿಲ್ಲ. ಅವರ ಮೈಯಲ್ಲಿ ಟಿಪ್ಪುವಿನ ರಕ್ತ ಹರೀತಿದೆ. ಹಾಗಾಗಿ ಮೈಯನ್ನು ಕುಲುಕಿಸಿ ಟಿಪ್ಪು ಹೆಸರಲ್ಲಿ ಬೆಂಕಿ ಹಚ್ಚುತ್ತಿದ್ದಾರೆ. ಸಿದ್ರಾಮಯ್ಯ ತಮಗೆ ಟಿಪ್ಪು ಹೆಸರನ್ನೇ ಇಟ್ಟುಕೊಳ್ಳಲಿ. ಹಿಂದುಗಳ ಮುದ್ರಾಧಾರಣೆ, ತ್ರಿಶೂಲಧಾರಣೆಯನ್ನು ಹಿಂಸೆ ಎನ್ನುತ್ತಾರೆ. ತಾಕತ್ತಿದ್ದರೆ ಮುಸ್ಲಿಮರು ಮಾಡುವ ಸುನ್ನತ್ ನಿಲ್ಲಿಸಿ, ಅದು ಕೂಡ ಹಿಂಸೆಯೇ. ಸುನ್ನತ್ ನಿಷೇಧಿಸುತ್ತೀರಾ ಅಂತ ಸಿಎಂಗೆ ಈಶ್ವರಪ್ಪ ಪ್ರಶ್ನೆ ಹಾಕಿದ್ರು.
Advertisement
ಡಿಕೆಶಿ ಬಿಜೆಪಿಗೆ ಆಹ್ವಾನ ವದಂತಿ ವಿಚಾರದ ಬಗ್ಗೆ ಮಾತನಾಡಿದ ಅವರು, ಡಿಕೆಶಿಯಂತಹ ಭ್ರಷ್ಟರನ್ನು ಬಿಜೆಪಿ ಸೇರಿಸಲು ಸಾಧ್ಯವೇ ಇಲ್ಲ. ಸಿದ್ಧರಾಮಯ್ಯ, ಡಿಕೆಶಿ ಸಾಕಷ್ಟು ಸುಳ್ಳು ಹೇಳಿದ್ದಾರೆ. ಡಿಕೆಶಿಯಂತಹ ಭ್ರಷ್ಟರನ್ನು ಬಿಜೆಪಿ ತಗೊಳಲ್ಲ. ಇವರು ಪ್ರಭಾಕರ್ ಭಟ್ಟರನ್ನು ಬಂಧಿಸುವ ಉದ್ದೇಶ ಹೊಂದಿದ್ದರು. ಪ್ರಭಾಕರ್ ಭಟ್ ರೋಮ ಮುಟ್ಟಿದರೆ ರಾಜ್ಯದಲ್ಲಿ ಜನ ಸುಮ್ಮನಿರಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಗೋಹತ್ಯಾ ನಿಷೇಧ ಕಾನೂನು ತರುತ್ತೇವೆ ಅಂತ ಹೇಳಿದ್ರು.
Advertisement
https://www.youtube.com/watch?v=paACKy7LMQs
#ParivartanaYatre #Bantwal people participation in huge numbers gives us strength to make #Karnataka free from congress pic.twitter.com/MEPOtI87ap
— Sadananda Gowda (@DVSadanandGowda) November 11, 2017
ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ಕೂಡಲೆ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಅವರ ಎಲ್ಲ ಕಾರ್ಯಕ್ರಮಗಳಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ.#ParivartanaYatre #Belthangady pic.twitter.com/v2OUh4uIcJ
— B.S.Yediyurappa (@BSYBJP) November 10, 2017
ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಲು ಎಲ್ಲ ರೀತಿಯ ಅವಕಾಶಗಳಿವೆ. ಅದಕ್ಕೆ ಬೇಕಾದ ನೈಸರ್ಗಿಕ ಸಂಪನ್ಮೂಲಗಳು ಲಭ್ಯವಿವೆ. ದುಡಿಯುವ ಕೈಗಳಿವೆ. ಅವುಗಳನ್ನೆಲ್ಲ ಅಮರ್ಥವಾಗಿ ಬಳಸಿಕೊಂಡು ರಾಜ್ಯದ ಅಭ್ಯುದಯಕ್ಕಾಗಿ ದುಡಿಯುವ ಸರ್ಕಾರ ಬೇಕಾಗಿದೆ.#ParivartanaYatre #Belthangady pic.twitter.com/FbQbWZNYok
— B.S.Yediyurappa (@BSYBJP) November 10, 2017
ನಾಲ್ಕು ವರ್ಷದಲ್ಲಿ ೬೫೨೧ ಕೊಲೆಗಳು ಈ ರಾಜ್ಯದಲ್ಲಿ ನಡೆದಿದೆ. ಅದರಲ್ಲಿ ೨೫೩೪ ಮಹಿಳೆಯರು. ಕಾನೂನು ಸುವ್ಯವಸ್ಥೆ ಸುಧಾರಿಸುವುದಕ್ಕಿಂತ ಹೆಚ್ಷು ಪ್ರಧಾನಿ ಮತ್ತು ನನ್ನನ್ನು ಟೀಕಿಸುವುದರಲ್ಲೇ ಮುಖ್ಯಮಂತ್ರಿಗೆ ಹೆಚ್ಚು ಆಸಕ್ತಿ. ನಮ್ಮ ಯುವಕರು ಇದನ್ನು ಅರಿಯಬೇಕು.#ParivartanaYatre #Belthangady
— B.S.Yediyurappa (@BSYBJP) November 10, 2017