ಲಕ್ನೋ: ತ್ರಿವಳಿ ತಲಾಕ್ ವಿರುದ್ಧ ಕಾನೂನು ಸಾವಿರಾರು ಮುಸ್ಲಿಂ ಮಹಿಳೆಯರ ಕುಟುಂಬ ಉಳಿದಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಕಾನ್ಪುರ್ ದೆಹಾತ್‍ನಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿರುವುದೂ ಸಹ ಮುಸ್ಲಿಮ್ ಹೆಣ್ಣುಮಕ್ಕಳಿಗೆ ಅನುಕೂಲವಾಗಿದೆ. ಈ ಹಿಂದೆ ಶಾಲೆಗೆ ತೆರಳುವಾಗ ದುಷ್ಕರ್ಮಿಗಳಿಂದ ಹೆಣ್ಣುಮಕ್ಕಳು ಕಿರುಕುಳ ಎದುರಿಸುತ್ತಿದ್ದರು. ತ್ರಿವಳಿ ತಲಾಖ್ ವಿರುದ್ಧದ ಕಾನೂನು ಸಾವಿರಾರು ಮುಸ್ಲಿಂ ಮಹಿಳೆಯರ ಕುಟುಂಬಗಳನ್ನು ಛಿದ್ರಗೊಳ್ಳುವುದರಿಂದ ಉಳಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬುಧವಾರದಿಂದ ಪಿಯು, ಪದವಿ ಕಾಲೇಜು ಆರಂಭ
Advertisement
Advertisement
ಯೋಗಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ. ಪ್ರತಿ ಜಾತಿ, ವರ್ಗ, ಗ್ರಾಮ, ನಗರದ ಜನರು ಯುಪಿಯ ತ್ವರಿತ ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಮತ ಹಾಕುತ್ತಿದ್ದಾರೆ. ತಾಯಿ, ಸಹೋದರಿಯರು ಮತ್ತು ಹೆಣ್ಣುಮಕ್ಕಳು ಬಿಜೆಪಿ ಗೆಲ್ಲಬೇಕೆಂಬ ಹಂಬಲವಿದೆ. ಇನ್ನು ಮುಸ್ಲಿಂ ಸಹೋದರಿಯರು ಮೋದಿಯನ್ನು ಆಶೀರ್ವದಿಸಲು ಮತಗಟ್ಟೆಗಳ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ ಎಂದು ಹೇಳಿದರು ಇದನ್ನೂ ಓದಿ: ಹಿಜಬ್ ಧರಿಸಿ ಕಲಾಪಕ್ಕೆ ಆಗಮಿಸಿದ ಕಲಬುರಗಿ ಕಾಂಗ್ರೆಸ್ ಶಾಸಕಿ
Advertisement
Advertisement
ಇದೇ ವೇಳೆ ಸಮಾಜವಾದಿ ಪಕ್ಷದ ವಿರುದ್ಧವೂ ಮೋದಿ ವಾಗ್ದಾಳಿ ನಡೆಸಿದ್ದು, ಪ್ರತಿ ಚುನಾವಣೆಯಲ್ಲೂ ವಿರೋಧ ಪಕ್ಷಕ್ಕೆ ಹೊಸ ಪಾಲುದಾರರು ಸಿಗುತ್ತಾರೆ ಎಂದು ಅಖಿಲೇಶ್ ಯಾದವ್ ವಿರುದ್ಧ ವ್ಯಂಗ್ಯವಾಡಿದ್ದಾರೆ.