ನವದೆಹಲಿ: ನಾನು ಅಧಿಕಾರವನ್ನು ಬಯಸಿಲ್ಲ, ಜನ ಸೇವೆಯೇ ಗುರಿಯಾಗಿದೆ. ಇಂದು, ಮುಂದೆಯೂ ಅಧಿಕಾರದಲ್ಲಿರಲು ಬಯಸುವುದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ನಿನ್ನೆ 85ನೇ ಮಾಸಿಕ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದ ವೇಳೆ ಆಯುಷ್ಮಾನ್ ಭಾರತದ ಫಲಾನುಭವಿಯೊಬ್ಬರು ಮೋದಿ ಅವರು ಸದಾ ಅಧಿಕಾರದಲ್ಲೇ ಮುಂದುವರಿಯಬೇಕು ಎಂದು ಆಶಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ ಅವರು ನಾನು ಅಧಿಕಾದಲ್ಲಿ ಇರಲು ಬಯಸುವುದಿಲ್ಲ. ನಾನು ಕೇವಲ ಸೇವೆಯಲ್ಲಿ ಇರಲು ಬಯಸುತ್ತೇನೆ. ನನ್ನ ಪಾಲಿಗೆ ಈ ಹುದ್ದೆ, ಈ ಪ್ರಧಾನಿಗಿರಿ, ಈ ಎಲ್ಲಾ ವಿಷಯಗಳು ಅಧಿಕಾರಕ್ಕಾಗಿಯಲ್ಲ, ಎಲ್ಲಾ ಸೇವೆಗಾಗಿ ಆಗಿದೆ. ಸರ್ಕಾರದ ಹಲವು ಕಾರ್ಯಗಳು, ಯೋಜನೆಗಳು, ಮಾನವೀಯ ಸ್ಪಂದನೆಗಳಿಗೆ ಕುರಿತು ಮಾಡುವ ಕೆಲಸಗಳು ಸದಾ ನನಗೆ ವಿಶೇಷ ಸಂಭ್ರಮ ನೀಡುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮನ್ ಕಿ ಬಾತ್: ಕೋವಿಡ್ ಇನ್ನೂ ಹೋಗಿಲ್ಲ- ದೇಶದ ಜನತೆಗೆ ಪ್ರಧಾನಿ ಮೋದಿ ಎಚ್ಚರಿಕೆ
Advertisement
Advertisement
ಸ್ಟಾರ್ಟಪ್ ಯುಗ: ಇದೇ ವೇಳೆ ಪ್ರಸ್ತುತದ ಯುಗವನ್ನು ಸ್ಟಾರ್ಟಪ್‍ಗಳಯುಗ ಎಂದು ಬಣ್ಣಿಸಿದ ಪ್ರಧಾನಿ ಮೋದಿ ಅವರು ಭಾರತದ 70ಕ್ಕಿಂತ ಹೆಚ್ಚು ಸ್ಟಾರ್ಟಪ್‍ಗಳು ಇಂದು 7500 ಕೋಟಿ ರು. ಮೌಲ್ಯದ ವಹಿವಾಟು ನಡೆಸುತ್ತಿವೆ ಎಂದು ಕೊಂಡಾಡಿದ್ದಾರೆ. ಇದನ್ನೂ ಓದಿ: ಸರ್ಕಾರಿ ಶಾಲೆಯ 25 ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು
Advertisement
Tune in to #MannKiBaat November 2021. https://t.co/2qQ3sjgLSa
— Narendra Modi (@narendramodi) November 28, 2021
Advertisement
ಮಾಹಾಮಾರಿ ಕೊರೊನಾ ಹಾವಳಿ ಇನ್ನೂ ನಮ್ಮನ್ನು ಬಿಟ್ಟು ಹೋಗಿಲ್ಲ. ಈ ವೈರಸ್ ಹರಡದಂತೆ ಎಚ್ಚರವಾಗಿರಬೇಕು. ಈ ಬಗ್ಗೆ ಹೆಚ್ಚು ಜಾಗೃತವಾಗಿರುವುದು ನಮ್ಮೆಲ್ಲರ ಹೊಣೆ ಎಂದು ದೇಶದ ಜನತೆಗೆ ಮೋದಿ ಎಚ್ಚರಿಸಿದ್ದಾರೆ.