– ʻಸುಧಾರಣೆ, ಸಾಧನೆ ಮತ್ತು ಪರಿವರ್ತನೆʼ ಮಂತ್ರದೊಂದಿಗೆ ಹಲವು ಸುಧಾರಣೆ ಜಾರಿ
– ಭಯೋತ್ಪಾದನೆ ವಿರುದ್ಧ ಹೋರಾಡಲು ಕಠಿಣ ಕಾನೂನು
– 370ನೇ ವಿಧಿ, ತ್ರಿವಳಿ ತಲಾಖ್ ನಿಷೇಧ
– 10 ವರ್ಷಗಳ ಸಾಧನೆ ವಿವರಿಸಿದ ಪ್ರಧಾನಿ ಮೋದಿ
ನವದೆಹಲಿ: 17ನೇ ಲೋಕಸಭೆಯು (17th Lok Sabha) ತಲೆಮಾರುಗಳು ನಿರೀಕ್ಷಿಸಿದ್ದನ್ನು ಈಡೇರಿಸಿದೆ. ಸುಧಾರಣೆ, ಸಾಧನೆ ಮತ್ತು ಪರಿವರ್ತನೆ ಮಂತ್ರದೊಂದಿಗೆ ನಮ್ಮ ಸರ್ಕಾರ ಕೆಲಸ ಮಾಡಿದ್ದು, ದೇಶಕ್ಕೆ ಒಂದೇ ಸಂವಿಧಾನ (One Constitution) ಇರಬೇಕು ಎಂಬ ಕನಸನ್ನು ಸಾಕಾರಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಬಣ್ಣಿಸಿದ್ದಾರೆ.
Advertisement
ಬಜೆಟ್ ಅಧಿವೇಶನದ ಕೊನೆಯ ದಿನದಂದು ಲೋಕಸಭೆಯಲ್ಲಿ ವಿಶೇಷ ಭಾಷಣ ಮಾಡಿದ ಪ್ರಧಾನಿ ಮೋದಿ, ಕಳೆದ 10 ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಯನ್ನು ವಿವರಿಸಿದ್ದಾರೆ. 17ನೇ ಲೋಕಸಭೆಯು ಈ ತಲೆಮಾರು ನಿರೀಕ್ಷಿಸಿದ್ದನ್ನು ಈಡೇರಿಸಿದೆ. ಅನೇಕ ಮಹತ್ವದ ಕಾನೂನುಗಳನ್ನು ಜಾರಿಗೊಳಿಸಿದೆ, ಪ್ರಮುಖ ನಿರ್ಣಯಗಳನ್ನ ತೆಗೆದುಕೊಂಡಿದೆ. ಈ ಮೂಲಕ ದೇಶಕ್ಕೆ ಒಂದೇ ಸಂವಿಧಾನ ಇರಬೇಕು ಎಂಬ ಕನಸನ್ನು ಸಾಕಾರಗೊಳಿಸಿದೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ಮುಂದಿನ ತಲೆಮಾರಿಗೆ ಹೆಮ್ಮೆಯ ಸಂಕೇತ: ಮೋದಿ
Advertisement
ಹಲವು ತಲೆಮಾರುಗಳು ಒಂದೇ ಸಂವಿಧಾನದ ಕನಸು ಕಂಡಿದ್ದವು. ಅದಕ್ಕೆ ಪೂರಕವಾಗಿ ನಮ್ಮ ಸರ್ಕಾರ ʻಸುಧಾರಣೆ, ಸಾಧನೆ ಮತ್ತು ಪರಿವರ್ತನೆʼ (Reform, Perform And Transform) ಎಂಬ ಮೂರು ಮಂತ್ರಗಳೊಂದಿಗೆ ಕಳೆದ 5 ವರ್ಷಗಳಲ್ಲಿ ಅನೇಕ ಸುಧಾರಣಗಳನ್ನು ಜಾರಿಗೆ ತಂದಿತು. ಭಾರತ ತನ್ನ ಅಧ್ಯಕ್ಷತೆಯಲ್ಲಿ ಜಿ20 ಸಭೆ ಆಯೋಜಿಸಿತು. ಆರ್ಟಿಕಲ್ 370 (Article 370) ರದ್ದು ಮಾಡುವ ಮೂಲಕ ಕಾಶ್ಮೀರದ ಜನರಿಗೆ ಸಾಮಾಜಿಕ ನ್ಯಾಯ ಸಿಗುವಂತೆ ಮಾಡಿತು ಎಂದು ವಿವರಿಸಿದ್ದಾರೆ.
Advertisement
Advertisement
ಅಲ್ಲದೇ ತ್ರಿವಳಿ ತಲಾಖ್‌ನಿಂದ ನಮ್ಮ ಮುಸ್ಲಿಂ ಮಹಿಳೆಯರು ಸಂಕಟಪಡುತ್ತಿದ್ದರು. ತ್ರಿವಳಿ ತಲಾಖ್ ನಿಷೇಧವನ್ನು 17ನೇ ಲೋಕಸಭೆ ಈಡೇರಿಸಿದೆ. ಇದರಿಂದ ಮುಸ್ಲಿಂ ಮಹಿಳೆಯರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಜೊತೆಗೆ ಡೇಟಾ ಸಂರಕ್ಷಣೆ ಕಾಯ್ದೆಯೊಂದಿಗೆ, ಭಯೋತ್ಪಾದನೆ ವಿರುದ್ಧ ಹೋರಾಟಲು ಕಠಿಣ ಕಾನೂನುಗಳನ್ನು ಜಾರಿಗೊಳಿಸಿತು. ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸಿತು. ಈ ಹಿಂದೆ ಅನೇಕರು ನಮಗೆ ಹೊಸ ಸಂಸತ್ ಕಟ್ಟಡ ಬೇಕು ಎಂದು ಹೇಳಿದ್ದರು, ಯಾರೂ ಅದರ ಬಗ್ಗೆ ಚರ್ಚಿಸಲಿಲ್ಲ. ಆದ್ರೆ ಬಿಜೆಪಿ ಅದನ್ನು ಸಾಕಾರಗೊಳಿಸುವ ಕೆಲಸ ಮಾಡಿತು. ಆದ್ದರಿಂದಲೇ ನಾವಿಂದು ಹೊಸ ಸಂಸತ್ತಿನಲ್ಲಿ ಕುಳಿತಿದ್ದೇವೆ ಎಂದು ಹೇಳಿದರು.
ಬ್ರಿಟಿಷರ ದಂಡ ಸಂಹಿತೆಯಲ್ಲೇ ಬದುಕಿದ್ದು ಸಾಕು:
ಬ್ರಿಟಿಷರು ನೀಡಿದ್ದ ದಂಡ ಸಂಹಿತೆಯಲ್ಲೇ 75 ವರ್ಷ ಬದುಕಿದ್ದೇವೆ, ಹೊಸ ಪೀಳಿಗೆಯೂ ದಂಡ ಸಂಹಿತೆಯಡಿ ಬದುಕಿರಬಹುದು. ಆದ್ರೆ ಮುಂದಿನ ಪೀಳಿಗೆ ನ್ಯಾಯ ಸಂಹಿತೆಯೊಂದಿಗೆ ಬದುಕುತ್ತದೆ ಎಂದು ಹೆಮ್ಮೆಯಿಂದ ಹೇಳಬಹುದು, ಇದು ನಿಜವಾದ ಪ್ರಜಾಪ್ರಭುತ್ವ ಎಂದು ಮೋದಿ ಬಣ್ಣಿಸಿದರು. ಇದನ್ನೂ ಓದಿ: ಹೀಗೆನ್ನುತ್ತಲೇ 70 ವರ್ಷ ಸರ್ಕಾರ ನಡೆಸಿಕೊಂಡು ಬಂದ್ರು – ಪಕ್ಷ ತೊರೆದ ಬಳಿಕ ಕಾಂಗ್ರೆಸ್ ವಿರುದ್ಧ ಶೆಟ್ಟರ್ ವಾಗ್ದಾಳಿ
ಸಂಸದರಿಗೆ ನಮೋ ಧನ್ಯವಾದ:
ಇಡೀ ವಿಶ್ವವನ್ನೇ ಕಾಡಿದ್ದ ಕೋವಿಡ್ ಸಮಯದಲ್ಲಿ ತಮ್ಮ ನಿಧಿಯನ್ನು ಬಿಟ್ಟುಕೊಡುವಂತೆ ಸಂಸದರಿಗೆ ಮನವಿ ಮಾಡಲಾಗಿತ್ತು. ಅದರಂತೆ ಎಲ್ಲ ಸಂಸದರೂ ತಮ್ಮ ನಿಧಿಯನ್ನ ಬಿಟ್ಟುಕೊಟ್ಟರು. ಅಲ್ಲದೇ ಸಂಸದರು ತಮ್ಮ ವೇತನದಲ್ಲಿ ಶೇ.30ರಷ್ಟು ಕಡಿತಗೊಳಿಸಿದರು. ಆದರೂ ನಾವು ಬೈಗುಳ ತಿಂದೆವು ಎಂದು ಮೋದಿ ಕಹಿ ಅನುಭವವನ್ನು ಹಂಚಿಕೊಂಡರು. ಇದನ್ನೂ ಓದಿ: ಭೂಮಿ ತಾಯಿಯ ಋತುಸ್ರಾವವನ್ನು ಸಂಭ್ರಮಿಸುವ ಹಬ್ಬ ಕೆಡ್ಡಸ- ತುಳುನಾಡಿನಲ್ಲಿ ಆಚರಣೆ ಹೇಗೆ?