ವೀರ ಸೇನಾನಿಗಳಿಗೆ ಗಣ್ಯರ ನಮನ – ಪ್ರಧಾನಿ, ರಕ್ಷಣಾ ಸಚಿವ, ತ್ರಿದಳ ಮುಖ್ಯಸ್ಥರಿಂದ ಗೌರವಾರ್ಪಣೆ

Public TV
2 Min Read
AMAR RAHE BANG

– ಹುತಾತ್ಮ ಕುಟುಂಬಸ್ಥರ ಕಣ್ಣೀರು
– ವಿದೇಶಿ ಸೇನಾಧಿಕಾರಿಗಳು ಅಂತ್ಯಕ್ರಿಯೆಯಲ್ಲಿ ಭಾಗಿ

ಚೆನ್ನೈ/ದೆಹಲಿ: ತಮಿಳುನಾಡಿನ ಕೂನೂರು ಬಳಿಯ ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ಘೋರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್, ಪತ್ನಿ ಮಧುಲಿಕಾ ರಾವತ್ ಸೇರಿ 13 ಮಂದಿ ಸೇನಾಧಿಕಾರಿಗಳು ದುರ್ಮರಣನ್ನಪ್ಪಿದ್ರು. ನಿನ್ನೆ 13 ಮಂದಿಯ ಪಾರ್ಥಿವ ಶರೀರವನ್ನು ದೆಹಲಿಯ ಪಾಲಂ ವಾಯುನೆಲೆಗೆ ತರಲಾಯ್ತು. ಗಣ್ಯರು, ಸೇನಾ ಮುಖ್ಯಸ್ಥರು ಅಂತಿಮ ನಮನವನ್ನು ಸಲ್ಲಿಸಿದ್ರು.

ಪ್ರಧಾನಿ ನರೇಂದ್ರ ಮೋದಿ ಪುಷ್ಪ ನಮನ ಬಳಿಕ ಗೌರವಾರ್ಪಣೆ ಮಾಡಿದ್ರು. ಬಳಿಕ ಹುತಾತ್ಮ ಸೈನಿಕರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ಪ್ರತಿಯೊಂದು ಕುಟುಂಬವನ್ನೂ ಭೇಟಿ ಮಾಡಿ ನಮೋ ಧೈರ್ಯ ತುಂಬಿದ್ರು. ಜೊತೆಗೆ ಪಾಲಂ ವಾಯುನೆಲೆಯಲ್ಲಿ 12 ಮಂದಿ ಹುತಾತ್ಮ ಸೇನಾಧಿಕಾರಿಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೂ ಗುಚ್ಛ ಇರಿಸಿ ಅಂತಿಮ ನಮನ ಸಲ್ಲಿಸಿದ್ರು. ಹುತಾತ್ಮ ಯೋಧರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತ ವೀಡಿಯೋ ಅಸಲಿಯತ್ತಿನ ಬಗ್ಗೆ ಸುಬ್ರಮಣಿಯನ್ ಸ್ವಾಮಿ ಪ್ರಶ್ನೆ

NARENDRA MODI

ಹುತಾತ್ಮ ಸೇನಾಧಿಕಾರಿಗಳಿಗೆ ಮೂರು ಸೇನೆಯ ಮುಖ್ಯಸ್ಥರು ಅಂತಿಮ ನಮನ ಸಲ್ಲಿಸಿದ್ರು. ಸೇನಾ ಮುಖ್ಯಸ್ಥ ಜನರಲ್ ನರಾವಣೆ, ನೌಕಾದಳದ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ್, ವಾಯು ಸೇನೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್ ಚೌಧರಿ ಹುತಾತ್ಮ ಸೇನಾಧಿಕಾರಿಗಳಿಗೆ ಹೂ ಗುಚ್ಛ ಇರಿಸಿ ಶ್ರದ್ದಾಂಜಲಿ ಸಲ್ಲಿಸಿದ್ರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಸಹ ರಕ್ಷಣಾ ಪಡೆಗಳ ಮುಖ್ಯಸ್ಥ ಹುತಾತ್ಮ ಬಿಪಿನ್ ರಾವತ್ ಸೇರಿ 11 ಮಂದಿ ಸೇನಾಧಿಕಾರಿಗಳಿಗೆ ಅಂತಿಮ ನಮನ ಸಲ್ಲಿಸಿದ್ರು. ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಸೇನಾಧಿಕಾರಿಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ರು. ಇದನ್ನೂ ಓದಿ: ಬಿಪಿನ್ ರಾವತ್ ಬಳಿಕ ಭಾರತದ ಮುಂದಿನ CDS ಯಾರು?

ಸದ್ಯ ದೆಹಲಿಯ ಧೌಲಾ ಖಾನ್‍ನ ಆಸ್ಪತ್ರೆಯಲ್ಲಿ ಹುತಾತ್ಮರ ಪಾರ್ಥಿವ ಶರೀರಗಳನ್ನು ಇರಿಸಲಾಗಿದೆ. ಮೃತ ದೇಹಗಳನ್ನು ಗುರುತಿಸುವ ಕಾರ್ಯವೂ ಸೇನೆಯಿಂದ ನಡೆದಿದೆ. ಇನ್ನು ಮೂವರ ಗುರುತು ಪತ್ತೆಯಾಗಬೇಕಿದೆ. ಕುಟುಂಬ ಸದಸ್ಯರಿಂದ ಗುರುತು ಪತ್ತೆ ಸಾಧ್ಯವಾಗದಿದ್ರೆ, ಡಿಎನ್‍ಎ ಪರೀಕ್ಷೆ ಮೂಲಕ ಕಂಡು ಹಿಡಿಯಲಾಗುತ್ತದೆ. ನಂತರ ಸೇನೆಯ ಗೌರವಗಳನ್ನು ಸಲ್ಲಿಸಿ ಕುಟುಂಬ ಸದಸ್ಯರಿಗೆ ಪಾರ್ಥಿವ ಶರೀರ ಹಸ್ತಾಂತರ ಮಾಡಲಾಗುತ್ತದೆ ಎಂದು ಸೇನೆ ತಿಳಿಸಿದೆ. ಇದನ್ನೂ ಓದಿ: ಬೀಗ ಹಾಕಿ ಕೆಲಸಕ್ಕೆ ಹೋಗಿದ್ವಿ, ಬಂದು ನೋಡುವಾಗ ಹೆಲಿಕಾಪ್ಟರ್ ಬಿದ್ದು ಮನೆಗೆ ಹಾನಿಯಾಗಿತ್ತು: ಜೈಶಂಕರ್

LAST RESPOECT

ಇಂದು ಸಿಡಿಎಸ್ ರಾವತ್ ದಂಪತಿ ಮತ್ತು ಬ್ರಿಗೇಡಿಯರ್ ಲಿದ್ದರ್ ಅಂತ್ಯಕ್ರಿಯೆ ನಡೆಯಲಿದೆ. ಉಳಿದ ಹುತಾತ್ಮರ ಪಾರ್ಥಿವ ಶರೀರಗಳನ್ನು ಅವರವರ ಸ್ವಗ್ರಾಮಗಳಿಗೆ ಕಳಿಸಲಾಗುತ್ತದೆ. ನಾಳೆ ಅಥವಾ ನಾಡಿದ್ದು ಸಕಲ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆಗಳು ನೆರವೇರಲಿವೆ. ಹಾಗಾದ್ರೆ ಇಂದು ಏನೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ. ಸಿಡಿಎಸ್ ಅಂತ್ಯಕ್ರಿಯೆ ಎಲ್ಲಿ ನಡೆಯಲಿದೆ. ಇದನ್ನೂ ಓದಿ: ಕೊಡಗಿಗೆ ಅಮೋಘ ಕೊಡುಗೆ ನೀಡಿದ್ದ ಬಿಪಿನ್ ರಾವತ್

BODY 1

ಇನ್ನು ಇಂದು ಸಕಲ ಸೇನಾ ಗೌರವಗಳೊಂದಿಗೆ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅಂತ್ಯ ಕ್ರಿಯೆ ನಡೆಯಲಿದೆ. ರಾವತ್ ಅಂತ್ಯಕ್ರಿಯೆಯಲ್ಲಿ ಶ್ರೀಲಂಕಾ ಸಿಡಿಎಸ್ ಖುದ್ದು ಭಾಗಿ ಆಗಲಿದ್ದಾರೆ. ಅಲ್ಲದೇ ನೇಪಾಳ, ಭೂತಾನ್ ದೇಶಗಳ ಉನ್ನತ ಅಧಿಕಾರಿಗಳು ಅಂತ್ಯಕ್ರಿಯೆಯಲ್ಲಿ ಭಾಗಿ ಆಗಲಿದ್ದಾರೆ. ಹುತಾತ್ಮ ಬಿಪಿನ್ ರಾವತ್‍ಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತ – ಕ್ಯಾಪ್ಟನ್ ವರುಣ್ ಸಿಂಗ್‌ಗೆ ಬೆಂಗಳೂರಿನಲ್ಲಿ ಹೆಚ್ಚಿನ ಚಿಕಿತ್ಸೆ

Share This Article