ನವದೆಹಲಿ: ಗದಗ (Gadag) ಜಿಲ್ಲೆಯ ಕಾವೇಂಶ್ರೀ ಅವರು ಕಲಾ ಸಂಸ್ಕೃತಿಯ ಪೋಷಿಸಲು ಅವರು ಕೈಗೊಂಡ ಪ್ರಯತ್ನಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿಸಿದರು.
ಈ ವರ್ಷದ ಕೊನೆಯ ಮನ್ ಕೀ ಬಾತ್ (Mann ki Baat) ಪ್ರಸಾರದಲ್ಲಿ ಮಾತನಾಡಿದ ಅವರು, ಗದಗ ಮೂಲದ ಹೋಟೆಲ್ ಉದ್ಯಮಿ ಕಾವೇಂಶ್ರೀ (ಕಾಳಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ) ಅವರು ಸಂಸ್ಕೃತಿ ಉಳಿಸಲು ತಮ್ಮನ್ನು ತಾವು ಅರ್ಪಿಸಿಕೊಂಡಿರುವ ಬಗ್ಗೆ ತಿಳಿಸಿದರು.
Advertisement
Karnataka’s Gadag district finds place in #MannKiBaat for a very special reason. #MannKiBaat pic.twitter.com/jnXl2MrfNr
— PMO India (@PMOIndia) December 25, 2022
Advertisement
ಕಾವೇಂಶ್ರೀ ಅವರು ಈ ಹಿಂದೆ ಗದಗ ರೆಸ್ಟೋರೆಂಟ್‍ನಲ್ಲಿ ಮ್ಯಾನೇಜರ್ ಆಗಿದ್ದರು. ಅದಾದ ಬಳಿಕ ಅವರು ಕಳೆದ 25 ವರ್ಷಗಳಿಂದ ಕರ್ನಾಟಕದ ಕಲೆ-ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಲ್ಲಿ ನಿರಂತರವಾಗಿ ತೊಡಗಿಸಿಕೊಂಡರು. ಅವರು ಸಂಸ್ಕøತಿ ಮತ್ತು ಸಂಪ್ರದಾಯದೊಂದಿಗಿನ ಅವರ ಬಾಂಧವ್ಯವು ಎಷ್ಟು ಆಳವಾಗಿದೆಯೆಂದರೆ, ಅದನ್ನು ತಮ್ಮ ಧ್ಯೇಯವನ್ನಾಗಿ ಮಾಡಿಕೊಂಡರು ಎಂದು ಹೇಳಿದರು.
Advertisement
Advertisement
ಅಷ್ಟೇ ಅಲ್ಲದೇ ಕಾವೇಂಶ್ರೀ ಅವರು, ಕಲಾ ಚೇತನ ಎಂಬ ಹೆಸರಿನಲ್ಲಿ ವೇದಿಕೆ ಸೃಷ್ಟಿಸಿದರು. ಈ ವೇದಿಕೆಯು ಇಂದು ಕರ್ನಾಟಕ, ಭಾರತ ಮತ್ತು ವಿದೇಶಗಳ ಕಲಾವಿದರಿಂದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಸ್ಥಳೀಯ ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು ಈ ವೇದಿಕೆಯಿಂದ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ರೆಡ್ಡಿ ಪಕ್ಷದಿಂದ ಬಿಜೆಪಿಗೆ ಸಂಕಷ್ಟ ಆಗುತ್ತಾ? – ಅಂಕಿ ಸಂಖ್ಯೆ ಏನು ಹೇಳುತ್ತೆ?
ಇದೇ ವೇಳೆ ಕೊರೊನಾ ಕುರಿತು ಮಾತನಾಡಿದ ಅವರು, ಅನೇಕ ದೇಶಗಳಲ್ಲಿ ಕೊರೊನಾ (Corona) ಸೋಂಕು ಹೆಚ್ಚುತ್ತಿರುವುದನ್ನು ಗಮನಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಜನರು ಜಾಗರೂಕರಾಗಿರಿ ಜೊತೆಗೆ ಕೊರೊನಾ ವಿರುದ್ಧ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು.
ಕ್ರಿಸ್‍ಮಸ್ ಹಾಗೂ ಹೊಸವರ್ಷದ ಆಚರಣೆಗಾಗಿ ಬೇರೆ ಕಡೆ ಹೋಗಿ ಸಂಭ್ರಮಿಸುತ್ತಿರಿ. ಆದರೆ ಅಂತಹ ಸಂದರ್ಭದಲ್ಲಿ ಮಾಸ್ಕ್ ಹಾಗೂ ಸೆನಿಟೈಸರ್ ಹೀಗೆ ಅನೇಕ ಮಾರ್ಗಸೂಚಿಗಳನ್ನು ಅನುಸರಿಸಿ. ಇದರಿಂದಾಗಿ ಕೊರೊನಾ ವಿರುದ್ಧ ಹೋರಾಡಬಹುದು ಎಂದು ತಿಳಿಸಿದರು. ಇದನ್ನೂ ಓದಿ: ರಾಜಕೀಯ ಜಂಜಾಟದ ನಡುವೆ ಯುವಕರೊಂದಿಗೆ ಕಬಡ್ಡಿ ಆಡಿದ ಶಾಸಕ ಶಿವಲಿಂಗೇಗೌಡ