ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 51 ನೇ ಹಾಗೂ ವರ್ಷದ ಕೊನೆಯ ‘ಮನ್ ಕಿ ಬಾತ್’ ಕಾರ್ಯಕ್ರಮಲ್ಲಿ ತುಮಕೂರು ಜಿಲ್ಲೆಯ ಪದ್ಮಶ್ರೀ ಪುರಸ್ಕೃತೆ ಸೂಲಗಿತ್ತಿ ನರಸಮ್ಮ ರವರ ಸಾಧನೆಯನ್ನು ನೆನೆದು, ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ 2018ರಲ್ಲಿ ದೇಶ ಸಾಧಿಸಿದ ವಿವಿಧ ಮೈಲಿಗಲ್ಲುಗಳನ್ನು ವಿವರಿಸಿದರು. ಜೊತೆಗೆ ದೇಶದ ಜನತೆಗೆ 2019ರ ಹೊಸ ವರ್ಷದ ಶುಭಶಯ ತಿಳಿಸಿದ್ದಾರೆ.
Advertisement
In January 2019, the holy city of Prayagraj will host the Kumbh Mela. This is an important event, one with deep historical roots and an occasion for self-discovery.
Do visit Prayagraj for the Kumbh and do share your photos on social media. #MannKiBaat pic.twitter.com/fzD65B9Xva
— Narendra Modi (@narendramodi) December 30, 2018
Advertisement
ದೇಶದಲ್ಲಿ ಪರಮಾಣು ಸಾಮಥ್ರ್ಯ ಹೆಚ್ಚಾಗಿದ್ದು, ಭೂ ಸೇವೆ, ಜಲಪಡೆ ಹಾಗೂ ವಾಯುಪಡೆಯಲ್ಲಿ ಹೋರಾಡುವ ನ್ಯೂಕ್ಲಿಯರ್ ಟ್ರಯಾಡ್ ಸಾಧನೆ ಈ ವರ್ಷ ಲಭಿಸಿದೆ. 2018ರಲ್ಲಿ ನಡೆದ ಏಷ್ಯನ್ ಗೇಮ್ಸ್, ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಕ್ರೀಡಾಪಟುಗಳು ಹೆಚ್ಚು ಪದಕಗಳನ್ನು ಗಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
Advertisement
ಪ್ರಪಂಚದಲ್ಲೇ ಅತಿ ದೊಡ್ಡ ಆರೋಗ್ಯ ವಿಮೆ ಯೋಜನೆಯಾದ ಆಯುಷ್ಮಾನ್ ಭಾರತ್ ಯೋಜನೆಗೆ ಚಾಲನೆ, ದೇಶದ ಪ್ರತಿ ಗ್ರಾಮಕ್ಕೂ ವಿದ್ಯುತ್ ಸಂಪರ್ಕ, ಸರ್ದಾರ್ ಪಟೇಲ್‍ರ ‘ಏಕತಾ ಪ್ರತಿಮೆ’ ಅನಾವರಣ ಸೇರಿದಂತೆ ಅನೇಕ ಬೆಳಗವಣಿಗೆಯನ್ನು 2018ರಲ್ಲಿ ಕಂಡಿದ್ದೇವೆ. ಇತ್ತ ವಿಶ್ವಸಂಸ್ಥೆ ನೀಡುವ ಅತ್ಯುನ್ನತ ಪರಿಸರ ಪ್ರಶಸ್ತಿ ‘ಚಾಂಪಿಯನ್ಸ್ ಆಫ್ ದಿ ಅರ್ಥ್’ ಗೆ ಭಾರತ ಪಾತ್ರವಾಗಿದೆ ಎಂದು ಹೇಳಿದರು.
Advertisement
Our festivals are occasions of celebrating togetherness. They also illustrate a deep connect with Mother Nature. pic.twitter.com/aI6QzonL4A
— Narendra Modi (@narendramodi) December 30, 2018
ಇದು 2018ರ ಕೊನೆಯ ಮನ್ ಕಿ ಬಾತ್ ಕಾರ್ಯಕ್ರಮ. ಮತ್ತೆ 2019ರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಭೇಟಿಯಾಗೋಣ ಎಂದು ತಿಳಿಸಿದ ಮೋದಿ, ದೇಶದ ಜನತೆಗೆ ಹೊಸ ವರ್ಷದ ಶುಭಶಯ ತಿಳಿಸಿದರು.
Remembering Mahatma Gandhi and Madiba!
As we mark the 150th Jayanti of Bapu and the birth centenary of Madiba, we recall their ideals and reiterate our commitment to create a just and compassionate society. pic.twitter.com/nED2U1EduB
— Narendra Modi (@narendramodi) December 30, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv