ಗಾಂಧಿನಗರ: ಪಂಚರಾಜ್ಯಗಳ ಚುನಾವಣೆಯಲ್ಲಿ 4 ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಇದಾದ ನಂತರ ಪ್ರಧಾನಿ ಮೋದಿ (Narendra Modi) ಅವರು ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ.
Advertisement
ಮೋದಿ ಅವರು 2 ದಿನದ ಗುಜರಾತ್ ಪ್ರವಾಸದಲ್ಲಿದ್ದಾರೆ. ಈ ವೇಳೆ ಗಾಂಧಿನಗರದಲ್ಲಿ ತಮ್ಮ ತಾಯಿಯನ್ನು ಭೇಟಿಯಾದರು. ತಾಯಿ ಆಶೀರ್ವಾದವನ್ನು ಪಡೆದು ಜೊತೆಯಲ್ಲಿ ಕುಳಿತು ರಾತ್ರಿಯ ಭೋಜನ ಸವಿದಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದನ್ನೂ ಓದಿ: ನಾನೊಬ್ಬ ಅಧ್ಯಕ್ಷ, ಆದರೆ ಅದಕ್ಕೂ ಮೊದಲು 2 ಮಕ್ಕಳ ತಂದೆ: ಉಕ್ರೇನ್ ಅಧ್ಯಕ್ಷ
Advertisement
Gujarat: Prime Minister Narendra Modi meets his mother Heeraben Modi at her residence, in Gandhinagar pic.twitter.com/4CvlnsPQtm
— ANI (@ANI) March 11, 2022
Advertisement
ಅಹಮದಾಬಾದ್‍ನಲ್ಲಿ ರೋಡ್‍ಶೋ ಮುಗಿಸಿ ಗುಜರಾತ್ ಪಂಚಾಯತ್ ಮಹಾಸಮ್ಮೇಳನದಲ್ಲಿ ಭಾಷಣ ಮಾಡಿದ ನಂತರ ಗಾಂಧಿನಗರಕ್ಕೆ ಬಂದು ತಮ್ಮ ತಾಯಿ ಹೀರಾ ಬೆನ್ ಅವರನ್ನು ಭೇಟಿಯಾಗಿದ್ದಾರೆ. ಮೋದಿಗೆ ಅವರ ತಾಯಿ ಶುಭಾಶಯ ಕೋರುವುದು, ಆಶೀರ್ವಾದ ಪಡೆಯುವುದನ್ನು ನಾವು ಫೋಟೋದಲ್ಲಿ ನೋಡಬಹುದಾಗಿದೆ. ಮತ್ತೊಂದು ಚಿತ್ರದಲ್ಲಿ ಮೋದಿ ಮತ್ತು ಅವರ ತಾಯಿ ಇಬ್ಬರೂ ಡೈನಿಂಗ್ ಟೇಬಲ್‍ನಲ್ಲಿ ಕುಳಿತು ಒಟ್ಟಿಗೆ ರಾತ್ರಿಯ ಊಟವನ್ನು ಮಾಡಿದ್ದಾರೆ. ಇದನ್ನೂ ಓದಿ: ಮಾಜಿ ಶಾಸಕ ಬಿ.ಆರ್.ಪಾಟೀಲ್‍ಗೆ ಪತ್ರ ಬರೆದು ಕ್ಷಮೆ ಕೇಳಿದ ಡಿಕೆಶಿ
Advertisement
ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಮತ್ತು ಗೋವಾದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಭರ್ಜರಿ ಗೆಲುವು ದಾಖಲಿಸಿದೆ. ಉತ್ತರಪ್ರದೇಶದಲ್ಲಿ 403 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ತನ್ನ ಮಿತ್ರಪಕ್ಷಗಳೊಂದಿಗೆ 273 ಸ್ಥಾನ ಗಳಿಸುವ ಮೂಲಕ ಭರ್ಜರಿ ಜಯ ದಾಖಲಿಸಿದೆ. ಪಕ್ಷವು ತನ್ನ ಮತಗಳ ಹಂಚಿಕೆಯಲ್ಲಿ 39.67% ರಿಂದ 41.29% ಕ್ಕೆ ನಿರ್ಣಾಯಕ ಏರಿಕೆ ಕಂಡಿದೆ. ಯುಪಿ ಜೊತೆಗೆ ಉತ್ತರಾಖಂಡದಲ್ಲಿ ಬಿಜೆಪಿ ಐತಿಹಾಸಿಕ ಸತತ ಎರಡನೇ ಅವಧಿಯನ್ನು ಗೆದ್ದುಕೊಂಡಿದೆ. ಗೋವಾದಲ್ಲಿ ಕಾಂಗ್ರೆಸ್‍ನ್ನು ಸೋಲಿಸಿದೆ. ಮತ್ತು ಮಣಿಪುರದಲ್ಲಿ ಸ್ಪಷ್ಟ ಬಹುಮತವನ್ನು ಗಳಿಸಿದೆ.