ಬೆಂಗಳೂರು: ರಾಜ್ಯದಲ್ಲಿ ಕಳೆದ ವರ್ಷ ಆರಂಭವಾದ ಮೋದಿ (Narendra Modi) ಬ್ರ್ಯಾಂಡ್ ಅಸ್ತ್ರ ಪ್ರಯೋಗ ಯಶಸ್ವಿಯಾಗಿ ಮುಂದುವರಿದಿದೆ. ಪ್ರತಿ ಬಾರಿಯೂ ಒಂದೊಂದು ವಿಭಾಗವಾರು ಜಿಲ್ಲೆಗಳನ್ನೇ ಫೋಕಸ್ ಮಾಡಿಕೊಂಡು ಬರುತ್ತಿರುವ ಪ್ರಧಾನಿ ಮೋದಿಯವರ ಈ ಬಾರಿಯ ಚಿತ್ತ ನೆಟ್ಟಿದ್ದು ಬಯಲು ಸೀಮೆ ಜಿಲ್ಲೆಗಳ ಮೇಲೆ.
ಸೋಮವಾರ ಬೆಂಗಳೂರು ಗ್ರಾಮಾಂತರ (Bengaluru Rural) ಹಾಗೂ ತುಮಕೂರು (Tumakuru) ಜಿಲ್ಲೆಗಳಲ್ಲಿ ಮೋದಿ ಅಬ್ಬರ ಜೋರಾಗಿಯೇ ಇತ್ತು. ಬಯಲು ಸೀಮೆಯ 2 ಜಿಲ್ಲೆಗಳಿಗೆ ಭೇಟಿ ನೀಡುವ ಮೂಲಕ 4 ಜಿಲ್ಲೆಗಳ ಮೇಲೆ ಫೋಕಸ್ ಮಾಡಿದ್ದರು ಪ್ರಧಾನಿ ಮೋದಿ. ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳಲ್ಲಿ ಆದ ಮೋದಿ ಮೋಡಿ, ಪಕ್ಕದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಮೇಲೂ ಪ್ರಭಾವ ಬೀರಿದೆ ಎಂದು ವ್ಯಾಖ್ಯಾನಿಸಲಾಗಿದೆ. ಇದನ್ನೂ ಓದಿ: ಪ್ರಹ್ಲಾದ್ ಜೋಶಿ ಪಾರ್ಥೇನಿಯಂ ಇದ್ದಂತೆ – ಹೆಚ್‌ಡಿಕೆ ಟೀಕೆ
ಬಯಲು ಸೀಮೆ ಜಿಲ್ಲೆಗಳಲ್ಲಿ ಪ್ರಧಾನಿ ಮೋದಿಯವರು ತಮ್ಮ ಭಾಷಣದ ಮೂಲಕ ಮೋಡಿ ಮಾಡಿದ್ರು. ಕೇಂದ್ರ ಬಜೆಟ್ ಬಗ್ಗೆ ಸುದೀರ್ಘವಾಗಿ ಮಾತಾಡಿದ ಪ್ರಧಾನಿ, ಕರ್ನಾಟಕದ ಕಸುಬುದಾರ ವರ್ಗದವರು, ರೈತ ಸಮಯದಾಯ, ಶ್ರಮಿಕರು, ಮಹಿಳೆಯರಿಗೆ ಹೇಗೆ ಅನುಕೂಲಕರವಾಗಿದೆ ಎಂದು ವಿವರಿಸಿದರು. ತಮ್ಮ ಭಾಷಣದುದ್ದಕ್ಕೂ ಅಭಿವೃದ್ಧಿ ಮಂತ್ರದ ಜಪ ಪಠಿಸಿದರು.
ಇದೀಗ ಪ್ರಧಾನಿ ಮೋದಿಯವರ ಈ ಭರವಸೆದಾಯಕ ಭಾಷಣದೊಳಗೆ ಲಾಭದ ಬೆಳೆ ತೆಗೆಯಲು ಬಿಜೆಪಿ ಪ್ಲ್ಯಾನ್ ಮಾಡಿದೆ. ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ 12ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಟಾರ್ಗೆಟ್ ಅನ್ನು ಬಿಜೆಪಿ ನಾಯಕರು ಹಾಕಿಕೊಂಡಿದ್ದಾರೆ. ನಾಲ್ಕು ಜಿಲ್ಲೆಗಳಲ್ಲೂ ಒಟ್ಟು 26 ವಿಧಾನಸಭೆ ಕ್ಷೇತ್ರಗಳಿವೆ. ಈ ಕ್ಷೇತ್ರಗಳಲ್ಲಿ ಬಿಜೆಪಿ ಸಂಘಟನೆ, ಸ್ಥಳೀಯ ನಾಯಕತ್ವಕ್ಕೆ ಒತ್ತು ಕೊಡಲಾಗ್ತಿದೆ. ಈಗ ಮೋದಿಯವರಿಂದಾಗಿ ಪಕ್ಷದ ಕಾರ್ಯಕರ್ತರಲ್ಲೂ ಹುಮ್ಮಸ್ಸು ಹೆಚ್ಚಾಗಿದೆ. ಹೀಗಾಗಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸಿಕೊಂಡು 26 ಕ್ಷೇತ್ರಗಳ ಪೈಕಿ 12+ ಸೀಟ್ ಗೆಲ್ಲಲು ಬಿಜೆಪಿ ಟಾರ್ಗೆಟ್ ಫಿಕ್ಸ್ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಯಾವ ಜಾತಿಯ ಬಗ್ಗೆಯೂ ಹೀನಾಯವಾಗಿ ಮಾತಾಡಬಾರದು: ಡಿ.ಸಿ ತಮ್ಮಣ್ಣ
ಸದ್ಯ ತುಮಕೂರಿನಲ್ಲಿ 5, ಚಿಕ್ಕಬಳ್ಳಾಪುರದಲ್ಲಿ 01 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬಿಜೆಪಿ ಶೂನ್ಯ ಸಾಧನೆ ಮಾಡಿದೆ. ಈಗ ಮೋದಿಯವರ ನೆರವಿನ ಮೂಲಕ ಕೈ-ತೆನೆ ಕೋಟೆಗಳನ್ನು ವಶಪಡಿಸಿಕೊಳ್ಳಲು ಬಿಜೆಪಿ ತಂತ್ರ ಹೆಣೆದಿದೆ. ಮೋದಿಯವರ ಅಭಿವೃದ್ಧಿ+ಜಾತಿ+ಸಣ್ಣ ಕಸುಬುದಾರ ವರ್ಗ ಕೇಂದ್ರಿತ ಭಾಷಣದ ಮೇಲೆ ವಿಶ್ವಾಸ ಇರಿಸಿ, ಆ ಭರವಸೆಯಲ್ಲೇ ಹೆಚ್ಚಿನ ಸೀಟ್ ಗೆಲ್ಲುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಬಯಲು ಸೀಮೆಯ ಕೈ-ತೆನೆ ಕೋಟೆಗಳಲ್ಲಿ ಕಮಲ ಅರಳಿಸುವ ಮೋದಿ ಸ್ಟ್ರಾಟಜಿ ಕೈಹಿಡಿಯುತ್ತಾ ಅಂತ ಕಾದು ನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k