ಬೆಂಗಳೂರು: ಚುನಾವಣಾ ಮೂಡ್‌ನಲ್ಲಿರುವ ಪ್ರಧಾನಿ ಮೋದಿ (Narendra Modi) ಅವರು ಸರ್ಕಾರದ ಅಧಿಕೃತ ಕಾರ್ಯಕ್ರಮಗಳನ್ನು ವಿಪಕ್ಷಗಳನ್ನು ಹಳಿಯೋಕೆ ಬಳಸುತ್ತಿರುವುದು ಎಷ್ಟು ಸರಿ? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಪ್ರಶ್ನಿಸಿದ್ದಾರೆ. ಈ ಕುರಿತಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ಗುಂಡೂರಾವ್ ಪತ್ರ ಬರೆದಿದ್ದಾರೆ.
ಪತ್ರದಲ್ಲೆನಿದೆ?
ಸಿಕಲ್ ಸೆಲ್ ರಕ್ತಹೀನ ನಿವಾರಣೆ ಮಿಷನ್‌ಗೆ ಚಾಲನೆ ನೀಡುವ ಸರ್ಕಾರಿ ಕಾರ್ಯಕ್ರಮವನ್ನು ಪ್ರಧಾನಿ ಮೋದಿಯವರು ವಿಪಕ್ಷಗಳನ್ನು ಹಳಿಯಲು ಬಳಸಿಕೊಂಡರು ಎಂದು ಗುಂಡೂರಾವ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ವರ್ಚುವಲ್ ಮೂಲಕ ಕಾರ್ಯಕ್ರಮಕ್ಕೆ ಪ್ರಧಾನಿ ಅವರು ಚಾಲನೆ ನೀಡಿಲಿದ್ದು, ರಾಜ್ಯದ ಆರೋಗ್ಯ ಸಚಿವರ ಜೊತೆ ವೀಡಿಯೋ ಕಾನ್ಫರೆನ್ಸ್ನಲ್ಲಿ ಚರ್ಚಿಸಲಿದ್ದಾರೆ ಎಂದು ಕೇಂದ್ರ ಸರ್ಕಾರ ನಮಗೆ ಆಹ್ವಾನಿಸಿತ್ತು. ರಾಜ್ಯದ ಆರೋಗ್ಯ ಸಚಿವನಾಗಿ ನಾನು ವಿಕಾಸ ಸೌಧದಿಂದ ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ್ದೆ. ಆದರೆ ಮೋದಿಯವರು ಯಾರೊಂದಿಗೂ ಚರ್ಚಿಸದೇ ವಿಪಕ್ಷಗಳನ್ನು ದೂಷಿಸುವ ಭಾಷಣ ಮಾಡಿದರು.
Advertisement
Advertisement
ಸಿಕಲ್ ಸೆಲ್ ರಕ್ತಹೀನ ಕಾಯಿಲೆ ನಿವಾರಣೆ ಕುರಿತು ಪ್ರಧಾನಿ ಮೋದಿಯವರು ಈಗ ಮಾತಾಡುತ್ತಿದ್ದಾರೆ. ಆದರೆ ಸಿಕಲ್ ಸೆಲ್ ನಿವಾರಣೆ ಕುರಿತು ದೇಶದಲ್ಲೇ ಮೊದಲು ಜಾಗೃತಗೊಂಡಿದ್ದ ರಾಜ್ಯ ಕರ್ನಾಟಕ. 2016 ರಿಂದಲೇ ಕರ್ನಾಟಕ ಸರ್ಕಾರ ಸಿಕಲ್ ಸೆಲ್ ಕಾಯಿಲೆ ವಿರುದ್ಧ ಕಾರ್ಯಕ್ರಮಗಳನ್ನು ಹಾಕಿಕೊಂಡು ಬಂದಿದೆ. 2016 ರಲ್ಲಿ ರಾಜ್ಯದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೈಸೂರು ಭಾಗದ ಬುಡಕಟ್ಟು ಜನರ ತಪಾಸಣೆ ನಡೆಸಿ ಪಾಸಿಟಿವ್ ಬಂದವರಿಗೆ ಉಚಿತ ಆರೋಗ್ಯ ಚಿಕಿತ್ಸೆ ನೀಡುತ್ತಿದೆ. ಇದನ್ನೂ ಓದಿ: ಇಂದು ಬಾಂಬ್ ಹಾಕಿದವರ ದೇಶಕ್ಕೆ ನುಗ್ಗಿ ಹೊಡೆಯೋ ಸಾಮರ್ಥ್ಯ ನಮ್ಮಲ್ಲಿದೆ: ಜೋಶಿ
Advertisement
Advertisement
ಸಿಕಲ್ ಸೆಲ್ ಕಾಯಿಲೆಯನ್ನು ಕರ್ನಾಟಕ ರಾಜ್ಯ ತಡೆಗಟ್ಟುತ್ತಿರುವ ಕ್ರಮಗಳ ಬಗ್ಗೆ ಪ್ರಧಾನಿ ಮೋದಿಯವರು ರಾಜ್ಯ ಸರ್ಕಾರದ ಅಭಿಪ್ರಾಯ ಕೇಳುತ್ತಾರೆ ಎಂಬ ನಿರೀಕ್ಷೆಯಲ್ಲಿ ರಾಜ್ಯದ ಆರೋಗ್ಯ ಸಚಿವನಾಗಿ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಆದರೆ ಪ್ರಧಾನಿ ಅವರು ತಮ್ಮ ಪಕ್ಷದ ಚುನಾವಣಾ ಭಾಷಣಕ್ಕೆ ನಮ್ಮ ಸಮಯ ವ್ಯರ್ಥಮಾಡಿದರು. ಮೋದಿಯವರು ಎಲ್ಲರಿಗೂ ನಿರಾಶೆ ಉಂಟುಮಾಡಿದರು ಎಂದು ಪತ್ರದಲ್ಲಿ ಗುಂಡೂರಾವ್ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜಾತಿಗಣತಿ ವರದಿಯನ್ನು ಸ್ವೀಕರಿಸುತ್ತೇವೆ, ಎಷ್ಟೇ ಕಷ್ಟ ಬಂದರೂ ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತೇನೆ: ಸಿಎಂ
Web Stories