ರಾಯಚೂರು: ನರೇಂದ್ರ ಮೋದಿ (Narendra Modi) ಪ್ರಧಾನ ಮಂತ್ರಿ ಅಲ್ಲ, ಪ್ರಧಾನ ಸುಳ್ಳುಗಾರ. ಅವರ ಪ್ರಣಾಳಿಕೆಯಲ್ಲಿ (Manifesto) ಅಮೃತ್ ಕಾಲ್ ಎಂದು ಹೇಳಿದ್ದಾರೆ. ಆದರೆ ಇದು ಅನ್ಯಾಯದ ಕಾಲ ಎಂದು ಎಂಎಲ್‌ಸಿ ಬಿ.ಕೆ ಹರಿಪ್ರಸಾದ್ (BK Hariprasad) ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ರಾಯಚೂರಲ್ಲಿ (Raichur) ಮಾತನಾಡಿದ ಅವರು, ಮೋದಿ ಈ ಹಿಂದೆಯೂ ಅಚ್ಛೇ ದಿನ್ ಅಂತಾ ಹೇಳಿದ್ದರು. ಯುವಕರಿಗೆ ಸ್ಕಿಲ್ ಇಂಡಿಯಾ ಎಂದು ಹೇಳಿದರು. ಮೇಕ್ ಇನ್ ಇಂಡಿಯಾ ಅಂತಾ ಮಾಡಿದರು. ಆತ್ಮನಿರ್ಭರ್ ಅಂತಾ ಹೇಳಿದ್ರೂ ಏನೂ ಉಪಯೋಗ ಆಗಿಲ್ಲ. ಫಾರ್ಮರ್ ಹಬ್, ಹಾರ್ಟಿಕಲ್ಚರ್ ಹಬ್ ಮಾಡುತ್ತೇವೆ ಎಂದಿದ್ದರು. ಆದರೆ ಇದು ಅಮೃತ ಕಾಲ ಅಲ್ಲ, ಇದು ಅನ್ಯಾಯದ ಕಾಲ ಎಂದು ಹರಿಹಾಯ್ದರು. ಇದನ್ನೂ ಓದಿ: ಆಪ್ ಮೈತ್ರಿಗೆ ವಿರೋಧ – ದೆಹಲಿಯ ಕಾಂಗ್ರೆಸ್ ಅಧ್ಯಕ್ಷ ರಾಜೀನಾಮೆ
ಜನ ಯಾವ ಪರಿಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ನಾವು ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ. ಐದು ಪ್ರಮುಖ ಅಂಶಗಳೊಂದಿಗೆ ಪ್ರಣಾಳಿಕೆಯನ್ನು ಖರ್ಗೆ ನೇತೃತ್ವದಲ್ಲಿ ಬಿಡುಗಡೆ ಮಾಡಿದೆವು. ಇದು ಯುವಕ, ಮಹಿಳೆ ಸೇರಿದಂತೆ ಎಲ್ಲರಿಗೂ ಉಪಯೋಗವಾಗುತ್ತದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‌ನ ತುಷ್ಟೀಕರಣದ ರಾಜಕೀಯದಿಂದ ಆದಿವಾಸಿ ಮಹಿಳೆ ಮೇಲೆ ದೌರ್ಜನ್ಯ, ನೇಹಾ ಹತ್ಯೆ: ಮೋದಿ
2021ರ ಬಜೆಟ್‌ನಲ್ಲಿ 35,000 ಕೋಟಿ ವ್ಯಾಕ್ಸಿನ್‌ಗೆ ಇಟ್ಟಿದ್ದೇವೆ ಎಂದರು. ವ್ಯಾಕ್ಸಿನ್‌ಗೆ ದರ ನಿಗದಿಪಡಿಸಿದರು. ಸುಪ್ರೀಂ ಕೋರ್ಟ್ ಸುಮೊಟೊ ಕೇಸ್ ತೆಗೆದುಕೊಂಡಿತ್ತು. ಹೆಲ್ತ್ ಎಮರ್ಜೆನ್ಸಿ ಡಿಕ್ಲೇರ್ ಮಾಡಲಾಗಿದೆ. ಆದರೆ ಅದಕ್ಕೆ ರಿಸರ್ವ್ ಇರುವ ಹಣದ ಮಾಹಿತಿ ಕೊಡಿ, ಉಚಿತವಾಗಿ ಯಾಕೆ ವ್ಯಾಕ್ಸಿನ್ ಕೊಡ್ತಿಲ್ಲ ಎಂದು ಕೇಳಿತ್ತು. ನಂತರ ವ್ಯಾಕ್ಸಿನ್ ಉಚಿತವಾಗಿ ಕೊಟ್ಟರು ಎಂದು ಕಿಡಿಕಾರಿದರು. ಇದನ್ನೂ ಓದಿ: UPA Vs NDA ಯಾರ ಅವಧಿಯಲ್ಲಿ ಎಷ್ಟು ಬರ ಪರಿಹಾರ ಬಿಡುಗಡೆಯಾಗಿದೆ? – ದಾಖಲೆ ರಿಲೀಸ್ ಮಾಡಿ ಅಶೋಕ್ ಕಿಡಿ
ಬಿ.ಕೆ.ಹರಿಪ್ರಸಾದ್ ಚಲಾವಣೆಯಲ್ಲಿ ಇಲ್ಲದ ನಾಣ್ಯ ಅನ್ನೋ ಜನಾರ್ದನರೆಡ್ಡಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಭ್ರಷ್ಟಾಚಾರ ಮಾಡಿ 400 ವರ್ಷ ಜೈಲಲ್ಲಿದ್ರೆ ಅವರ ಪ್ರಕಾರ ಚಲಾವಣೆ ನಾಣ್ಯ. ಈ ರಾಜ್ಯವನ್ನು ಲೂಟಿ ಹೊಡೆದು, ಕಳ್ಳತನ ಮಾಡಿ ನಾನು ಜೈಲಿಗೆ ಹೋದವನಲ್ಲ. ಅವರಿಗೆಲ್ಲಾ ಉತ್ತರ ಕೊಡುವುದು ತಪ್ಪು ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ತಪ್ಪಿಸಿಕೊಂಡಿದ್ದರೆ ನನಗೆ ಸಂಬಂಧವಿಲ್ಲ – ತನಿಖಾ ವರದಿ ಬಂದ ಮೇಲೆ ಮಾತನಾಡ್ತೀನಿ ಎಂದ ಹೆಚ್‌ಡಿಕೆ