ಅಯೋಧ್ಯೆ: ಉತ್ತರ ಪ್ರದೇಶದ (Uttar Pradesh) ಅಯೋಧ್ಯೆಯ ರಾಮಮಂದಿರದಲ್ಲಿ ನಡೆದ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ನಂತರ ಪ್ರಧಾನಿ ನರೇಂದ್ರ ಮೋದಿ (Narendra Modi) ಸೋಮವಾರ ತಮ್ಮ 11 ದಿನಗಳ ಉಪವಾಸ ವ್ರತವನ್ನು (Fasting) ಕೊನೆಗೊಳಿಸಿದ್ದಾರೆ.
ಗೋವಿಂದ್ ದೇವ್‌ಗಿರಿ ಮಹಾರಾಜರು ( Govind Dev Giri Maharaj) ಪ್ರಧಾನಿ ಮೋದಿಯವರಿಗೆ ‘ಚರಣಾಮೃತ’ (ಪೂಜಾ ವಿದಿ-ವಿಧಾನಗಳಿಗೆ ಬಳಸುವ ಹಾಲಿನೊಂದಿಗೆ ಮಾಡಿದ ಸಿಹಿ ಪಾನೀಯ) ತಿನ್ನಿಸಿದ ನಂತರ ಮೋದಿ ಅವರು ತಮ್ಮ ಉಪವಾಸವನ್ನು ಕೊನೆಗೊಳಿಸಿದರು. ತಮ್ಮ 11 ದಿನಗಳ ಆಚರಣೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ಗೋವಿಂದ್ ದೇವ್‌ಗಿರಿ ಮಹಾರಾಜ್ ಅವರು ಪ್ರಧಾನಿ ಮೋದಿಯವರ ಭಕ್ತಿಯನ್ನು ಶ್ಲಾಘಿಸಿದರು. ಇದನ್ನೂ ಓದಿ: ಕೊನೆಗೂ ನಮ್ಮ ರಾಮ ಬಂದಿದ್ದಾನೆ, ಇಂದಿನಿಂದ ಹೊಸ ಯುಗ ಉದಯವಾಗಿದೆ: ನರೇಂದ್ರ ಮೋದಿ
Advertisement
Advertisement
ಜನವರಿ 12 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಮುಗಿಯುವವರೆಗೆ 11 ದಿನಗಳ ವಿಶೇಷ ಉಪವಾಸವನ್ನು ಪ್ರಾರಂಭಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದರು. ಇದನ್ನೂ ಓದಿ: ಶಿವಮೊಗ್ಗ: ಅಯೋಧ್ಯೆ ಬಾಲರಾಮನ ಪ್ರಾಣ ಪ್ರತಿಷ್ಠೆ ಸಂಭ್ರಮದ ವೇಳೆ ಅಲ್ಲಾಹು ಅಕ್ಬರ್ ಎಂದು ಕೂಗಿದ ಮುಸ್ಲಿಂ ಮಹಿಳೆ
Advertisement
ರಾಮ ಮಂದಿರದ ‘ಪ್ರಾಣ ಪ್ರತಿಷ್ಠಾಪನೆಗೆ ಕೇವಲ 11 ದಿನಗಳು ಬಾಕಿ ಉಳಿದಿವೆ. ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಸಮಯದಲ್ಲಿ ಭಾರತದ ಜನರನ್ನು ಪ್ರತಿನಿಧಿಸಲು ದೇವರು ನನ್ನನ್ನು ಸೃಷ್ಟಿಸಿದ್ದಾನೆ. ಇದನ್ನು ಗಮನದಲ್ಲಿಟ್ಟುಕೊಂಡು ಇಂದಿನಿಂದ 11 ದಿನಗಳ ಕಾಲ ಕಠಿಣ ವ್ರತವನ್ನು ಪ್ರಾರಂಭಿಸುತ್ತಿದ್ದೇನೆ ಎಂದು ಮೋದಿ ಆಡಿಯೋ ಸಂದೇಶದಲ್ಲಿ ತಿಳಿಸಿದ್ದರು. ಅದೇ ರೀತಿ ನಿಯಮವನ್ನು ಪಾಲಿಸುತ್ತಿದ್ದರು.ಇದನ್ನೂ ಓದಿ: ಮಂದಸ್ಮಿತ, ಮುಗ್ಧಮುಖದ ಬಾಲರಾಮನ ಕಣ್ತುಂಬಿಕೊಂಡು ಪುನೀತರಾದ ರಾಮಭಕ್ತರು
Advertisement
ಇದೀಗ ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಸುಸೂತ್ರವಾಗಿ ನೆರವೇರಿದ್ದು, ಪ್ರಧಾನಿ ಮೋದಿ ನೇತೃತ್ವದಲ್ಲಿ ಬಾಲರಾಮನ ಮುಖವನ್ನು ಬಹಿರಂಗಪಡಿಸಲಾಯಿತು. ಈ ವೇಳೆ ಮೋದಿ ಜೊತೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಉಪಸ್ಥಿತರಿದ್ದರು. ಇದನ್ನೂ ಓದಿ: ಪ್ರಧಾನಿ ಮೋದಿಗೆ ಬೆಳ್ಳಿಯ ರಾಮಮಂದಿರ ಪ್ರತಿರೂಪ ಗಿಫ್ಟ್!