ಸಾಂವಿಧಾನಿಕ ಜವಾಬ್ದಾರಿ, ಹೊಣೆಗಾರಿಕೆಯಿಂದ ಮೋದಿ ಸರ್ಕಾರ ಓಡಿ ಹೋಗುವಂತಿಲ್ಲ: ಖರ್ಗೆ ಟೀಕೆ

Public TV
1 Min Read
Mallikarjun Kharge Narendra Modi

ನವದೆಹಲಿ: ಸಂಸತ್ ಅಧಿವೇಶನ ನಡೆಯುತ್ತಿರುವ ಹೊತ್ತಲ್ಲಿ ಪ್ರಧಾನಿ ಸದನದ ಹೊರಗೆ ಹೇಳಿಕೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಮಣಿಪುರ ಹಿಂಸಾಚಾರದ (Manipur Violence) ಬಗ್ಗೆ ಸಂಸತ್ತಿನ ಒಳಗೆ ಸಮಗ್ರ ಹೇಳಿಕೆ ನೀಡುವುದು ಅವರ ಕರ್ತವ್ಯ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದ್ದಾರೆ.

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ವಿಚಾರಕ್ಕೆ ಸಂಬಂಧಿದಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು. ಮಣಿಪುರದ ಪರಿಸ್ಥಿತಿ ಏನೆಂಬುದರ ಬಗ್ಗೆ ಪ್ರಧಾನಿ ಹೇಳಿಕೆ ನೀಡಬೇಕು ಎಂದು ಟ್ವೀಟ್ ಮೂಲಕ ಆಗ್ರಹಿಸಿದರು.

Mallikarjun Kharge 1 2

ಸದನದಲ್ಲಿ ನಿಯಮ 267ರ ಅಡಿಯಲ್ಲಿ ಚರ್ಚೆ ನಡೆಯಬೇಕು. ಆದರೆ ಮೋದಿ ಸರ್ಕಾರದ ಸಚಿವರು ಅಲ್ಪಾವಧಿ ಚರ್ಚೆ ಮಾತ್ರ ಎಂದು ಹೇಳುತ್ತಾರೆ. ಮತ್ತೊಬ್ಬರು ಕೇವಲ ಅರ್ಧ ಗಂಟೆ ಚರ್ಚೆ ಎಂದು ಹೇಳುತ್ತಾರೆ. ನಿಯಮ 267 ಚರ್ಚೆ ಗಂಟೆಗಟ್ಟಲೆ ನಡೆಯಬಹುದು. ಮತದಾನವೂ ಆಗಬಹುದು. ಈ ನಿಯಮ ಅದು ನಮಗೆ ಬೇಕು. ಇದನ್ನೂ ಓದಿ: ಜ್ಞಾನವ್ಯಾಪಿ ಮಸೀದಿ ಸರ್ವೆಗೆ ತಾತ್ಕಾಲಿಕ ತಡೆ ನೀಡಿದ ಸುಪ್ರೀಂಕೋರ್ಟ್

ಅದಕ್ಕೂ ಮೊದಲು ಪ್ರಧಾನಿಯವರಿಂದ ವಿವರವಾದ ಹೇಳಿಕೆ ನೀಡಬೇಕು. ಬಳಿಕ 267ರ ಅಡಿಯಲ್ಲಿ ಸಂಸತ್ತಿನಲ್ಲಿ ಚರ್ಚೆಯಾಗಬೇಕು. ಈ ನಿಟ್ಟಿನಲ್ಲಿ ನಾವು ರಾಜ್ಯಸಭಾ ಅಧ್ಯಕ್ಷರು ಮತ್ತು ಲೋಕಸಭೆಯ ಸ್ಪೀಕರ್‌ಗೆ ವಿನಂತಿಸುತ್ತೇವೆ. ತಮ್ಮ ಮೇಲಿನ ಸಾಂವಿಧಾನಿಕ ಜವಾಬ್ದಾರಿ ಮತ್ತು ಹೊಣೆಗಾರಿಕೆಯಿಂದ ಮೋದಿ ಸರ್ಕಾರ ಮತ್ತು ಬಿಜೆಪಿ ಓಡಿಹೋಗುವಂತಿಲ್ಲ ಎಂದು ಖರ್ಗೆ ಕುಟುಕಿದರು. ಇದನ್ನೂ ಓದಿ: ಟೊಮೆಟೋ ತಿನ್ನೋದನ್ನೇ ನಿಲ್ಲಿಸಿದ್ರೆ ಬೆಲೆ ಕಡಿಮೆಯಾಗುತ್ತೆ – ಯುಪಿ ಸಚಿವೆ ಸಲಹೆ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article