ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯವರ ಸವಾಲನ್ನು ನಾನು ಸ್ವೀಕರಿಸುತ್ತೇನೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಈಗ ತಮ್ಮ ಫಿಟ್ನೆಸ್ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ಸವಾಲನ್ನು ಸ್ವೀಕರಿಸಿದ ಮೋದಿಯವರು ಸಿಎಂ ಕುಮಾರಸ್ವಾಮಿ ಹಾಗೂ ಅಂತರಾಷ್ಟ್ರೀಯ ಟೆಬಲ್ ಟೆನ್ನಿಸ್ ಆಟಗಾರ್ತಿ ಮಣಿಕ ಬಾತ್ರಾ ಅವರಿಗೆ ಚಾಲೆಂಜ್ ನೀಡಿದ್ದಾರೆ.
ಕೇಂದ್ರ ಯುವಜನ ಮತ್ತು ಮತ್ತು ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ಮೇ 22ರಂದು, “ನಾನು ಫಿಟ್ ಆದ್ರೆ ದೇಶ ಫಿಟ್ (#HumFitTohIndiaFit) ನೀವು ನಿಮ್ಮ ಫಿಟ್ನೆಸ್ ಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋವನ್ನು ಶೇರ್ ಮಾಡಿ” ಎಂದು ಕೊಹ್ಲಿ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ನಟ ಹೃತಿಕ್ ರೋಷನ್ ಅವರಿಗೆ ಫಿಟ್ ನೆಸ್ ಚಾಲೆಂಜ್ ಹಾಕಿ ಟ್ವೀಟ್ ಮಾಡಿದ್ದರು.
Advertisement
ಈ ಟ್ವೀಟ್ ಗೆ ವಿರಾಟ್ ಕೊಹ್ಲಿ ವಿಡಿಯೋವನ್ನು ಅಪ್ಲೋಡ್ ಮಾಡುವ ಮೂಲಕ ಚಾಲೆಂಜ್ ಸ್ವೀಕರಿಸಿದ್ದರು. ಅಷ್ಟೇ ಅಲ್ಲದೇ ಪ್ರಧಾನಿ ಮೋದಿ, ಪತ್ನಿ ಅನುಷ್ಕಾ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಅವರಿಗೆ ಚಾಲೆಂಜ್ ಹಾಕಿ ಟ್ವೀಟ್ ಮಾಡಿದ್ದರು.
Advertisement
Here are moments from my morning exercises. Apart from Yoga, I walk on a track inspired by the Panchtatvas or 5 elements of nature – Prithvi, Jal, Agni, Vayu, Aakash. This is extremely refreshing and rejuvenating. I also practice
breathing exercises. #HumFitTohIndiaFit pic.twitter.com/km3345GuV2
— Narendra Modi (@narendramodi) June 13, 2018
Advertisement
ಇದೀಗ ಮೋದಿಯವರು ತಮ್ಮ ಫಿಟ್ನೆಸ್ ವಿಡಿಯೋ ಟ್ವಿಟ್ಟರಿನಲ್ಲಿ ಅಪ್ಲೋಡ್ ಮಾಡಿದ್ದಾರೆ. ಮೋದಿ ವಿಡಿಯೋ ಹಾಕಿ ಅದ್ದಕ್ಕೆ, “ಇದು ನನ್ನ ಬೆಳಗ್ಗಿನ ವ್ಯಾಯಾಮಗಳು. ಯೋಗ ಹೊರತಾಗಿ ಪಂಚಭೂತಗಳಾದ ಪೃಥ್ವಿ, ಜಲ, ಅಗ್ನಿ, ವಾಯು ಹಾಗೂ ಆಕಾಶದಿಂದ ಪ್ರೇರಣೆಗೊಂಡು ನಾನು ಟ್ರ್ಯಾಕ್‍ಗಳ ಮೇಲೆ ನಡೆಯುತ್ತೇನೆ. ಇದರ ಜೊತೆ ನಾನು ಉಸಿರಾಟದ ವ್ಯಾಯಾಮವನ್ನು ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
Advertisement
ವಿಡಿಯೋ ಅಪ್ಲೋಡ್ ಮಾಡಿದ ನಂತರ ಮೋದಿ ಅವರು ಕರ್ನಾಟಕ ಮುಖ್ಯಮಂತ್ರಿ ಶ್ರೀ ಹೆಚ್.ಡಿ ಕುಮಾರಸ್ವಾಮಿ ಹಾಗೂ ಭಾರತದ ಹೆಮ್ಮೆಯ ಅಂತರಾಷ್ಟ್ರೀಯ ಟೇಬಲ್ ಟೆನ್ನಿಸ್ ಆಟಗಾರ್ತಿ ಮಣಿಕಾ ಬಾತ್ರಾ ಅವರಿಗೆ ಈ ಚಾಲೆಂಜ್ ನೀಡಿದ್ದಾರೆ.
ನಾನು ಪ್ರತಿಯೊಬ್ಬ ಭಾರತಿಯರಿಗೆ ತಮ್ಮ ಫಿಟ್ನೆಸ್ ಕಡೆ ಗಮನ ಕೊಡಬೇಕು ಎಂದು ಕೇಳಿಕೊಳ್ಳುತ್ತೇನೆ. ನಿಮಗೆ ಯಾವ ವ್ಯಾಯಾಮ ಸುಲಭವಾಗುತ್ತದೋ ಆ ವ್ಯಾಯಾಮವನ್ನು ಮಾಡಿ. ಆಗ ನೀವು ನಿಮ್ಮ ಜೀವನದಲ್ಲಿ ಒಳ್ಳೆಯ ಬದಲಾವಣೆಗಳನ್ನು ಕಾಣಬಹುದು ಎಂದು ಪ್ರಧಾನಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.
I am delighted to nominate the following for the #FitnessChallenge:
Karnataka’s CM Shri @hd_kumaraswamy.
India’s pride and among the highest medal winners for India in the 2018 CWG, @manikabatra_TT.
The entire fraternity of brave IPS officers, especially those above 40.
— Narendra Modi (@narendramodi) June 13, 2018
I appeal to every Indian to devote some part of the day towards fitness.
Practice any set of exercises you are comfortable with and you will see the positive difference it will make in your life! #FitnessChallenge #HumFitTohIndiaFit https://t.co/yuHN6871pk
— Narendra Modi (@narendramodi) June 13, 2018
#HumFitTohIndiaFit ????????????
Post pictures and videos of how you keep yourself fit and send a #FitnessChallenge to your friends on social media. Here's my video ????and I challenge @iHrithik, @imVkohli & @NSaina to join in???? pic.twitter.com/pYhRY1lNEm
— RajyavardhanRathore (@Ra_THORe) May 22, 2018
I have accepted the #FitnessChallenge by @ra_THORe sir. Now I would like to challenge my wife @AnushkaSharma , our PM @narendramodi ji and @msdhoni Bhai for the same. ???? #HumFitTohIndiaFit #ComeOutAndPlay pic.twitter.com/e9BAToE6bg
— Virat Kohli (@imVkohli) May 23, 2018
Challenge accepted, Virat! I will be sharing my own #FitnessChallenge video soon. @imVkohli #HumFitTohIndiaFit https://t.co/qdc1JabCYb
— Narendra Modi (@narendramodi) May 24, 2018