ಗದಗ: ರಾಜ್ಯ ಬಿಜೆಪಿ (BJP) ಮುಖಂಡರ ಮುಖ ನೋಡಲು ಮೋದಿಯವರಿಗೆ (Narendra Modi) ಅಸಡ್ಡೆಯಾಗಿದೆ. ಮೋದಿ ಬೆಂಗಳೂರಿಗೆ (Bengaluru) ಬಂದರೆ ಅವರತ್ತ ನೋಡಲೇ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ವ್ಯಂಗ್ಯವಾಡಿದ್ದಾರೆ.
ಗದಗ (Gadag) ಜಿಮ್ಸ್ ಆಸ್ಪತ್ರೆಯ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿಯವರು ನೋಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷರು, ಮಾಜಿ ಸಚಿವರು ಬೀದಿಯಲ್ಲಿ ನಿಂತಿದ್ದರು. ಆದರೆ ಅವರು ಇವರನ್ನು ತಿರುಗಿಯೂ ನೋಡಲಿಲ್ಲ. ಇವರಿಗಾದರೂ ಸ್ವಾಭಿಮಾನ ಇರಬೇಕಲ್ವಾ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಶಿವರಾಮ್ ಹೆಬ್ಬಾರ್ ಪಕ್ಷಕ್ಕೆ ಬೇಡವೇ ಬೇಡ- ಯಲ್ಲಾಪುರ ಕಾಂಗ್ರೆಸ್ ಕಾರ್ಯಕರ್ತರು
Advertisement
Advertisement
ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಯಾರು ಬರಬೇಡಿ ಅಂತಾ ಅವರೇ ಹೇಳಿದ್ದರು. ಅದಕ್ಕೆ ನಮ್ಮವರು ಯಾರೂ ಹೋಗಿರಲಿಲ್ಲ. ಬಿಜೆಪಿಯವರು ಹೋಗಿದ್ದರು. ಆದರೆ ಮೋದಿ ಅವರನ್ನು ಕಣ್ಣು ತಿರುಗಿಸಿಯೂ ನೋಡಿಲ್ಲ. ಮೋದಿಯವರನ್ನು ಕರೆಸಿ ಬೀದಿ ಬೀದಿ ಓಡಾಡಿಸಿ ಮಾನ, ಮರ್ಯಾದೆ ತೆಗೆದರು. ಮೋದಿ ಹೆಸರಲ್ಲಿ ವೋಟ್ ಕೇಳಿದರು. ಬಂದಿದ್ದು 60 ಸೀಟ್ ಮಾತ್ರ. ಮೋದಿ ಹೆಸರು ಹಾಳು ಮಾಡಿದ್ದಕ್ಕೆ ಅವರು ಇವರನ್ನು ನೋಡಲಿಲ್ಲ ಎಂದರು. ಇದನ್ನೂ ಓದಿ: ರಾಷ್ಟ್ರೀಯ ಸಂವಹನ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷರಾಗಿ ಪ್ರೊ. ಬಿ.ಕೆ. ರವಿ ಆಯ್ಕೆ
Advertisement
ಕೋವಿಡ್ ಅಕ್ರಮ ತನಿಖೆ ಬಗ್ಗೆ, ಆಯೋಗ ರಚನೆ ಬಗ್ಗೆ ಗುಡುಗಿದ ಅವರು, ಸಾರ್ವಜನಿಕ ಲೆಕ್ಕ ಪತ್ರ ವರದಿಯನ್ನು ಹಿಂದಿನ ಸರ್ಕಾರ ಸದನಕ್ಕೆ ಒಪ್ಪಿಸಿರಲಿಲ್ಲ. ವರದಿ ಆಧಾರದಲ್ಲಿ ಹಾಗೂ ಬೇರೆ ಬೇರೆ ಮಾಹಿತಿ ಆಧಾರದ ಮೇಲೆ ತನಿಖೆ ಆಗಬೇಕು ಎಂದು ಕೋರಿದ್ದೆವು. ನಿವೃತ್ತ ಹೈಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆಗೆ ಸರ್ಕಾರ ಆದೇಶಿಸಿದೆ ಎಂದು ಹೇಳಿದರು. ಇದನ್ನೂ ಓದಿ: ರಾಷ್ಟ್ರ ಲಾಂಛನಕ್ಕೆ ಅಗೌರವ – ಕೊಳಚೆ ಪ್ರದೇಶದಲ್ಲಿ ಅನಾಥವಾಗಿ ಬಿದ್ದಿರುವ ಅಶೋಕ ಚಕ್ರ
Advertisement
ನಾವು ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಈ ಹಿಂದೆ ಆರೋಪ ಮಾಡಿರುವ ಪ್ರಕಾರ ಈಗ ತನಿಖೆ ನಡೆಸಿದ್ದೇವೆ. ಅವರಿಗೆ ಭಯ ಏಕೆ? ತನಿಖೆಯನ್ನು ವಿರೋಧ ಪಕ್ಷಗಳು ಸ್ವಾಗತಿಸಬೇಕು. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆಯಾಗಬೇಕು. ಆರೋಪ ಮಾಡಿ ಸುಮ್ಮನಾಗುವುದಲ್ಲ. ಹೇಳಿದಂತೆ ತನಿಖೆ ಮಾಡಿಸುತ್ತಿದ್ದೇವೆ. ಅದೇ ರೀತಿ 40% ಬಿಬಿಎಂಪಿ ಹಗರಣಗಳ ಬಗ್ಗೆಯೂ ತನಿಖೆ ಮಾಡುತ್ತಿದ್ದೇವೆ ಎಂದರು. ಈ ವೇಳೆ ಕಾಂಗ್ರೆಸ್‌ನ ಅನೇಕ ಮುಖಂಡರು ಉಪಸ್ಥಿತರಿದ್ದರು. ಇದನ್ನೂ ಓದಿ: ಸ್ವಪಕ್ಷೀಯರ ವಿರುದ್ಧ ರೇಣುಕಾಚಾರ್ಯ ಗರಂ- ಕಾಂಗ್ರೆಸ್ ಜೊತೆ ಸಭೆ ಮಾಡಿದ್ರಾ?
Web Stories