ನವದೆಹಲಿ: ನೂತನವಾಗಿ ಪ್ರಮಾಣವಚನ ಸ್ವೀಕರಿಸಿದ ರಾಜ್ಯದ ಮುಖ್ಯಮಂತ್ರಿ ಮತ್ತು ಉಪ ಮುಖ್ಯ ಮಂತ್ರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿದ ಮೋದಿ ಅವರು, ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಪರಮೇಶ್ವರ್ ಅವರಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
Advertisement
ರಾಜ್ಯದ ಉಪಮುಖ್ಯಮಂತ್ರಿಯಾಗಿ ಮಹತ್ತರ ಜವಾಬ್ದಾರಿ ನನ್ನದಾಗಿದೆ. ಪಕ್ಷದ ಸಿದ್ಧಾಂತಕ್ಕೆ ತಲೆಬಾಗಿ ಮತ್ತು ನಮ್ಮ ಹೆಮ್ಮೆಯ ನಾಯಕರು ಹಾಕಿಕೊಟ್ಟಿರುವ ಪಥದಲ್ಲಿ, ಮುಂದಿನ ದಿನಗಳಲ್ಲಿ ಜನರ ಹಿತಕ್ಕಾಗಿ ಮತ್ತು ಏಳಿಗೆಗಾಗು ಶ್ರಮಿಸುತ್ತೇನೆ. ಹಾರೈಸಿ ಆಶೀರ್ವದಿಸಿದ ಎಲ್ಲಾ ಮುಖಂಡರು ಮತ್ತು ಹಿತೈಷಿಗಳಿಗೆ ನನ್ನ ಕೃತಜ್ಞತೆಗಳು ಎಂದು ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ.
Advertisement
ಕುಮಾರಸ್ವಾಮಿ ಅವರು ದೇವರು ಮತ್ತು ರಾಜ್ಯದ ಜನತೆ ಹೆಸರಲ್ಲೂ ಪರಮೇಶ್ವರ್ ಅವರು ದೇವರ ಹೆಸರಲ್ಲೂ ಪ್ರತಿಜ್ಞಾವಿಧಿ ಪಡೆದರು. ಈ ವೇಳೆ, ಅಭಿಮಾನಿಗಳು, ಕಾರ್ಯಕರ್ತರ ಶಿಳ್ಳೆ, ಚಪ್ಪಾಳೆ, ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಬಿಜೆಪಿಯ ಬಹುಮತ ಹೈಡ್ರಾಮಾ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಈ ಮೂಲಕ ಅಸ್ತಿತ್ವಕ್ಕೆ ಬಂದಿದೆ. 12 ವರ್ಷಗಳ ಬಳಿಕ ಕುಮಾರಸ್ವಾಮಿ ಇದೀಗ ಮತ್ತೆ ಸಿಎಂ ಕುರ್ಚಿ ಮೇಲೆ ಆಸೀನರಾಗಿದ್ದಾರೆ.
Advertisement
I congratulate Shri @hd_kumaraswamy Ji and @DrParameshwara Ji on taking oath as Chief Minister and Deputy Chief Minister of Karnataka. My best wishes for their tenure ahead.
— Narendra Modi (@narendramodi) May 23, 2018
Advertisement