DistrictsKarnatakaKolarLatestMain Post

ಮೋದಿ ಹುಟ್ಟುಹಬ್ಬ- 25ಕ್ಕೂ ಹೆಚ್ಚು ಮಕ್ಕಳಿಗೆ ಚಿನ್ನದ ಉಂಗುರ ಉಡುಗೊರೆ ನೀಡಿದ ಮುಸ್ಲಿಂ ಮುಖಂಡ

ಕೋಲಾರ: ಪ್ರಧಾನಿ ನರೇಂದ್ರ ಮೋದಿ(Narendra Modi) ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಅದರಂತೆ ಕೋಲಾರದ ಮಾಲೂರಿನಲ್ಲಿ ಶನಿವಾರ ಬಿಜೆಪಿ(BJP) ಕಾರ್ಯಕರ್ತರು ತಮಿಳುನಾಡು ಮಾದರಿಯಲ್ಲಿ ಇಂದು ಜನಿಸಿದ ನವಜಾತ ಮಕ್ಕಳಿಗೆ ಚಿನ್ನದ ಉಂಗುರಗಳನ್ನು(Gold Ring) ವಿತರಣೆ ಮಾಡಿ ಮೋದಿ ಹುಟ್ಟು ಹಬ್ಬವನ್ನ ವಿಭಿನ್ನವಾಗಿ ಆಚರಣೆ ಮಾಡಿದರು.

ಈ ದಿನ ಹುಟ್ಟಿದ ಮಾಲೂರು ತಾಲೂಕಿನ ಸುಮಾರು 25ಕ್ಕೂ ನವಜಾತ ಶಿಶುಗಳಿಗೆ(Baby) ಚಿನ್ನದುಂಗುರ ವಿತರಣೆ ಮಾಡುವ ಮೂಲಕ ಗಮನ ಸೆಳೆದರು. ಮಾಲೂರು ತಾಲೂಕು ಸರ್ಕಾರಿ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ(Hospital) ಹುಟ್ಟಿದ ಮಕ್ಕಳಿಗೆ ವಕ್ಫ್ ಬೋರ್ಡ್ ವೈಸ್ ಚೇರ್ಮನ್ ಅಜ್ಗರ್ ಹಾಗೂ ಮಾಜಿ ಶಾಸಕ ಮಂಜುನಾಥ್ ಗೌಡ ಅಭಿಮಾನಿ ಬಳಗದ ಚಂದ್ರಶೇಖರ್ ಚಿನ್ನದ ಉಂಗುರ ಉಡುಗೊರೆ ನೀಡಿದರು. ಮಾಲೂರು ಸರ್ಕಾರಿ ಆಸ್ಪತ್ರೆ ಸೇರಿ ಖಾಸಗಿ ಆಸ್ಪತ್ರೆಯಲ್ಲಿ ಇಂದು ಜನಿಸಿದ 25ಕ್ಕೂ ಹೆಚ್ಚು ಮಕ್ಕಳಿಗೆ ಉಂಗುರ ಉಡುಗೊರೆ(Gift) ನೀಡಿದರು. ಇದನ್ನೂ ಓದಿ: ಮೋದಿ ಕಾರ್ಯಕ್ರಮಕ್ಕೆ ಹೋಗಿಬರುತ್ತಿದ್ದ ಬಸ್ ಅಪಘಾತ – 20 ಮಹಿಳೆಯರಿಗೆ ಗಾಯ

ಇನ್ನೂ ಶನಿವಾರ ಜನಿಸಿರುವ ಮಕ್ಕಳಿಗೂ ಉಂಗುರ ನೀಡುವ ಯೋಜನೆ ಹಮ್ಮಿಕೊಂಡಿದರು. ಖುದ್ದು ಬಿಜೆಪಿ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಬಾಣಂತಿಯರಿಗೆ ಉಂಗುರ ನೀಡಿ, ಹಣ್ಣು ಹಂಪಲು ನೀಡಿ ವಿಶೇಷವಾಗಿ ಮೋದಿ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು. ಆ ಮೂಲಕ ತಮಿಳುನಾಡು ಮಾದರಿಯಲ್ಲಿ ಕೋಲಾರದ ಮಾಲೂರಿನಲ್ಲೂ ಬಿಜೆಪಿ ಮುಖಂಡರು ಇಂದು ಜನಿಸಿದ ಮಕ್ಕಳಿಗೆ ಚಿನ್ನದ ಉಂಗುರ ನೀಡಿ ಗಮನ ಸೆಳೆದಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: ಈ ಬಾರಿ ಅಮ್ಮನ ಬಳಿ ಹೋಗಿ ಆಶೀರ್ವಾದ ಪಡೆಯಲು ಸಾಧ್ಯವಾಗಿಲ್ಲ: ಮೋದಿ

Live Tv

Leave a Reply

Your email address will not be published.

Back to top button