ಕೊಪ್ಪಳ: 68ರ ವಯಸ್ಸಿನಲ್ಲೂ ಯುವಕರಂತೆ ಕೆಲಸ ಮಾಡುವ ಜೊತೆಗೆ ಸಕಲಕಲಾವಲ್ಲಭ. ಇಳಿವಯಸ್ಸಲ್ಲೂ ಯುವಕರಂತೆ ಕೆಲಸ, ನರೇಗಾ ಕೆಲಸ ಮಾಡುವ ಈ ವೃದ್ಧ (Old Man) ಕೂಲಿಕಾರನ ಸಾಹಸ ನೋಡಿದರೆ ಎಲ್ಲರೂ ಅಚ್ಚರಿ ಪಡುತ್ತಾರೆ.
Advertisement
ಕೊಪ್ಪಳದ (Koppala) ಗಂಗಾವತಿ ತಾಲೂಕಿನ ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಲಿಕಾರರಾದ (Laborer) ಯಲಪ್ಪ ಹೂಗಾರ (Yellappa Hugar) ಅವರಿಗೆ ವಯಸ್ಸು 68. ಆದರೆ ಅವರ ಕೆಲಸ, ಕ್ರಿಯಾಶೀಲತೆ ಯುವಕರಂತೆ ಇದೆ. 7 ಮಕ್ಕಳಿರೋ ಯಲ್ಲಪ್ಪ ಹೂಗಾರ ಅವರಿಗೆ ತಾವೇ ಸರಿಸಾಠಿಯಾಗಿದ್ದಾರೆ. ನರೇಗಾ ಕೂಲಿಕಾರರಿಗೆ ಬೇಸರವಾದಾಗ ಯಲ್ಲಪ್ಪ ಅವರು ಅಂತಿಪದ ಹಾಡಿ ಮನರಂಜಿಸುತ್ತಾರೆ. ಸಕಲಕಲಾವಲ್ಲಭರಾಗಿರುವ ಇವರು ಗುದ್ದಲಿ, ಸಲಾಕೆ ಹಿಡಿದು ಕೆಲಸ ಮಾಡುತ್ತಾರೆ. ಇವರು ಕೆಲಸಕ್ಕೂ ಸೈ, ಹಾಡಿಗೂ ಸೈ ಎನ್ನುತ್ತಾರೆ.
Advertisement
Advertisement
68 ವಯಸ್ಸಾದರೂ ತಲೆ ಕೆಳಗೆ, ಕಾಲು ಮೇಲೆ ಮಾಡಿ ನಿಮಿಷಕ್ಕೂ ಹೆಚ್ಚು ಕಾಲ ನಿಂತು ಯುವಕರನ್ನೇ ನಾಚಿಸುತ್ತಾರೆ ಯಲ್ಲಪ್ಪ. ನರೇಗಾ ಕಾಮಗಾರಿ ಸ್ಥಳದಲ್ಲಿ ತಲೆ ಕೆಳಗೆ ಮಾಡಿ, ಕಾಲು ಮೇಲೆ ಮಾಡಿದ ಸಾಹಸ ನೋಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ರವಿಶಾಸ್ತ್ರಿ ಹಾಗೂ ಎಲ್ಲ ಕೂಲಿಕಾರರು ಅವರಿಗೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ.
Advertisement
ಹೇರೂರು ಗ್ರಾಮದಲ್ಲಿ ನಿತ್ಯ ಕೂಲಿ ಕೆಲಸ ಮಾಡುತ್ತಾ, ಕೆಲಸ ಇಲ್ಲದಿದ್ದಾಗ ನರೇಗಾ ಕೆಲಸಕ್ಕೆ ಬಂದು ಎಲ್ಲರಂತೆ ಕೆಲಸ ಮಾಡುತ್ತಾ ಸ್ವಾವಲಂಬಿ ಬದುಕು ಕಟ್ಟಿಕೊಂಡು ತನ್ನ ವಯಸ್ಸಿಗೆ ಸವಾಲು ಎಸೆದಿದ್ದಾರೆ ಯಲ್ಲಪ್ಪ ಹೂಗಾರ. ಇದನ್ನೂ ಓದಿ: ಬಿಜೆಪಿಯವರು ಯಾರೂ ಮನೆಯಲ್ಲಿ ಒಂದು ಆಕಳು ಕಟ್ಟಿಲ್ಲ, ಮಾತಾಡ್ತಾರೆ ಅಷ್ಟೇ: ವಿನಯ್ ಕುಲಕರ್ಣಿ
ಇಳಿವಯಸ್ಸಿನಲ್ಲೂ ಕುಗ್ಗದ ಉತ್ಸಾಹ:
‘ನನಗೆ 68 ವಯಸ್ಸು, ನಿತ್ಯ ದುಡಿಯುವೆ, ಊರಲ್ಲಿ ಕೆಲಸ ಇಲ್ಲದಿದ್ದಾಗ ನರೇಗಾ ಕೆಲಸ ಮಾಡುತ್ತಾ ಸ್ವಾವಲಂಬಿ ಬದುಕು ನಡೆಸುತ್ತಿರುವೆ. ಆರೋಗ್ಯವೇ ಮಹಾಭಾಗ್ಯ ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳಬೇಕು. ನಾನು ಈ ವಯಸ್ಸಲ್ಲೂ ಅರ್ಧ ಗಂಟೆಯಲ್ಲಿ 10ಕ್ಕೂ ಹೆಚ್ಚು ತೆಂಗಿನ ಮರ ಏರಿ ಇಳಿಯಬಲ್ಲೆ. ನಿಮಿಷಕ್ಕೂ ಹೆಚ್ಚು ಕಾಲ ತಲೆ ಕೆಳಗೆ, ಕಾಲು ಮೇಲೆ ಮಾಡಿ ನಿಲ್ಲಬಲ್ಲೆ ಎನ್ನುತ್ತಾರೆ ಯಲ್ಲಪ್ಪ.
ಯಲ್ಲಪ್ಪ ಅವರ ಸಾಹಸ ಹಾಗೂ ಸ್ವಾವಲಂಬಿ ಜೀವನಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಹಾಂತಗೌಡ ಪಾಟೀಲ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೇರೂರು ಗ್ರಾಪಂ ನರೇಗಾ ಕೂಲಿಕಾರರಾದ ಯಲ್ಲಪ್ಪ ಹೂಗಾರ ಅವರು ಸದ್ಯ ನಾಗಲಾಪುರ ಕೆರೆ ಹೂಳೆತ್ತುವ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಕುಸಿದೇ ಬಿಡ್ತು 1,700 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಸೇತುವೆ