ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಹಾಲಿ ಶಾಸಕರುಗಳ ವಾಕ್ ಸಮರ ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಿದೆ. ಕೆ.ಆರ್ ಪೇಟೆ ಶಾಸಕ ನಾರಾಯಣಗೌಡ ಮತ್ತು ಮೇಲುಕೋಟೆ ಶಾಸಕ ಪುಟ್ಟರಾಜು ಅವರು ಒಬ್ಬರಿಗೋಬ್ಬರ ಮೇಲೆ ಆರೋಪ ಪ್ರತ್ಯಾರೋಪ ಮಾಡುವ ಮೂಲಕ ವಾಕ್ ಸಮರವನ್ನು ಮುಂದುವರೆಸುತ್ತಿದ್ದಾರೆ.
ಈ ಹಿಂದೆ ಇಬ್ಬರೂ ಸಹ ಒಂದಲ್ಲಾ ಒಂದು ವಿಷಯಗಳನ್ನು ಇಟ್ಟುಕೊಂಡು ವಾಕ್ ಸಮರವನ್ನು ಆರಂಭಿಸಿದ್ದರು. ಈ ವೇಳೆ ಮಾಜಿ ಸಚಿವ ಪುಟ್ಟರಾಜು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‍ನಿಂದ ನಾರಾಯಣಗೌಡಗೆ ಬಿ ಫಾರಂ ಸಿಗಲು ನಾನು ಕಾರಣ, ಕುಮಾರಸ್ವಾಮಿ ಅವರನ್ನು ಒಪ್ಪಿಸಿ ನಾನು ಟಿಕೆಟ್ ಕೊಡಿಸಿದ್ದೆ. ಈಗ ನಾರಾಯಣಗೌಡ ಹೀಗೆ ಮಾತಾಡುತ್ತಾನೆ ಎಂದು ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ನಾರಾಯಣಗೌಡ ಅವರು ಕೆ.ಆರ್ ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಪುಟ್ಟರಾಜು ಅವರಿಗೆ ತಿರುಗೇಟು ನೀಡಿದ್ದಾರೆ.
Advertisement
Advertisement
ನನಗೆ ಪುಟ್ಟರಾಜು ಅವರು ಬಿ ಫಾರಂ, ಸಿ ಫಾರಂ ಕೊಡಿಸಿದ್ದು ನಾನು ಅಂತ ಹೇಳುತ್ತಾರೆ. ಆದರೆ ಅವರು ಹಳೆಯದನ್ನು ಮರೆಯಬಾರದು. ಅವರು ಎಂಪಿ ಚುನಾವಣೆಯಲ್ಲಿ ನಿಂತಾಗ ಯಾರು ಬಿ ಫಾರಂ ತಂದಿದ್ದರು ಚುನಾವಣೆಯ ಉದ್ದಕ್ಕೂ ಅವರೊಂದಿಗೆ ಜಿಲ್ಲೆಯಲ್ಲಿ ಓಡಾಡಿದ್ದು ಯಾರೆಂದು ಮರೆಯಬಾರದು ಎಂದರು. ಈ ಮೂಲಕ ಪುಟ್ಟರಾಜು ಅವರಿಗೆ ಎಂಪಿ ಟಿಕೆಟ್ ಸಿಗಲು ನಾನು ಕಾರಣ, ಚುನಾವಣೆಯಲ್ಲಿ ಗೆಲ್ಲಲು ನಾನು ಶ್ರಮ ಹಾಕಿದ್ದೇನೆ ಎಂದು ಪರೋಕ್ಷವಾಗಿ ನಾರಾಯಣಗೌಡರು ಪ್ರತ್ಯುತ್ತರ ನೀಡಿದರು.
Advertisement
Advertisement
ಈ ಹೇಳಿಕೆಯ ಮೂಲಕ ಇಷ್ಟು ದಿನಗಳ ಕಾಲ ನಡೆಯುತ್ತಿದ್ದ ವಾಕ್ ಸಮರಕ್ಕೆ ಮತ್ತಷ್ಟು ಪುಷ್ಠಿ ಬಂದಂತೆ ಆಗಿದೆ. ನಾರಾಯಣಗೌಡರ ಈ ಹೇಳಿಕೆಗೆ ಪುಟ್ಟರಾಜು ಅವರು ಯಾವ ರೀತಿ ಕೌಂಟರ್ ಕೊಡುತ್ತಾರೆ ಎಂದು ಕಾದುನೋಡಬೇಕಿದೆ.