ಲಂಡನ್: ಬೋರಿಸ್ ಜಾನ್ಸನ್ ಪ್ರಧಾನಿ ಪಟ್ಟದಿಂದ ಕೆಳಗಿಳಿಯುವ ಎಲ್ಲಾ ಸಾಧ್ಯತೆಗಳಿದ್ದು, ಒಂದು ವೇಳೆ ಬೋರಿಸ್ ಜಾನ್ಸನ್ ಅಧಿಕಾರದಿಂದ ಕೆಳಗಿಳಿದರೆ ಮುಂದಿನ ಬ್ರಿಟನ್ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಾಕ್ ಪಟ್ಟವನ್ನು ಅಲಂಕರಿಸುವ ಸಾಧ್ಯತೆಯಿದೆ.
ಕೋವಿಡ್ ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಮದ್ಯದ ಪಾರ್ಟಿ ಮಾಡಿರುವ ವಿವಾದದಲ್ಲಿ ಸಿಲುಕಿರುವ ಪ್ರಧಾನಿ ಬೋರಿಸ್ ಜಾನ್ಸನ್‌ಗೆ ಸ್ವಪಕ್ಷದಲ್ಲೇ ರಾಜಿನಾಮೆ ನೀಡುವಂತೆ ಒತ್ತಡ ನಿರ್ಮಾಣವಾಗಿದೆ. 2020ರ ಮೇ ತಿಂಗಳಿನಲ್ಲಿ ಇಂತಹ ವಿವಾದಕ್ಕೆ ಸಿಲುಕಿದ್ದ ಪ್ರಧಾನಿ ಬಳಿಕವೂ 2021ರಲ್ಲಿ ಬ್ರಿಟನ್ ರಾಜಕುಮಾರ ಫಿಲಿಪ್ (ರಾಣಿ ಎಲಿಜಬೆತ್‍ರ ಪತಿ)ರ ಅಂತ್ಯಕ್ರಿಯೆಗೂ ಮುನ್ನ ಮದ್ಯದ ಪಾರ್ಟಿ ಮಾಡಿರುವುದಾಗಿ ಆರೋಪ ಈಗ ಕೇಳಿ ಬಂದಿದೆ. ಇದನ್ನೂ ಓದಿ: ಎಸ್‌ಪಿ ಕಚೇರಿಯಲ್ಲಿ ಕೋವಿಡ್ ರೂಲ್ಸ್ ಬ್ರೇಕ್ – 2,500 ಮಂದಿ ವಿರುದ್ಧ ಎಫ್‌ಐಆರ್
Advertisement
Advertisement
ಸದ್ಯ ಬೋರಿಸ್ ಜಾನ್ಸನ್‌ಗೆ ಅಧಿಕಾರದಿಂದ ಕೆಳಗೆ ಇಳಿಯುವಂತೆ ಹಲವು ಕಡೆಗಳಿಂದ ಒತ್ತಡ ಇರುವಾಗ ಭಾರತೀಯ ರಿಷಿ ಸುನಾಕ್ ಮುಂದಿನ ಪ್ರಧಾನಿಯಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಮುಂದಿನ ಪ್ರಧಾನಿಯಾಗುವವರ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿ ರಿಷಿಯವರ ಹೆಸರು ಇದೆ ಎಂದು ವರದಿಯಾಗಿದೆ.
Advertisement
ಯಾರು ಈ ರಿಷಿ ಸುನಾಕ್?
41 ವರ್ಷದ ರಿಷಿ ಸುನಾಕ್ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ದಂಪತಿಯ ಅಳಿಯ. ಎನ್‍ಆರ್‍ಎನ್ ಅವರ ಪುತ್ರಿ ಅಕ್ಷತಾ ಮೂರ್ತಿಯವರನ್ನು ರಿಷಿ ವಿವಾಹವಾಗಿದ್ದಾರೆ. ಸದ್ಯ ಇವರು ಬ್ರಿಟನ್‍ನ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಪ್ರಭಾವಿ ಮುಖಂಡರಾಗಿದ್ದಾರೆ. ಬ್ರಿಟನ್ ಸರ್ಕಾರದಲ್ಲಿ ಪ್ರಧಾನಿ ಬಿಟ್ಟರೆ ಅತ್ಯಂತ ಪ್ರಭಾವಿ ನಾಯಕ ಎಂದು ಹೇಳಲಾಗುತ್ತದೆ. ಇದನ್ನೂ ಓದಿ: ಟೆಸ್ಲಾ ಕಾರು ಬಗ್ಗೆ ಅಪ್‍ಡೇಟ್ – ಮಸ್ಕ್ ಒತ್ತಡ ತಂತ್ರಗಳಿಗೆ ಬಗ್ಗಲ್ಲ ಎಂದ ಕೇಂದ್ರ
Advertisement
ರಿಷಿ ಸುನಾಕ್ ಒಂದುವೇಳೆ ಬ್ರಿಟನ್‍ನ ಪ್ರಧಾನಿಯಾದರೆ ಭಾರತೀಯ ಮೂಲದ ಮೊದಲ ಬ್ರಿಟನ್ ಪ್ರಧಾನಿ ಎಂಬ ಹೆಗ್ಗಳಿಕೆಯನ್ನೂ ಪಡೆಯಲಿದ್ದಾರೆ.